Header Ads Widget

Responsive Advertisement

ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಿಂದ ಜೇನಿನ ಎರಿ ವಿತರಣೆ



2018-19ನೇ ಸಾಲಿನಲ್ಲಿ ಭಾರತ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮೇಜರ್ ಹನಿ ಮಿಷನ್ ಯೋಜನೆಯಡಿ ಫಲಾನುಭವಿಗಳಿಗೆ ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಿಂದ ಜೇೀನು ಕೃಷಿಯ ತರಬೇತಿ ಪಡೆದ ನೂರು ಮಂದಿ ಫಲಾನುಭವಿಗಳಿಗೆ ತಲಾ 50 ರಂತೆ ಒಟ್ಟು 5 ಸಾವಿರ ಎರಿಗಳನ್ನು ವಿತರಿಸಲಾಯಿತು.
ಈ ಹಿಂದೆ ಜೇನುಕೃಷಿ ಬಗ್ಗೆ ತರಬೇತಿ ನೀಡಿ, ಜೇನುಪೆಟ್ಟಿಗೆ ಹಾಗು ಇತರೆ ಜೇನು ಕೃಷಿ ಉಪಕರಣಗಳನ್ನು ನೀಡಲಾಗಿತ್ತು.


ಇದೀಗ ಈ ಪಲಾನುಭವಿಗಳಿಗೆ ಪೂನಾದಲ್ಲಿರುವ ಭಾರತ ಸರ್ಕಾರದ ಖಾದಿ ಗ್ರಾಮೋದ್ಯೋಗ ಆಯೋಗದಿಂದ ಸರಬರಾಜು ಮಾಡಲಾದ ಕೃತಕ ಎರಿಯನ್ನು ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಅಧ್ಯಕ್ಷರಾದ ಹೊಸೂರು ಜೆ. ಸತೀಶ್‍ಕುಮಾರ್ ವಿತರಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಪೊಡನೋಳನ ಸಿ.ವಿಠಲ, ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸಂಘದ ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಜರಿದ್ದರು.