Header Ads Widget

Responsive Advertisement

ರೈತರಿಗೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಶೇ.50 ರಂತೆ ಸಹಾಯಧನ


ರೈತರಿಗೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಶೇ.50 ರಂತೆ ಸಹಾಯಧನ 

ಮಡಿಕೇರಿ ಜೂ.10: ಪ್ರಸಕ್ತ(2022-23) ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ‘ಅಡಿಕೆ ಹಳದಿ ರೋಗಕ್ಕೆ ಪರ್ಯಾಯ ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹಧನ’ ಕಾರ್ಯಕ್ರಮದಡಿ ಇತರೆ ವಾಣಿಜ್ಯ ತೋಟಗಾರಿಕೆ ಬೆಳೆ ಬೆಳೆಯಲು ಪೆÇ್ರೀತ್ಸಾಹ ನೀಡಲಾಗುವುದು. 

ಈ ಕಾರ್ಯಕ್ರಮದಡಿ ಮಡಿಕೇರಿ ತಾಲ್ಲೂಕಿನ ಅಡಿಕೆ ಹಳದಿ ಎಲೆ ರೋಗ ಬಾಧಿತ ಪ್ರದೇಶಗಳಾದ ಸಂಪಾಜೆ, ಪೆರಾಜೆ, ಚೆಂಬು, ಕರಿಕೆ, ಗಾಳಿಬೀಡು ಮತ್ತು ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ರೈತರಿಗೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಶೇ.50 ರಂತೆ ಸಹಾಯಧನ ಲಭ್ಯವಿರುತ್ತದೆ. 

ಈ ಕಾರ್ಯಕ್ರಮದಡಿ ಒಂದು ಎಕರೆ ಪ್ರದೇಶ ವಿಸ್ತೀರ್ಣಕ್ಕೆ ಲಭ್ಯವಿರುವ ಸಹಾಯಧನ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳ ವಿವರ ಇಂತಿದೆ. ತೆಂಗು ರೂ. 12,085(50 ಗಿಡಗಳಿಗೆ), ತಾಳೆ ರೂ. 9012(58 ಗಿಡ), ಕೋಕೊ ರೂ. 16,002( 274 ಗಿಡ), ಗೇರು ರೂ. 16,965 (111 ಗಿಡ), ಅಡಿಕೆಯಲ್ಲಿ ಕಾಳುಮೆಣಸು ರೂ. 26,457(548 ಗಿಡ), ಅಂಗಾಂಶ ಬಾಳೆ ರೂ. 35207 (1000 ಗಿಡ), ರಾಂಬೂಟನ್ ರೂ. 13820(62 ಗಿಡ), ದಾಲ್ಚಿನ್ನಿ/ ಚಕ್ಕೆ ರೂ. 33902 (444 ಗಿಡ), ಲವಂಗ ರೂ. 9770 (111 ಗಿಡ), ಜಾಯಿಕಾಯಿ ರೂ. 8589 (160 ಗಿಡ), ಕಾಫಿ ಅರೆಬಿಕಾ ಎತ್ತರ ರೂ. 33335 (1200 ಗಿಡ), ಕಾಫಿ ಅರೆಬಿಕಾ ಗಿಡ ರೂ, 48526 (1777 ಗಿಡ), ಕಾಫಿ ರೋಬಸ್ಟ್ ರೂ.13461 (444 ಗಿಡ), ಸಿಟ್ರಸ್ ಜಾತಿಯ ಬೆಳೆಗಳು ರೂ. 14768 (111 ಗಿಡ) ಮತ್ತು ಬೆಣ್ಣೆಹಣ್ಣು ರೂ. 24149 (111 ಗಿಡಗಳು) ಪ್ರತಿ ಫಲಾನುಭವಿಗೆ ಕನಿಷ್ಟ 0.2 ಹೆಕ್ಟೇರ್ (ಅರ್ಧ ಎಕರೆ) ಯಿಂದ ಗರಿಷ್ಟ 4 ಹೆಕ್ಟರ್ (10 ಎಕರೆ) ವರೆಗೆ ಸಹಾಯಧನವನ್ನು ನೀಡಬಹುದಾಗಿದೆ. ಈ ಯೋಜನೆಯ ಸಹಾಯಧನ ಪಡೆಯಲು ಎಲ್ಲಾ ವರ್ಗದ ರೈತರು ಅರ್ಹರಾಗಿದ್ದಾರೆ. 

ಅರ್ಜಿ ನಮೂನೆಗಳು ಸಂಪಾಜೆ, ಪೆರಾಜೆ, ಚೆಂಬು, ಕರಿಕೆ, ಗಾಳಿಬೀಡು ಮತ್ತು ಮದೆನಾಡು ಗ್ರಾಮ ಪಂಚಾಯತ್‍ಗಳಲ್ಲಿ ಲಭ್ಯವಿದ್ದು, ರೈತರು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು ಇಂತಿವೆ. ರೈತರ ಜಮೀನಿನ ಪಹಣಿ ಪತ್ರ (2022ನೇ ಸಾಲಿನದ್ದು), ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರಿಂದ ಒಪ್ಪಿಗೆ ಪತ್ರ. ರೈತರ ಆಧಾರ್ ಕಾರ್ಡ್ ಪ್ರತಿ ಮತ್ತು ಪೆÇೀಟೋ (ಪಾಸ್ ಪೆÇೀರ್ಟ್ ಅಳತೆ).  ರೈತರ ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ.  ಗಿಡಗಳನ್ನು ಖರೀದಿಸಿದ ಮೂಲ ಬಿಲ್ಲು (ತೋಟಗಾರಿಕೆ ಇಲಾಖೆ ನರ್ಸರಿಗಳಿಂದ/ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ದೃಢೀಕರಿಸಿದ ನರ್ಸರಿಗಳಿಂದ ಮಾತ್ರ).  ಸಸ್ಯ ಸಂರಕ್ಷಣಾ ಔಷಧಿ ಹಾಗೂ ಜೈವಿಕ, ರಾಸಾಯನಿಕ, ಗೊಬ್ಬರ ಖರೀದಿಸಿದ ಜಿ.ಎಸ್.ಟಿ. ಸಂಖ್ಯೆಯುಳ್ಳ ಮೂಲ ಬಿಲ್ಲು. ಅರ್ಜಿ ಸಲ್ಲಿಸಲು ಜೂನ್, 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ, ಮಡಿಕೇರಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಅವರನ್ನು ಸಂಪರ್ಕಿಸಬಹುದು ಎಂದು ಉಪ ನಿರ್ದೇಶಕರಾದ ಪ್ರಮೋದ್ ಅವರು ತಿಳಿಸಿದ್ದಾರೆ.