ದೇಶದಲ್ಲಿ ಡ್ರೋನ್ ಬಳಕೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಷ್ಟ್ರಕ್ಕೆ ಸಹಾಯಕವಾಗುವ ನಿರಂತರ ಪ್ರಯತ್ನದ ಭಾಗವಾಗಿ ಲಸಿಕೆ ವಿತರಣೆಗೆ ಪ್ರಾಯೋಗಿಕ ಡ್ರೋನ್ ಹಾರಾಟಗಳಿಗೆ ಸರ್ಕಾರ ಷರತ್ತುಬದ್ಧ ವಿನಾಯಿತಿ ನೀಡುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಲಸಿಕೆಗಳನ್ನು ವಿತರಿಸಲು ಪ್ರಾಯೋಗಿಕವಾಗಿ ದೃಷ್ಟಿಯಿಂದ ಗೋಚರಿಸುವ ರೇಖೆಯ ಆಚೆಗೆ (ಬಿವಿಎಲ್ಒಎಸ್) ಡ್ರೋನ್ ಹಾರಾಟಗಳನ್ನು ನಡೆಸಲು ತೆಲಂಗಾಣ ಸರ್ಕಾರಕ್ಕೆ ಷರತ್ತುಬದ್ಧ ವಿನಾಯಿತಿ ನೀಡಿದೆ. ಮಾನವರಹಿತ ವಿಮಾನ ವ್ಯವಸ್ಥೆ {ಯುಎಎಸ್) ನಿಯಮಗಳು, 2021 ರಿಂದ ವಿನಾಯಿತಿ ನೀಡಲಾಗಿದೆ.
ಈ ವಿನಾಯಿತಿಯು ನಾಗರಿಕ ವಿಮಾನಯಾನ ಸಚಿವಾಲಯದಿಂದ ನೀಡಲಾದ ಷರತ್ತುಗಳು ಮತ್ತು ನಿರ್ದೇಶನಗಳು / ವಿನಾಯಿತಿಗಳನ್ನು (ಅಥವಾ ಭವಿಷ್ಯದಲ್ಲಿ ನೀಡಲಾಗುವುದು) ಸಂಪೂರ್ಣ ಅನುಸರಣೆಗೆ ಒಳಪಟ್ಟಿರುತ್ತದೆ. ಈ ವಿನಾಯಿತಿ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ಅನುಮೋದನೆಯ ದಿನಾಂಕದಿಂದ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶಗಳವರೆಗೆ, ಯಾವುದು ಮೊದಲಿನದ್ದಾದರೂ ಮಾನ್ಯವಾಗಿರುತ್ತದೆ.
ಕಳೆದ ತಿಂಗಳು, ಡ್ರೋನ್ಗಳನ್ನು ಬಳಸಿಕೊಂಡು ದೃಷ್ಟಿಯಿಂದ ಗೋಚರಿಸುವ ರೇಖೆಯ ಒಳಗಿನ (ವಿಎಲ್ಒಎಸ್) ಶ್ರೇಣಿಯೊಳಗೆ ಕೋವಿಡ್ -19 ಲಸಿಕೆಗಳನ್ನು ಪ್ರಾಯೋಗಿಕವಾಗಿ ವಿತರಿಸಲು ತೆಲಂಗಾಣ ಸರ್ಕಾರಕ್ಕೆ ಷರತ್ತುಬದ್ಧ ವಿನಾಯಿತಿ ನೀಡಲಾಯಿತು. ಅಪ್ಲಿಕೇಶನ್ ಆಧಾರಿತ ಮಾದರಿಗಳನ್ನು ರೂಪಿಸಲು ಡ್ರೋನ್ ನಿಯೋಜನೆ ಪ್ರಕ್ರಿಯೆಯನ್ನು ತೀವ್ರಗೊಳಿಸಲು, ಅನುದಾನವನ್ನು ದೃಷ್ಟಿಯಿಂದ ಗೋಚರಿಸುವ ರೇಖೆಯ ಆಚೆಗೂ (ಬಿವಿಎಲ್ಒಎಸ್) ವಿಸ್ತರಿಸಲಾಗಿದೆ. ಪ್ರಾಯೋಗಿಕ ಹಾರಾಟಗಳು ಮೇ 2021 ರ ಅಂತ್ಯದ ವೇಳೆಗೆ ಪ್ರಾರಂಭವಾಗಬಹುದು.
ಇದಕ್ಕೂ ಮೊದಲು, ಐಐಟಿ ಕಾನ್ಪುರದ ಸಹಯೋಗದೊಂದಿಗೆ ಡ್ರೋನ್ ಗಳನ್ನು ಬಳಸಿಕೊಂಡು ಕೋವಿಡ್ -19 ಲಸಿಕೆ ವಿತರಣೆಯ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಕಳೆದ ತಿಂಗಳು ಷರತ್ತುಬದ್ಧ ವಿನಾಯಿತಿ ನೀಡಲಾಯಿತು.
ಈ ಅನುಮತಿಗಳ ಅನುದಾನವು ನಾಗರಿಕರ ಮನೆ ಬಾಗಿಲಿಗೆ ಪ್ರಾಥಮಿಕ ಆರೋಗ್ಯ ಸೇವೆಯ ವಿತರಣೆಯನ್ನು ಖಾತರಿಪಡಿಸುವ ಮೂಲಕ ವೇಗವಾಗಿ ಲಸಿಕೆ ವಿತರಣೆ ಮತ್ತು ಸುಧಾರಿತ ಆರೋಗ್ಯ ಸಾಧನೆಯ ಎರಡು ಉದ್ದೇಶಗಳನ್ನು ಸಾಧಿಸಲು ಯೋಜಿಸಲಾಗಿದೆ, ವೈಮಾನಿಕ ವಿತರಣೆಯ ಮೂಲಕ ಕೋವಿಡ್ ದಟ್ಟಣೆ ಅಥವಾ ಕೋವಿಡ್ ಪೀಡಿತ ಪ್ರದೇಶಗಳಿಗೆ ಮನುಷ್ಯರ ಸಂಪರ್ಕವಾಗುವುದನ್ನು ಸೀಮಿತಗೊಳಿಸುತ್ತದೆ, ಆರೋಗ್ಯ ರಕ್ಷಣೆಗೆ ಖಾತ್ರಿಪಡಿಸುತ್ತದೆ, ವಿಶೇಷವಾಗಿ ದೂರದ ಪ್ರದೇಶಗಳಲ್ಲಿ, ದೀರ್ಘ ಶ್ರೇಣಿಯ ಡ್ರೋನ್ ಗಳಿಗೆ ವೈದ್ಯಕೀಯ ಸಾರಿಗೆಯ ಮಧ್ಯದ ಮೈಲಿಗೆ ಜೊತೆಯಾಗಿ ಮತ್ತು ವೈದ್ಯಕೀಯ ಪೂರೈಕೆ ಸರಪಳಿಯನ್ನು ಸುಧಾರಿಸುವುದು, ಲಕ್ಷಾಂತರ ಪ್ರಮಾಣವನ್ನು ಭಾರತದಾದ್ಯಂತ ಸಾಗಿಸವಂತಾಗುತ್ತದೆ.
ತೆಲಂಗಾಣ ಸರ್ಕಾರವು ಲಸಿಕೆಗಳನ್ನು ತಲುಪಿಸಲು ಪ್ರಾಯೋಗಿಕ ಬಿವಿಎಲ್ಒಎಸ್ ಡ್ರೋನ್ ಹಾರಾಟಗಳನ್ನು ನಡೆಸುವ ಒಂದು ಷರತ್ತು ಎಂದರೆ ಡ್ರೋನ್ ಕಾರ್ಯಾಚರಣೆಗೆ ಅನುಮತಿಯು ನೆಲಮಟ್ಟಕ್ಕಿಂತ (ಎಜಿಎಲ್) ಗರಿಷ್ಠ 400 ಅಡಿ ಎತ್ತರವಾಗಿದೆ. ಹೆಚ್ಚಿನ ನೆಲಮಟ್ಟ ಹಾರಾಟದ ಸಮಯದ 15% ನಷ್ಟು ಶಕ್ತಿಯು ಮೀಸಲಾಗಿರಿಸುವ ವ್ಯವಸ್ಥೆ ಒದಗಿಸಬೇಕು ಎಂದು ಅದು ತಿಳಿಸಿದೆ.
ಎಟಿಸಿಯೊಂದಿಗೆ ಸುಗಮ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ತೆಲಂಗಾಣ ಸರ್ಕಾರವು ಪ್ರಾಯೋಗಿಕ ವಿಮಾನಗಳ ಸಂಪೂರ್ಣ ಅವಧಿಗೆ ಶಂಷಾಬಾದ್ ಎಟಿಸಿಯಲ್ಲಿ ಏಕ ಬಿಂದು ಸಂಯೋಜಕರನ್ನು (ಎಸ್ಪಿಸಿ) ನೇಮಿಸತಕ್ಕದ್ದು ಎಂದು ಮತ್ತೊಂದು ಷರತ್ತು ಹೇಳುತ್ತದೆ.
ಸ್ಥಳೀಯ ಸೂರ್ಯೋದಯ ಮತ್ತು ಸ್ಥಳೀಯ ಸೂರ್ಯಾಸ್ತದ ನಡುವೆ ಡ್ರೋನ್ ಕಾರ್ಯಾಚರಣೆಗಳು ಸೀಮಿತವಾಗಿರುತ್ತವೆ ಎಂದು ಷರತ್ತುಗಳು ಮತ್ತಷ್ಟು ಉಲ್ಲೇಖಿಸುತ್ತವೆ. ಏರುವ ಮತ್ತು ಇಳಿಯುವ ತಾಣಗಳಲ್ಲಿ ಕಾಣುವ ಹವಾಮಾನ ಪರಿಸ್ಥಿತಿಗಳು (ವಿಎಂಸಿ) ಇರಬೇಕು ಎಂದು ಹೇಳಲಾಗಿದೆ. ಇದಲ್ಲದೆ, ಡ್ರೋನ್ ತಯಾರಕರು ನಿಗದಿಪಡಿಸಿದ ಹವಾಮಾನ ಮಿತಿಗಳನ್ನು ಅನುಸರಿಸಬೇಕು ಎಂಬುದು ಷರತ್ತುಗಳಲ್ಲಿ ಒಂದಾಗಿದೆ.
ಬಿವಿಎಲ್ಓಎಸ್ ಪ್ರಾಯೋಗಿಕ ಹಾರಾಟಗಳಿಗೆ ಬಳಸುವ ಡ್ರೋನ್ ಗಳು ಷರತ್ತುಗಳಲ್ಲಿ ಸೂಚಿಸಿರುವ ಕೆಲವು ಅವಶ್ಯಕ ನಿಯಮಗಳನ್ನು ಪಾಲಿಸತಕ್ಕದ್ದು. ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ, ತೆಲಂಗಾಣ ಸರ್ಕಾರವು ಪರಿಕಲ್ಪನೆಯ ವಿವರವಾದ ಪುರಾವೆಗಳನ್ನು ಸಚಿವಾಲಯಕ್ಕೆ ಮತ್ತು ನಿರ್ದೇಶನಾಲಯಕ್ಕೆ ಸಲ್ಲಿಸುತ್ತದೆ ಎಂದು ಷರತ್ತುಗಳಲ್ಲಿ ಮತ್ತಷ್ಟು ಹೇಳಲಾಗಿದೆ.
(News Source: PIB Bengaluru)
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network