ಮಡಿಕೇರಿ ನಗರಸಭೆ ಚುನಾವಣೆಯ ಮತ ಎಣಿಕೆಯು ನಗರದ ಸಂತ ಜೋಸೆಫರ ಶಾಲೆಯಲ್ಲಿ ಶುಕ್ರವಾರ ವ್ಯವಸ್ಥಿತವಾಗಿ ನಡೆಯಿತು.
ಚುನಾವಣಾ ವೀಕ್ಷಕರಾದ ಸಿ.ರಾಜು, ಚುನಾವಣಾಧಿಕಾರಿಗಳಾದ ಡಾ.ನಂಜುಂಡೇಗೌಡ, ಸಲೀಂ, ಶಶಿಧರ, ಹಾಗೂ ತಹಶೀಲ್ದಾರ್ ಮಹೇಶ್, ಡಿವೈಎಸ್‍ಪಿ ದಿನೇಶ್ ಕುಮಾರ್, ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ಮತ ಎಣಿಕೆಯು ಶಾಂತಿಯುತವಾಗಿ ಜರುಗಿತು.
ಮಡಿಕೇರಿ ನಗರಸಭೆ ಚುನಾವಣೆಯ ಫಲಿತಾಂಶ ಸಂಬಂಧ ವಾರ್ಡ್‍ಗಳ ಸಂಖ್ಯೆ, ಅಭ್ಯರ್ಥಿಗಳು ಪ್ರತಿನಿಧಿಸಿದ ಪಕ್ಷದ ಹೆಸರು ಮತ್ತು ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆಯ ಮಾಹಿತಿಯ ವಿವರ ಇಂತಿದೆ.
ವಾರ್ಡ್ ನಂ 1 ರಿಂದ
ಅನಿತಾ ಕೆ.ಕೆ(ಜೆಡಿಎಸ್) 104, ಬಿ.ಪಿ.ಚಿತ್ರಾವತಿ (ಬಿಜೆಪಿ) 336, ಪ್ರೇಮ ಎನ್(ಕಾಂಗ್ರೆಸ್) 80, ಅನಿತಾ ಬಿ.ಡಿ (ಪಕ್ಷೇತರ) 240 ಮತಗಳನ್ನು ಪಡೆದಿದ್ದಾರೆ. ನೋಟಾಗೆ 20 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 2 ರಿಂದ
ಅಂಬೆಕಲ್ ನವೀನ್ (ಕಾಂಗ್ರೆಸ್) 67, ಮಹೇಶ್ ಜೈನಿ(ಬಿಜೆಪಿ) 375, ಲೀಲಾ ಶೇಷಮ್ಮ (ಜೆಡಿಎಸ್) 43, ತನುಜಾವತಿ ಎಚ್.ಎಚ್.(ಪಕ್ಷೇತರ) 53, ಕೆ.ಎಂ.ಚೇತನ (ಪಕ್ಷೇತರ) 26, ಮನೋಹರ ಎಂ.ಕೆ.(ಪಕ್ಷೇತರ) 4, ಮೋಹನ್ ವಿ.ಜಿ. (ಪಕ್ಷೇತರ) 50, ಬಿಎಂ.ಯಲ್ಲಪ್ಪ (ಪಕ್ಷೇತರ) 4, ಲಿಂಗರಾಜು ಡಿ.ಎನ್ (ಪಕ್ಷೇತರ) 36, ಎನ್ .ಎ.ಸತೀಶ್ ಪೈ (ಪಕ್ಷೇತರ) 3, ಸತೀಶ್ ರೈ ಪಿ.ಕೆ (ಪಕ್ಷೇತರ) 57 ಮತಗಳನ್ನು ಪಡೆದಿದ್ದಾರೆ. ನೋಟಾಗೆ 3 ಮತಗಳು ಚಲಾವಣೆಯಾಗಿವೆ.
ವಾರ್ಡ್ ನಂ 3 ರಿಂದ
ಟಿ.ಕೆ.ಕವಿತ (ಬಿಜೆಪಿ) 100, ಕೆ.ಎಕ್ಸ್ ಸಾಲಿ (ಕಾಂಗ್ರೆಸ್) 75, ಮೇರಿ ವೇಗಸ್ (ಪಕ್ಷೇತರ) 676 ಮತಗಳನ್ನು ಪಡೆದಿದ್ದಾರೆ. ನೋಟಾಗೆ 3 ಮತಗಳು ಚಲಾವಣೆಯಾಗಿವೆ.
ವಾರ್ಡ್ ನಂ 4 ರಿಂದ
ಎಂ.ಯು ಖಲೀಲ್ ಬಾದಷಾ(ಜೆಡಿಎಸ್) 15, ದೀಪು ಎಚ್.ಕೆ (ಬಿಜೆಪಿ) 274, ಮಹಮ್ಮದ್ ಯೂಸುಫ್ (ಕಾಂಗ್ರೆಸ್) 43, ಮನ್ಸೂರ್ ಆಲಿ ಎಂ.ಕೆ (ಪಕ್ಷೇತರ) 701, ಎಂ.ಎ.ಮೊಹಮದ್ ಫಯಾಜ್ (ಪಕ್ಷೇತರ) 20 ಮತಗಳನ್ನು ಪಡೆದಿದ್ದಾರೆ. ನೋಟಾಗೆ 5 ಮತಗಳು ಚಲಾವಣೆಯಾಗಿವೆ.
ವಾರ್ಡ್ ನಂ 5 ರಿಂದ
ಎಚ್.ಎಂ.ನಂದಕುಮಾರ್ (ಕಾಂಗ್ರೆಸ್) 213, ರವಿಕುಮಾರ್ ಎಚ್.ಎ (ಜೆಡಿಎಸ್) 13, ಸತೀಶ್ ಎಸ್.ಸಿ (ಬಿಜೆಪಿ) 334 ಮತಗಳನ್ನು ಪಡೆದಿದ್ದಾರೆ. ನೋಟಾಗೆ 2 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 6 ರಿಂದ
ಎಂ.ಖಲೀಲ್ (ಜೆಡಿಎಸ್) 9, ಎ.ಜಿ.ರಮೇಶ್ (ಕಾಂಗ್ರೆಸ್) 28, ಕೆ.ಎಸ್.ರಮೇಶ್ (ಬಿಜೆಪಿ) 540, ಮಹೇಶ್ ಆರ್ ಮಹೇಶ್ ಕುಮಾರ್ (ಪಕ್ಷೇತರ) 374 ಮತಗಳನ್ನು ಪಡೆದಿದ್ದಾರೆ. ನೋಟಾಗೆ 11 ಮತಗಳು ಚಲಾವಣೆಗೊಂಡಿವೆ,
ವಾರ್ಡ್ ನಂ 7 ರಿಂದ
ಎಂ.ಆರ್.ಜನಾರ್ದನ (ಜೆಡಿಎಸ್) 20, ಪ್ರಭು ರೈ (ಪ್ರಭಾಕರ) (ಕಾಂಗ್ರೆಸ್) 97, ರೋಶನ್ ಬಿ.ವಿ. (ಅಣ್ಣು) (ಬಿಜೆಪಿ) 210, ಅಮಿನ್ ಮೊಹಿಸಿನ್ (ಪಕ್ಷೇತರ) 382 ಮತಗಳನ್ನು ಪಡೆದಿದ್ದಾರೆ. ನೋಟಾಗೆ 8 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 8 ರಿಂದ
ಆಯಿಷಾ ಹಮೀದ್ (ಜೆಡಿಎಸ್) 40, ಎಂ.ಮಮ್ತಾಜ್ ಬೇಗಂ (ಕಾಂಗ್ರೆಸ್) 49, ಸವಿತಾ ರಾಕೇಶ್ (ಬಿಜೆಪಿ) 286, ನಫೀಸಾ ಅಕ್ಬರ್ (ಪಕ್ಷೇತರ) 100, ಭಾರತಿ ರಮೇಶ್ (ಪಕ್ಷೇತರ) 64 ಮತಗಳನ್ನು ಪಡೆದಿದ್ದಾರೆ. ನೋಟಾಗೆ 7 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 9 ರಿಂದ
ಕಲಾವತಿ(ಬಿಜೆಪಿ) 299, ಶಶಿ (ಕಾಂಗ್ರೆಸ್) 48, ಸಲ್ಮಾಖಾನಂ ಎಂ.ಈ (ಜೆಡಿಎಸ್) 283, ರಜೀಯಾ ಎಂ.ಬಿ (ಪಕ್ಷೇತರ) 216 ಮತಗಳನ್ನು ಪಡೆದಿದ್ದಾರೆ. ನೋಟಾ 9 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 10 ರಿಂದ
ಅಬ್ದುಲ್ ರಜಾಕ್ (ಕಾಂಗ್ರೆಸ್) 36, ಬಿ.ಕೆ.ಜಗದೀಶ್ (ಬಿಜೆಪಿ) 142, ಮುಸ್ತು (ಜೆಡಿಎಸ್) 251, ಅಬ್ದುಲ್ ಸತ್ತಾರ್ (ಪಕ್ಷೇತರ) 57, ಕೆ.ಜಿ.ಪೀಟರ್ (ಪಕ್ಷೇತರ) 53, ಎಂ.ಎಂ.ಲಿಯಾಕತ್ ಅಲಿ (ಪಕ್ಷೇತರ) 20, ಸುಕುಮಾರ್ ಪಿ.ಜಿ. (ಪಕ್ಷೇತರ) 80 ಮತ ಪಡೆದಿದ್ದಾರೆ. ನೋಟಾಗೆ ಮತ ಚಲಾವಣೆಗೊಂಡಿಲ್ಲ.
ವಾರ್ಡ್ ನಂ.11 ರಿಂದ
ಫರ್ಜಾನ (ಕಾಂಗೆಸ್) 82, ಕೆ.ಎಸ್.ರಾಜೇಶ್ವರಿ (ಜೆಡಿಎಸ್) 34, ಇಗ್ಗುಡ ಶಿವಕುಮಾರಿ ಗಣಪತಿ (ಬಿಜೆಪಿ) 97, ನೀಮಾ ಅರ್ಷದ್ (ಪಕ್ಷೇತರ) 125, ಫಾತಿಮಾ ಸಿ.ಎ (ಆಮ್ ಆದ್ಮಿ) 6, ತಜಸುಂ (ಪಕ್ಷೇತರ) 51 ಮತಗಳನ್ನು ಪಡೆದಿದ್ದಾರೆ. ನೋಟಾಗೆ 6 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ.12 ರಿಂದ
ನಿಸಾರ್ ಅಹಮದ್ (ಜೆಡಿಎಸ್) 54, ಮುನೀರ್ ಅಹ್ಮದ್ (ಕಾಂಗ್ರೆಸ್) 115, ಬಿ.ಎಂ.ರಾಜೇಶ್(ರಾಜು) (ಬಿಜೆಪಿ) 141, ಎಂ.ಎಂ.ಕಲಂದರ್ ಬಾಷಾ (ಆಮ್ ಆದ್ಮಿ) 2, ಬಶೀರ್ ಅಹಮದ್ (ಪಕ್ಷೇತರ) 239 ಮತಗಳನ್ನು ಪಡೆದಿದ್ದಾರೆ. ನೋಟಾಗೆ 1 ಮತ ಚಲಾವಣೆಗೊಂಡಿದೆ.
ವಾರ್ಡ್ ನಂ 13 ರಿಂದ
ಕವಿತಾ ರಾಮಚಂದ್ರ (ಜೆಡಿಎಸ್) 29, ಕಾವೇರಮ್ಮ ಸೋಮಣ್ಣ (ಕಾಂಗ್ರೆಸ್) 209, ಮಂಜುಳ ಸಿ.ಕೆ (ಬಿಜೆಪಿ) 367, ಡಿ.ಆರ್.ಮೇರಿ (ಪಕ್ಷೇತರ) 11 ಮತಗಳನ್ನು ಪಡೆದಿದ್ದಾರೆ. ನೋಟಾಗೆ 8 ಮತಗಳು ಚಾಲಾವಣೆಗೊಂಡಿವೆ.
ವಾರ್ಡ್ ನಂ 14 ರಿಂದ
ಉಷಾ ಕೆ (ಬಿಜೆಪಿ) 463, ಕುಸುಮಾ ಡಿ.ಕೆ (ಕಾಂಗ್ರೆಸ್) 77, ಮೀನಾಕ್ಷಿ ಗಣೇಶ್ (ಜೆಡಿಎಸ್) 51 ಮತಗಳನ್ನು ಪಡೆದಿದ್ದಾರೆ. ನೋಟಾಗೆ 9 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 15 ರಿಂದ
ಪಿ.ಚಂದ್ರಶೇಖರ (ಬಿಜೆಪಿ) 486, ವನಿತ (ವಾಣಿ) (ಜೆಡಿಎಸ್) 106, ಸ್ವರ್ಣಲತಾ ಚಂಗಪ್ಪ (ಕಾಂಗ್ರೆಸ್) 58 ಮತ ಪಡೆದಿದ್ದಾರೆ. ನೋಟಾಗೆ 15 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 16 ರಿಂದ
ಕಾವೇರಪ್ಪ ಪಿ.ಯು(ಕವನ್) (ಬಿಜೆಪಿ) 352, ಕೆ.ಇ.ಮ್ಯಾಥ್ಯೂ (ಜೆಡಿಎಸ್) 36, ಬಿ.ರಾಜೇಶ್ ಯಲ್ಲಪ್ಪ (ಕಾಂಗ್ರೆಸ್) 381 ಮತಗಳನ್ನು ಪಡೆದಿದ್ದಾರೆ. ನೋಟಾಗೆ 7 ಮತಗಳು ಚಲಾವಣೆಗೊಂಡಿವೆ.
ವಾರ್ಡ್ 17 ರಿಂದ
ಕೆ.ಕೆ.ಅಜಿತ್ ಕುಮಾರ್ (ಜೆಡಿಎಸ್) 3, ಅರುಣ್ ಶೆಟ್ಟಿ (ಬಿಜೆಪಿ) 274, ಎ.ಸಿ.ದೇವಯ್ಯ(ಚುಮ್ಮಿ) (ಕಾಂಗ್ರೆಸ್) 66, ಎಂ.ಕೆ.ಅಪ್ಪಯ್ಯ (ಆಮ್ ಆದ್ಮಿ) 2, ಕೆ.ಟಿ.ಬೇಬಿ ಮ್ಯಾಥ್ಯೂ (ಪಕ್ಷೇತರ) 19, ಶರತ್ ಸಿ.ಎ (ಪಕ್ಷೇತರ) 53, ನೋಟಾಗೆ 1 ಮತ ಚಲಾವಣೆಗೊಂಡಿದೆ.
ವಾರ್ಡ್ ನಂ 18 ರಿಂದ
ಎ.ಎಸ್.ಪ್ರಕಾಶ್ ಆಚಾರ್ಯ (ಕಾಂಗ್ರೆಸ್) 204, ಎನ್.ಸಿ ಸುನಿಲ್ (ಜೆಡಿಎಸ್) 69, ಉಮೇಶ್ ಸುಬ್ರಮಣಿ (ಬಿಜೆಪಿ) 359, ಎಂ.ಎಸ್.ಸುರೇಶ್ (ಪಕ್ಷೇತರ) 17 ಮತ ಪಡೆದಿದ್ದಾರೆ. ನೋಟಾಗೆ 3 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 19 ರಿಂದ
ಅಪ್ಪಣ್ಣ ಕೆ.ಎಂ.(ಬಿಜೆಪಿ) 340, ಅಯ್ಯಪ್ಪ ಟಿ.ಎಂ.(ಕಾಂಗ್ರೆಸ್) 176, (ಮನು) ರಾಜೀವ್ ಕುಮಾರ್ ಕೆ.ಕೆ (ಜೆಡಿಎಸ್) 87, ಪೃಥ್ವಿ ಎಚ್.ಬಿ.(ಆಮ್ ಆದ್ಮಿ) 2, ಸುನಿಲ್ ನಂಜಪ್ಪ (ಪಕ್ಷೇತರ) 78, ಕೆ.ವಿ.ಮಣಿ (ಪಕ್ಷೇತರ) 28 ಮತ ಪಡೆದಿದ್ದಾರೆ. ನೋಟಾಗೆ 5 ಚಲಾವಣೆಗೊಂಡಿವೆ.
ವಾರ್ಡ್ ನಂ 20 ರಿಂದ
ಅನಿತಾ ಪೂವಯ್ಯ (ಬಿಜೆಪಿ) 330, ಬಿ.ಯು.ರಶ್ಮಿ (ಜೆಡಿಎಸ್) 78, ಎಚ್.ಯು.ಲಿಲ್ಲಿ (ಕಾಂಗ್ರೆಸ್) 248, ಲಕ್ಷ್ಮಿ (ಪಕ್ಷೇತರ) 110 ಮತ ಪಡೆದಿದ್ದಾರೆ. ನೋಟಾಗೆ 15 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 21 ರಿಂದ
ಜುಲೇಕಾಬಿ ಎಂ.ಯು (ಕಾಂಗ್ರೆಸ್) 123, ಪ್ರತ್ಯೂಷ ಬಿ.ಎಸ್ (ಜೆಡಿಎಸ್) 127, ಶ್ವೇತ ಪ್ರಶಾಂತ್ (ಬಿಜೆಪಿ) 195, ಚಿತ್ರಾವತಿ ಪಿ.ಎಲ್ (ಪಕ್ಷೇತರ) 160, ದೀಕ್ಷಾ (ಪಕ್ಷೇತರ) 18 ಮತ ಪಡೆದಿದ್ದಾರೆ. ನೋಟಾಗೆ 9 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 22 ರಿಂದ
ಬಬಿತ ಸತೀಶ್ (ಜೆಡಿಎಸ್) 84, ಮೀನಾ ಪ್ರವೀಣ್ (ಪಮ್ಮಿ) (ಕಾಂಗ್ರೆಸ್) 335, ಸಬೀತ (ಬಿಜೆಪಿ) 364, ಆಶಾಲತ ಧರ್ಮಪಾಲ್ (ಪ್ರಭು) (ಪಕ್ಷೇತರ) 58, ಬೆನೆಡಿಕ್ಟ ಲೋಬೋ (ಪಕ್ಷೇತರ) 61 ಮತ ಪಡೆದಿದ್ದಾರೆ. ನೋಟಾಗೆ 18 ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ 23 ರಿಂದ
ಪ್ರತಿಮ ಎಚ್.ಡಿ. (ಜೆಡಿಎಸ್) 16, ಎಚ್.ಎನ್.ಶಾರದ (ಬಿಜೆಪಿ) 260, ಶಿಲ್ಪ ರಾಣಿ ಜಿ.ಎಸ್. (ಕಾಂಗ್ರೆಸ್) 199, ಎಚ್.ಕೆ.ಪ್ರೇಮ (ಪಕ್ಷೇತರ) 34 ಮತ ಪಡೆದಿದ್ದಾರೆ. ಹಾಗೂ ನೋಟಾಗೆ 5 ಮತಗಳು ಚಲಾವಣೆಗೊಂಡಿವೆ.
ಈ ಸಂದರ್ಭದಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜನಪರ ಕಾಳಜಿ ಗಮನಿಸಿ ನಗರದ ಜನತೆ ಉತ್ತಮ ಫಲಿತಾಂಶ ನೀಡಿದ್ದಾರೆ. ನಗರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
Search Coorg Media
Coorg's Largest Online Media Network