Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೂರ್ನಾಡು : *ವನಮಹೋತ್ಸವ ,* *ಗ್ರೋ ಗ್ರೀನ್ *ಹಸಿರು ಅಭಿಯಾನಕ್ಕೆ ಚಾಲನೆ

ಮೂರ್ನಾಡು : *ವನಮಹೋತ್ಸವ ,* *ಗ್ರೋ ಗ್ರೀನ್ *ಹಸಿರು ಅಭಿಯಾನಕ್ಕೆ ಚಾಲನೆ 


ಮೂರ್ನಾಡು,(ಕೊಡಗು ಜಿಲ್ಲೆ),ಸೆ.16: ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚು ಗಿಡ- ಮರಗಳನ್ನು  ನೆಟ್ಟು ಬೆಳೆಸುವ ಮೂಲಕ.ಪರಿಸರ ಸಂರಕ್ಷಣೆಗೆ ಸಹಕರಿಸಬೇಕು ಎಂದು ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಯ ಎಸಿಎಫ್ ಮಂಡುವಂಡ ಎಸ್.ಚಂಗಪ್ಪ ಮನವಿ ಮಾಡಿದರು.

ಕೊಡಗು ಸಾಮಾಜಿಕ ಅರಣ್ಯ ವಿಭಾಗ ಹಾಗೂ ಮಡಿಕೇರಿ ಸಾಮಾಜಿಕ ಅರಣ್ಯ ವಲಯದ ವತಿಯಿಂದ ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ಕರ್ನಾಟಕ ರಾಜ್ಯ ವಿಜ್ಞಾನ ‌ಪರಿಷತ್ತು ಸಹಯೋಗದೊಂದಿಗೆ ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ  ಪ್ರಕೃತಿ ಇಕೋ ಕ್ಲಬ್ ಆಶ್ರಯದಲ್ಲಿ ನಮ್ಮ ನಡೆ ಹಸಿರೆಡೆಗೆ"- 'ಗ್ರೋ ಗ್ರೀನ್' ಅಭಿಯಾನದಡಿ ಏರ್ಪಡಿಸಿದ್ದ ವಿಶ್ವ ಓಝೋನ್ ಪದರ ಸಂರಕ್ಷಣಾ ದಿನ ಹಾಗೂ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರೂ ಅರಣ್ಯ ಸಂರಕ್ಷಣೆಗೆ ಸಹಕರಿಸಬೇಕು ಎಂದರು.

"ಅರಣ್ಯ ಬೆಳೆಸುವ ಮಹತ್ವ ಮತ್ತು ಅದರ ಸಂರಕ್ಷಣೆ ಕುರಿತು ಮಾಹಿತಿ ನೀಡಿದ ಅವರು, ಪರಿಸರದ ಮೇಲೆ ಆಗುತ್ತಿರುವ ಅನಾಹುತಗಳು ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿವೆ ಎಂದರು. ಶಾಲೆಗೆ ಸೇರಿದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ವಿವಿಧ ಜಾತಿಯ 200 ಅರಣ್ಯ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದ್ದು, ಈ ನೆಡುತೋಪು ಸಂರಕ್ಷಣೆಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಹೆಚ್ಚಿನ ಸಹಕಾರ  ನೀಡಬೇಕು ಎಂದರು.

"ಓಝೋನ್ ಪದರ ಸಂರಕ್ಷಣೆ ಮತ್ತು ವನ ಮಹೋತ್ಸವದ ಮಹತ್ವ" ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಹಸಿರುಪಡೆ ಇಕೋ ಕ್ಲಬ್ ನ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಜಿಲ್ಲಾ ಪರಿಸರ ಜಾಗೃತಿ ಸಮಿತಿ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಭೂಮಂಡಲದಲ್ಲಿ ಹಸಿರು ನಿರ್ಮಿಸುವ ಮೂಲಕ ಓಝೋನ್ ಪದರ ರಕ್ಷಿಸುವ ಮೂಲಕ ಜೀವ ಸಂಕುಲಗಳ ಸಂರಕ್ಷಣೆ ಮಾಡಬೇಕಿದೆ ಎಂದರು. ನಾವುಗಳು ನೈಸರ್ಗಿಕ ಸಂಪತ್ತು ರಕ್ಷಣೆಯೊಂದಿಗೆ ಪರಿಸರ ಸಂರಕ್ಷಿಸಲು ಪಣತೊಡಬೇಕಿದೆ ಎಂದರು.

ತಾ.ಪಂ.ಮಾಜಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಶಾಲಾ ಪರಿಸರದಲ್ಲಿ ಅರಣ್ಯ ಸಸಿಯೊಂದಿಗೆ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಿದರೆ ಪಕ್ಷಿ ಸಂಕುಲಗಳ ರಕ್ಷಣೆ ಕೂಡ ಸಾಧ್ಯವಾಗುತ್ತದೆ ಎಂದರು. ಇಂತಹ ಪರಿಸರ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಜಾತ  ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು ಎಂದರು. ಗ್ರಾ.ಪಂ.ಉಪಾಧ್ಯಕ್ಷೆ. ಮುಂಡಂಡ ವಿಜು ತಿಮ್ಮಯ್ಯ, ಎಸ್.ಡಿ.ಎಂ.ಸಿ.ಅಧ್ಯಕ್ಷ ಎಚ್.ಬಿ. ದಿನೇಶ್  ಬಹುಮಾನ ವಿತರಿಸಿದರು. ಆರ್.ಎಫ್.ಓ. ಗಳಾದ ಮಯೂರ್ ಕಾರವೇಕರ್,ಪರೀಕ್ಷಾರ್ಥ ಆರ್.ಎಫ್.ಎಫ್. ಎನ್.ಮೇಘನಾ, ಡಿ.ಆರ್.ಎಫ್.ಓ.ಎಂ.ಜಿ. ದರ್ಶಿನಿ, . , , ಶಾಲೆಯ ಮುಖ್ಯ ಶಿಕ್ಷಕಿ ಲಲಿತ, ಸಿ.ಆರ್.ಪಿ., ಎಸ್.ಉಷಾ, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಎಂ.ಜಲಜಾಕ್ಷಿ, ಅರಣ್ಯ ರಕ್ಷಕಿ ಚಂದ್ರಾವತಿ,  ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು, ಪೋಷಕರು  ಇದ್ದರು. ಶಿಕ್ಷಕಿ ಜಲಜಾಕ್ಷಿ ನಿರ್ವಹಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು.

ಪರಿಸರ ಸಂರಕ್ಷಣೆ ಕುರಿತ ಫಲಕಗಳನ್ನು ಪ್ರದರ್ಶಿಸಲಾಯಿತು. ಇದೇ ವೇಳೆ  ಶಾಲಾವರಣದಲ್ಲಿ ವಿವಿಧ ಜಾತಿಯ 50 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,