Header Ads Widget

ಸರ್ಚ್ ಕೂರ್ಗ್ ಮೀಡಿಯ

ಜ.11 ರಂದು ವಿದ್ಯುತ್ ವ್ಯತ್ಯಯ

ಜ.11 ರಂದು ವಿದ್ಯುತ್ ವ್ಯತ್ಯಯ


ಮಡಿಕೇರಿ ಜ.10: ಮಡಿಕೇರಿ 66/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೋಗುವ ಎಫ್1 ಕೋಟೆ ಮತ್ತು ಎಫ್ 5 ಜಿ.ಟಿ.ರೋಡ್ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುದರಿಂದ ಜನವರಿ, 11 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. 

ಆದ್ದರಿಂದ ಪೆನ್‍ಷನ್ ಲೇನ್, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಕೊಹಿನೂರು ರಸ್ತೆ, ಕೈಗಾರಿಕಾ ಬಡಾವಣೆ, ಚೈನ್ ಗೇಟ್, ಸುದರ್ಶನ ವೃತ್ತ, ಸಿದ್ದಾಪುರ ರಸ್ತೆ, ಜಿ.ಟಿ.ರಸ್ತೆ, ಜಯನಗರ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 

ಹಾಗೆಯೇ ಮೂರ್ನಾಡು 33/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೋಗುವ ಹೊದ್ದೂರು ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುದರಿಂದ ಜನವರಿ, 11 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. 

ಆದ್ದರಿಂದ ಕಬಡಗೇರಿ, ಹೊದ್ದೂರು, ಕುಂಬಳದಾಳು, ಅಯ್ಯಂಗೇರಿ, ಹಳೆತಾಲ್ಲೂಕು, ಚೂನಕೆರೆ, ನೆಲ್ಜಿ, ಎಮ್ಮೆಮಾಡು, ಬಲ್ಲಮಾವಟಿ, ಕೊಳಕೇರಿ, ಕುಂಜಿಲ, ಕಕ್ಕಬೆ, ಯುವಕಪಾಡಿ, ಪೆರೂರು ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳ್ಲಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,