Header Ads Widget

Responsive Advertisement

ಕೃಷಿ ಸೌಲಭ್ಯ ಪಡೆಯಲು ಕೆ-ಕಿಸಾನ್ ನೋಂದಣಿ ಕಡ್ಡಾಯ


ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯ ಪಡೆಯಲು ಪದೇ ಪದೇ ದಾಖಲೆ ನೀಡುವುದನ್ನು ತಪ್ಪಿಸಲು ಸರ್ಕಾರವು ಕೆ-ಕೆಸಾನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯ ಪಡೆಯಬೇಕಾದರೆ ಕೆ-ಕಿಸಾನ್ ತಂತ್ರಾಂಶ ಯೋಜನೆಯಲ್ಲಿ  ರೈತರ ಹೆಸರು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.

ಹೌದು, ಕೆ.ಕಿಸಾನ್‌ ತಂತ್ರಾಂಶದಡಿಯಲ್ಲಿ ರೈತರು ನೋಂದಣಿ ಮಾಡಿಕೊಳ್ಳದೆ ಇದ್ದಲ್ಲಿ ರೈತರಿಗೆ ಯಾವುದೇ ಸಹಾಯಧನ, ಸೌಲಭ್ಯ ದೊರೆಯುವುದಿಲ್ಲ. ಕೃಷಿ ಇಲಾಖೆಯಲ್ಲಿ ದೊರೆಯುವ ಬಿತ್ತನೆ ಬೀಜಗಳು, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳು, ತುಂತುರು ನೀರಾವರಿ, ಆಧುನಿಕ ಕೃಷಿ ಉಪಕರಣಗಳು ಹಾಗೂ ಇಲಾಖೆಯ ಇತರ ಸೌಲಭ್ಯಗಳನ್ನು ಪಡೆಯಲು ಕೆ.ಕಿಸಾನ್ ನಲ್ಲಿ ಆನ್ ಲೈನ್ ನೋಂದಣಿ ಕಡ್ಡಾಯವಾಗಿದೆ.

ಕರ್ನಾಟಕ ಕೃಷಿ ಮಾಹಿತಿ ಮತ್ತು ಅಂತರ್ಜಾಲ  ತಾಣ ಯೋಜನೆ (ಕೆ-ಕಿಸಾನ್) ಯಡಿ ತಂತ್ರಾಂಶ ರೂಪುಗೊಳಿಸಲಾಗಿದೆ. ಇದರಲ್ಲಿ ರೈತ ಕುಟುಂಬದ ಸದಸ್ಯರ ಹೆಸರು, ಬೆಳೆ ಮಾಹಿತಿ, ಆಧಾರ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ, ಮಣ್ಣಿನ ಗುಣಮಟ್ಟ ಮುಂತಾದ ಮಾಹಿತಿ ಕಲೆ ಹಾಕಿ ಅಪಲೋಡ್ ಮಾಡಲಾಗುತ್ತದೆ. ಕೃಷಿ ಇಲಾಖೆಯ ಯಾವುದೇ ಸೌಲಭ್ಯ ಪಡೆಯಲು ನೋಂದಣಿ ಕಡ್ಡಾಯವಾಗಿದೆ.

ಕೃಷಿ ಇಲಾಖೆಯಿಂದ ಸೌಲಭ್ಯ ಪಡೆಯಲು ಕೆ-ಕಿಸಾನ್ ನಲ್ಲಿ ನಿಮ್ಮ ಹೆಸರು ನೋಂದಾಯಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://kkisan.karnataka.gov.in/Home.aspx  ಕ್ಲಿಕ್ ಮಾಡಿ. ಕೃಷಿ ಯಂತ್ರೋಪಕರಣ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಸೂಕ್ಷ್ಮ ನೀರಾವರಿ ಅರ್ಜಿ ಹೀಗೆ ನಿಮಗೆ ಬೇಕಾದದನ್ನು ಆಯ್ಕೆ ಮಾಡಿ. ನಿಮ್ಮ ಆಧಾರ್ ನಂಬರ್ ನಮೂದಿಸಿ ನೋಂದಣಿ ಪೂರ್ಣಗೊಳಿಸಬಹುದು.


Search Coorg Media

Coorg's Largest Online Media Network