Header Ads Widget

Responsive Advertisement

ಸಂಕಷ್ಟಕ್ಕೆ ಸಿಲುಕಿದ ಆಟೋ ಚಾಲಕ ಸುನಿಲ್ ರವರಿಗೆ ನೆರವು


ಸಂಕಷ್ಟಕ್ಕೆ ಸಿಲುಕಿದ ಆಟೋ ಚಾಲಕ  ಸುನಿಲ್ ರವರಿಗೆ ನೆರವು

ಇತ್ತೀಚೆಗೆ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ ಆಟೋ ಚಾಲಕರಾದ ಸುನಿಲ್ ರವರಿಗೆ ಆಟೋ ಚಾಲಕರಿಂದ ಹಾಗೂ ಸಾರ್ವಜನಿಕರ ಸಹಕಾರದಿಂದ ಸಂಗ್ರಹವಾದ ಒಟ್ಟು ಮೊತ್ತ 41100/- ರೂಪಾಯಿಗಳ ನೆರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ‌ರಾದ ಡಿ.ಹೆಚ್.ಮೇದಪ್ಪ, ಮಡಿಕೇರಿ ನಗರ ಅಧ್ಯಕ್ಷರಾದ ಅರುಣ್ ಕುಮಾರ್, ಉಪಾಧ್ಯಕ್ಷ.ಎ ಸಮದ್, ಪ್ರಧಾನ ಕಾರ್ಯದರ್ಶಿ.ಬಾರನ ದಿನೇಶ್‌, ಸಹ ಕಾರ್ಯದರ್ಶಿ.ಹೇಮರಾಜ್‌,  ಖಜಾಂಜಿ.ದಿನೇಶ್ ರೈ, ಸಹ ಖಜಾಂಜಿ.ಭರತ್ ಕುಮಾರ್‌, ಸಂಘಟನಾ ಕಾರ್ಯದರ್ಶಿ.ದೇವರಾಜ್‌, ನಿರ್ದೇಶಕರುಗಳಾದ ಸುಕುಮಾರ್, ರೋನಿ, ಜಿಲ್ಲಾ ಕಾರ್ಯದರ್ಶಿ. ಟಿ. ಎಮ್.ಪ್ರಸನ್ನ ಹಾಗು ಸಲಹೇಗಾರ ಡೆನ್ನಿ ಹಾಜರಿದ್ದರು.

ನೆರವಿಗೆ ಸಹಕಾರ ನೀಡಿದ ಎಲ್ಲಾ ಚಾಲಕರಿಗೆ ಹಾಗೂ ಸಾರ್ವಜನಿಕರಿಗೂ ಸಂಘದ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.