Header Ads Widget

Responsive Advertisement

ಡಿಸೆಂಬರ್, 31, 2021 ಪ್ರಮುಖ ಸುದ್ದಿಗಳು

ಡಿಸೆಂಬರ್, 31, 2021  ಪ್ರಮುಖ ಸುದ್ದಿಗಳು

                                                                                                                                                                               

   ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ; ಗ್ರಂಥಾಲಯ ಉದ್ಘಾಟನೆ






ಮಡಿಕೇರಿ ಡಿ.31 -‘ಒಂದು ಒಳ್ಳೆಯ ಪುಸ್ತಕ ನೂರು ಸ್ನೇಹಿತರಿಗೆ ಸಮ’ ಆಗಿದ್ದು, ಒಳ್ಳೆಯ ಪುಸ್ತಕ ಅಧ್ಯಯನದಿಂದ ಮಾನಸಿಕ ನೆಮ್ಮದಿ ಮತ್ತು ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಸಾಹಿತಿಗಳು ಮತ್ತು ಚಿಂತಕರಾದ ಅರವಿಂದ ಚೊಕ್ಕಾಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   
     ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಭೋದಕ ಆಸ್ಪತ್ರೆಯಲ್ಲಿ ‘ಅಕ್ಷರ ಆರೋಗ್ಯ ಅಭಿಯಾನ’ ಪ್ರಯುಕ್ತ ಗ್ರಂಥಾಲಯ ಉದ್ಘಾಟಿಸಿ, ಬಳಿಕ ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಕಾವೇರಿ ಬ್ಲಾಕ್‌ನ ಉಪನ್ಯಾಸ ಕೊಠಡಿಯಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
     ಪುಸ್ತಕ ಓದುವುದರಿಂದ ವಿಶಾಲ ಮನೋಭಾವ ಬೆಳೆಯುತ್ತದೆ. ಜೊತೆಗೆ ಅಗಾಧ ಜ್ಞಾನ ಶಕ್ತಿ ಪಡೆಯಬಹುದಾಗಿದೆ. ಆದ್ದರಿಂದ ಗ್ರಂಥಾಲಯ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.  
     ಪ್ರತಿಯೊಬ್ಬರ ಚಲನಶೀಲತೆಗೆ ಪುಸ್ತಕದ ಒಡನಾಟ ಇರಬೇಕು. ಆ ನಿಟ್ಟಿನಲ್ಲಿ ಅಲ್ಲಲ್ಲಿ ಗ್ರಂಥಾಲಯ ಆರಂಭಿಸಬೇಕು. ಗ್ರಂಥಾಲಯದ ಪುಸ್ತಕದ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು.
      ಪ್ರತಿಯೊಬ್ಬರ ಜೀವನದಲ್ಲೂ ಗುರಿ ಇರುತ್ತದೆ. ಅದನ್ನು ಸಾಧಿಸಲು ಹೆಚ್ಚಿನ ಪುಸ್ತಕ ಅಧ್ಯಯನ ಮಾಡಬೇಕು. ಪುಸ್ತಕ ಮೂಲಕ ಅನುಭವ ಅಂತರAಗದ ಧಾರಣ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ನುಡಿದರು.  
      ಸೃಜನಶೀಲ ಸಾಹಿತ್ಯಕ್ಕೆ ಗ್ರಂಥಾಲಯ ಸಹಕಾರಿಯಾಗಿದ್ದು, ಆ ದಿಸೆಯಲ್ಲಿ ಕಥೆ, ಕಾವ್ಯ, ಕವಿತೆ, ಕಾದಂಬರಿ ಹಾಗೂ ಆತ್ಮ ಕಥನಗಳನ್ನು ಅಧ್ಯಯನ ಮಾಡಬೇಕು ಎಂದು ಅರವಿಂದ ಚೊಕ್ಕಾಡಿ ಅವರು ಹೇಳಿದರು. 
      ಒಳ್ಳೆಯ ಪುಸ್ತಕವನ್ನು ಓದುವುದರಿಂದ ಜೀವನವನ್ನು ಸಮಗ್ರ ದೃಷ್ಟಿ ಕೋನದಿಂದ ನೋಡಲು ಸಹಕಾರಿಯಾಗುತ್ತದೆ. ಸಾಹಿತ್ಯವು ಪ್ರತಿಯೊಬ್ಬರನ್ನು ಹೆಚ್ಚು ಸಂವೇದನಾಶೀಲರನ್ನಾಗಿ ಮಾಡುತ್ತದೆ ಎಂದರು.  
      ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಲಾಗಿದ್ದು, ಇವುಗಳ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು.  
      ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ನಂಜುAಡೇಗೌಡ ಅವರು ಮಾತನಾಡಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಭೋದಕ ಆಸ್ಪತ್ರೆಯಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ. ಒಳ್ಳೆಯ ಪುಸ್ತಕ ನೀಡುವ ಮೂಲಕ ಎಲ್ಲರೂ ಕೈಜೋಡಿಸುವಂತೆ ಅವರು ಮನವಿ ಮಾಡಿದರು.  
      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಮಾತನಾಡಿ ಗ್ರಂಥಾಲಯ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದ್ದು, ಪ್ರಚಲಿತ ವಿದ್ಯಮಾನಗಳು ಹಾಗೂ ಪುಸ್ತಕಗಳ ಅಧ್ಯಯನದಿಂದ ಉತ್ತಮ ಮಾಹಿತಿ ಪಡೆದು ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
      ಜಿಲ್ಲಾ ಶಸ್ತçಚಿಕಿತ್ಸಕರು ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಎಸ್.ಮಂಜುನಾಥ್, ನಿವಾಸಿ ವೈದ್ಯಕೀಯ ಅಧಿಕಾರಿ ಡಾ.ರೂಪೇಶ್ ಗೋಪಾಲ್, ಡಾ.ಮನೋಹರ್ ಪಾಟ್ಕರ್ ಇತರರು ಇದ್ದರು. 
     ಡಾ.ರಾಘವೇಂದ್ರ ನಿರೂಪಿಸಿದರು. ಡಾ.ದರ್ಶನ್ ಸ್ವಾಗತಿಸಿದರು. ವೈದ್ಯಕೀಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ.ಕುಶ್ವಂತ್ ಕೋಳಿಬೈಲು ವಂದಿಸಿದರು. 

6.07 ಕೋಟಿ ರೂ ಬೆಳೆಹಾನಿ ಪರಿಹಾರ ವಿತರಣೆ 

        ಮಡಿಕೇರಿ ಡಿ.31 :-ಕೊಡಗು ಜಿಲ್ಲೆಯಲ್ಲಿ ಬೆಳೆ ಹಾನಿ ಸಂಬAಧ 10ನೇ ಹಂತದಲ್ಲಿ 4975 ಮಂದಿ ರೈತರ ಬ್ಯಾಂಕ್ ಖಾತೆಗಳಿಗೆ ರೂ. 6.07 ಕೋಟಿ ಬೆಳೆ ಪರಿಹಾರ ಜಮೆ ಮಾಡಲಾಗಿದೆ.  
ಈ ವರ್ಷ ಬೆಳೆ ಹಾನಿ ಸಂಬAಧ ಒಟ್ಟಾಗಿ 44,626 ಮಂದಿ ರೈತರ ಖಾತೆಗಳಿಗೆ ರೂ.59.29 ಕೋಟಿ ಪರಿಹಾರ ವನ್ನು ಆಧಾರ್ ಬೇಸ್ಡ್ ಪೇಮೆಂಟ್ ಮೂಲಕ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. 

ಜ.03 ರಂದು ಕೈಮಗ್ಗ ಉತ್ಪನ್ನ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ 

      ಮಡಿಕೇರಿ ಡಿ.31:-ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಜನವರಿ, 03 ರಿಂದ 12 ರವರೆಗೆ ಕಾವೇರಿ ವಸ್ತçಸಿರಿ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವು ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ. 

      ಕಾವೇರಿ ವಸ್ತçಸಿರಿ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಕಾರ್ಯಕ್ರಮವು ಜನವರಿ, 03 ರಂದು ಮಧ್ಯಾಹ್ನ 3 ಗಂಟೆಗೆ  ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ. 
      ಶಾಸಕರಾದ ಎಂ.ಪಿ.ಅಪ್ಪಚ್ಚುರAಜನ್, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ. ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಎಚ್.ಎನ್.ಶಂಕರ್ ನಾರಾಯಣ್, ಬೆಂಗಳೂರು ದಕ್ಷಿಣ ವಲಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರಾದ ಎ.ಸುರೇಶ್ ಕುಮಾರ್,  ಪೌರಾಯುಕ್ತರಾದ ರಾಮದಾಸ್, ಜಿ.ಪಂ.ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಇತರರು ಪಾಲ್ಗೊಳ್ಳಲಿದ್ದಾರೆ.        

  ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 21 ಹೊಸ ಕೋವಿಡ್-19 ಪ್ರಕರಣ

      ಮಡಿಕೇರಿ ಡಿ.31 :-ಜಿಲ್ಲೆಯಲ್ಲಿ ಶುಕ್ರವಾರ 21 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.  21 ಪ್ರಕರಣಗಳು ಆರ್‌ಟಿಪಿಸಿಆರ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. 
      ಮಡಿಕೇರಿ ತಾಲ್ಲೂಕಿನಲ್ಲಿ 11, ವಿರಾಜಪೇಟೆ ತಾಲ್ಲೂಕಿನಲ್ಲಿ 05, ಸೋಮವಾರಪೇಟೆ ತಾಲ್ಲೂಕಿನಲ್ಲಿ 05 ಹೊಸ ಕೋವಿಡ್-19 ಪ್ರಕರಣಗಳು ಕಂಡುಬAದಿದೆ.            
      ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 35,954 ಆಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 29 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 35,249 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 438 ಮರಣ ಪ್ರಕರಣಗಳು ವರದಿಯಾಗಿದೆ. 267 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಸಾವು ಉಂಟಾಗಿಲ್ಲ, ಕಂಟೈನ್‌ಮೆAಟ್ ವಲಯಗಳ ಸಂಖ್ಯೆ 40 ಆಗಿದೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.1 ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.        

ಜ.1 ರಂದು ಉಪನ್ಯಾಸಕರಿಗೆ ಕೊಡವ ಭಾಷೆ ಕಲಿಕೆ ಕಾರ್ಯಗಾರ

      ಮಡಿಕೇರಿ ಡಿ.31 :-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಜನವರಿ, 1 ರಂದು ಬೆಳಗ್ಗೆ 10 ಗಂಟೆಗೆ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಉಪನ್ಯಾಸಕರಿಗೆ ಕೊಡವ ಭಾಷೆ ಕಲಿಕೆಯ ಕಾರ್ಯಗಾರ ನಡೆಯಲಿದೆ.   
      ಕಾರ್ಯಾಗಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ, ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದ ಅಧ್ಯಕ್ಷರಾದ ಮಂಡೆಚAಡ ದಿನೇಶ್ ಚಿಟ್ಟಿಯಪ್ಪ, ಜಿ.ಪಂ.ಮಾಜಿ ಸದಸ್ಯರು ಹಾಗೂ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷರಾದ ಬಾನಂಡ ಎನ್.ಪ್ರಥ್ವಿ, ಸಮಾಜ ಸೇವಕ ಮಾಚಿಮಾಡ ರವೀಂದ್ರ ಅವರು ಪಾಲ್ಗೊಳ್ಳಲಿದ್ದಾರೆ. 
      ಬಾಚರಣ ಯಂಡ ಪಿ.ಅಪ್ಪಣ್ಣ, ನಾಗೇಶ್ ಕಾಲೂರು, ಕಾಳಿಮಾಡ ಮೋಟಯ್ಯ, ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ಕಾರ್ಯಾಗಾರದಲ್ಲಿ ಭಾಗವಹಿಸುವ ಉಪನ್ಯಾಸಕರಿಗೆ ತರಬೇತಿ ನೀಡಲಿದ್ದಾರೆ. ಪಡಿಞರಂಡ ಪ್ರಭುಕುಮಾರ್ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.  


ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ 

     ಮಡಿಕೇರಿ ಡಿ.31 :-ಕುಶಾಲನಗರ ಪಟ್ಟಣ ಪಂಚಾಯಿತಿಯ ಎಸ್‌ಎಫ್‌ಸಿ.ಅನುದಾನ ಮತ್ತು  ಪ.ಪಂ.ನಿಧಿಯ ಶೇ.24.1 ರ ಪರಿಶಿಷ್ಟ ಜಾತಿ, ಪಂಗಡದವರ, ಶೇ.7.25 ರ ಇತರೆ ಬಡಜನರ ಹಾಗೂ ಶೇ.5 ರ ಅಂಗವಿಕಲರ ಕಲ್ಯಾಣ ನಿಧಿಯ ಕಾರ್ಯಕ್ರಮದಡಿ ವ್ಯಕ್ತಿ ಸಂಬAಧಿತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.    
      ಈ ಸೌಲಭ್ಯ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಸಂಬAಧಪಟ್ಟ ದಾಖಲಾತಿಗಳೊಂದಿಗೆ ಜನವರಿ, 15 ರೊಳಗೆ  ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ ಕುಶಾಲನಗರ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಪಟ್ಟಣ ಪಂಚಾಯಿತಿ ಕಚೇರಿಯಿಂದ ಪಡೆಯಬಹುದು ಎಂದು ಕುಶಾಲನಗರ ಪ.ಪಂ.ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು ತಿಳಿಸಿದ್ದಾರೆ.     
ವಿವಿಧ ಕಾರ್ಯಕ್ರಮಗಳ ವಿವರ ಇಂತಿದೆ: ಶೇ.7.25 ರ ಅನುದಾನ ವೈಯಕ್ತಿಕ ಸಂಬAಧಿತ ಕಾರ್ಯಕ್ರಮ: ಯಶಸ್ವಿನಿ ಯೋಜನೆಯ ನಿಯಮ ಮತ್ತು ದರಗಳಂತೆ ಶಸ್ತç ಚಿಕಿತ್ಸೆಗೆ ಧನ ಸಹಾಯ ನೀಡುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢಿಕರಣ ಪತ್ರ. ಭಾವಚಿತ್ರ-02 ಸಂಖ್ಯೆ. ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ.(ಆದಾಯ ಮೂರು ಲಕ್ಷದೊಳಗಿರಬೇಕು), ಜಾತಿ ಪ್ರಮಾಣ ಪತ್ರ, ಶಸ್ತç ಚಿಕಿತ್ಸೆಗೆ ಒಳಗಾಗುವ ರೋಗಿಯ ದವಾಖಾನೆಯ ದೃಡೀಕರಣ ಪತ್ರ ಸಲ್ಲಿಸಬೇಕು.  
    ಶೇ.24.10 ರ ಪರಿಶಿಷ್ಟ ಜಾತಿ ವ್ಯಕ್ತಿ ಸಂಬAಧಿಸಿದ ಕಾರ್ಯಕ್ರಮ: ಮನೆ ದುರಸ್ತಿ/ ಮಾರ್ಪಾಡು ಮಾಡಲು ಸಹಾಯಧನ. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢಿಕರಣ ಪತ್ರ.,  ಭಾವಚಿತ್ರ-03, ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ. (ಆದಾಯ ಮೂರು ಲಕ್ಷದೊಳಗಿರಬೇಕು),  ಬ್ಯಾಂಕಿನ ಉಳಿತಾಯ ಖಾತೆ ಪಾಸ್ ಬುಕ್ ಪ್ರತಿ, ಜಾತಿ ಪ್ರಮಾಣ ಪತ್ರ, ಹಾಲಿ ವಾಸವಾಗಿರುವ ಮನೆ ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್.ನಂಬರ್ ಇರುವ ಇತ್ತೀಚಿನ ಬಿಲ್ ಹಾಗೂ ರಶೀದಿ, ಪ್ರಸಕ್ತ ವರ್ಷದ ಇ-ಆಸ್ತಿ ನಮೂನೆ ಪ್ರತಿ ಸಲ್ಲಿಸುವುದು.


      ಶೇ.5 ರ  ವ್ಯಕ್ತಿ  ಸಂಬAಧಿಸಿದ ಕಾರ್ಯಕ್ರಮ:-ಶೇ.5ರ ಪಟ್ಟಣ ಪಂಚಾಯಿತಿಗೆ ಎಸ್‌ಎಫ್‌ಸಿ ಅನುದಾನ ವ್ಯಕ್ತಿ ಸಂಬAಧಿಸಿದ ಕಾರ್ಯಕ್ರಮ. ವಿಕಲಚೇತನ ಫಲಾನುಭವಿಗಳಿಗೆ ಒಂದು ಬಾರಿ ಜೀವ ವಿಮೆ ಮಾಡಿಸುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢಿಕರಣ ಪತ್ರ, ಭಾವಚಿತ್ರ-03 ಸಂಖ್ಯೆ, ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ(ಆದಾಯ ಮೂರು ಲಕ್ಷದೊಳಗಿರಬೇಕು), ಜಾತಿ ಪ್ರಮಾಣ ಪತ್ರ,  ಅಂಗವಿಕಲತೆ ಬಗ್ಗೆ ಸಕ್ಷಮ ಪ್ರಾಧಿಕಾರಿಂದ ಪಡೆದಿರುವ ಪ್ರಮಾಣ ಪತ್ರದ ಪ್ರತಿ ಸಲ್ಲಿಸಬೇಕು. ಅರ್ಜಿದಾರರು ಸೌಲಭ್ಯ ಪಡೆಯಲು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಲ್ಲವೆಂದು /ಸುಳ್ಳು ಮಾಹಿತಿ ನೀಡಿಲ್ಲವೆಂದು ನೋಟರೀಕೃತ ಪ್ರಮಾಣಪತ್ರ (ಮಾದರಿ ನಮೂನೆಯನ್ನು ಕಚೇರಿಯ ನಾಮ ಫಲಕದಲ್ಲಿ ನೋಡುವುದು), ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ.
       ಶೇ.7.25ರ  ವ್ಯಕ್ತಿ ಸಂಬAಧಿಸಿದ ಕಾರ್ಯಕ್ರಮ:- ನಗರ ಬಡ ವಿದ್ಯಾರ್ಥಿಗಳಲ್ಲಿ ಎಸ್‌ಎಸ್‌ಎಲ್‌ಸಿ/ ಪಿಯುಸಿ ಓದುತ್ತಿರುವ ಮೆರಿಟ್ ಆಧಾರದ ಮೇಲೆ ಟ್ಯಾಬ್ ನೀಡುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢಿಕರಣ ಪತ್ರ, ಭಾವಚಿತ್ರ-03 ಸಂಖ್ಯೆ, ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ (ಆದಾಯ ಮೂರು ಲಕ್ಷದೊಳಗಿರಬೇಕು), ಜಾತಿ ಪ್ರಮಾಣ ಪತ್ರ, ವ್ಯಾಸಂಗ ದೃಢೀಕರಣ ಪತ್ರದ ಪ್ರತಿ ಸಲ್ಲಿಸಬೇಕು.  ಅರ್ಜಿದಾರರು ಸೌಲಭ್ಯ ಪಡೆಯಲು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಲ್ಲವೆಂದು /ಸುಳ್ಳು ಮಾಹಿತಿ ನೀಡಿಲ್ಲವೆಂದು ನೋಟರೀಕೃತ ಪ್ರಮಾಣಪತ್ರ (ಮಾದರಿ ನಮೂನೆಯನ್ನು ಕಚೇರಿಯ ನಾಮಫಲಕದಲ್ಲಿ ನೋಡುವುದು), ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ.  
ಶೇ.24.10ರ ವೈಯಕ್ತಿಕ ಸಂಬAಧಿಸಿದ ಕಾರ್ಯಕ್ರಮ:- ಪರಿಶಿಷ್ಟ ಜಾತಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢಿಕರಣ ಪತ್ರ, ಭಾವಚಿತ್ರ-03 ಸಂಖ್ಯೆ, ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ(ಆದಾಯ ಮೂರು ಲಕ್ಷದೊಳಗಿರಬೇಕು), ಜಾತಿ ಪ್ರಮಾಣ ಪತ್ರ, ಹೂಲಿಗೆ ತರಬೇತಿ ಪಡೆದಿರುವ ಬಗ್ಗೆ ದೃಢೀಕರಣ ಪತ್ರ ಪ್ರತಿ. ಈ ಸೌಲಭ್ಯವನ್ನು ಪಡೆದಿಲ್ಲದಿರುವ ಈ ಇಲಾಖೆಯಿಂದ ಅಂಬೇಡ್ಕರ್ ನಿಗಮ/ಸಮಾಜ ಕಲ್ಯಾಣ ಇಲಾಖೆಯಲ್ಲಿ ದೃಢಿಕರಣ ಪತ್ರ ಸಲ್ಲಿಸುವುದು. 
ಶೇ.24.10ರ ವೈಯಕ್ತಿಕ ಸಂಬAಧಿಸಿದ ಕಾರ್ಯಕ್ರಮ:- ಪರಿಶಿಷ್ಟ ಪಂಗಡ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಡೀಕರಣ ಪತ್ರ, ಭಾವಚಿತ್ರ-03 ಸಂಖ್ಯೆ, ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ(ಆದಾಯ ಮೂರು ಲಕ್ಷದೊಳಗಿರಬೇಕು), ಜಾತಿ ಪ್ರಮಾಣ ಪತ್ರ, ಹೂಲಿಗೆ ತರಬೇತಿ ಪಡೆದಿರುವ ಬಗ್ಗೆ ದೃಢೀಕರಣ ಪತ್ರದ ಪ್ರತಿ, ಈ ಸೌಲಭ್ಯವನ್ನು ಇತರೆ ಇಲಾಖೆಯಲ್ಲಿ ಪಡೆಯದೇ ಇರುವ ಬಗ್ಗೆ ಸಮಾಜ ಕಲ್ಯಾಣ/ಅಂಬೇಡ್ಕರ್ ನಿಗಮದಿಂದ ದೃಢೀಕರಣ ಪತ್ರ ಸಲ್ಲಿಸಬೇಕು ಎಂದು ಕುಶಾಲನಗರ ಪ.ಪಂ.ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು ತಿಳಿಸಿದ್ದಾರೆ.   

ಜಾನುವಾರು ರೋಗ ನಿಯಂತ್ರಣ ರಾಷ್ಟಿçÃಯ ಕಾರ್ಯಕ್ರಮದ ವಿವರ

ಮಡಿಕೇರಿ ಡಿ.31 :-ಪಶುಪಾಲನಾ ಇಲಾಖಾ ವತಿಯಿಂದ ಜಿಲ್ಲೆಯಲ್ಲಿ ಜನವರಿ, 18 ರವರೆಗೆ 2 ನೇ ಸುತ್ತಿನ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಆದ್ದರಿಂದ ಜಿಲ್ಲೆಯ ರೈತರು ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ಮನವಿ ಮಾಡಿದ್ದಾರೆ.  
     ಲಸಿಕಾ ಕಾರ್ಯಕ್ರಮದ ವಿವರ ಇಂತಿದೆ: ಜನವರಿ, 01 ರಂದು ಮಡಿಕೇರಿ ತಾ. ಅರುವತ್ತೊಕ್ಲು, ಬಲ್ಲಮಾವಟಿ, ಕುಂಬಳದಾಳು, ಕಾಂತೂರು ಮೂರ್ನಾಡು, ವಿರಾಜಪೇಟೆ ತಾ. ಚೆಂಬೆಬೆಳ್ಳೂರು, ಮೈತಾಡಿ, ಬಾಡಗಬಾಣಂಗಾಲ, ಹರಿಹರ, ಕುಂದ, ನೋಕ್ಯ. ಸೋಮವಾರಪೇಟೆ ನಂಜರಾಯಪಟ್ಟಣ, 7 ನೇ ಹೋಸಕೋಟೆ, ಗೋಪಾಲಪುರ, ಹಿತ್ತಲ್‌ಕೇರಿ, ದೊಡ್ಡತೋಳೂರು. 
ಜನವರಿ, 02 ರಂದು ಮಡಿಕೇರಿ ತಾ. ಅರುವತ್ತೊಕ್ಲು, ಪಾಲೂರು, ಬಲ್ಲಮಾವಟಿ, ಪೇರೂರು, ಕಾಂತೂರು ಮೂರ್ನಾಡು. ಸೋಮವಾರಪೇಟೆ ತಾ. ನಂಜರಾಯಪಟ್ಟಣ, ಹುಲುಸೆ, 7 ನೇ ಹೋಸಕೋಟೆ, ಮುಳ್ಳೂರು, ನಿಡ್ತ, ತೋಳೂರು ಶೆಟ್ಟಳ್ಳಿ.
ಜನವರಿ, 03 ರಂದು ಮಡಿಕೇರಿ ತಾ. ಪಾಲೂರು, ಕಾರುಗುಂದ, ಪೇರೂರು, ಎಮ್ಮೆಮಾಡು,ಎಂ ಬಾಡಗ. ವಿರಾಜಪೇಟೆ ತಾ. ಚೆಂಬೆಬೆಳ್ಳೂರು, ಮೈತಾಡಿ, ಕೊಳತ್ತೊಡು ಬೈಗೋಡು, ಮೇಕೂರು, ಹೂಸಕೇರಿ, ಹರಿಹರ, ಬಾಡಗರಕೇರಿ, ಕುಂದ, ನೋಕ್ಯ, ಅರಕೇರಿ ಅರಣ್ಯ-1. ಸೋಮವಾರಪೇಟೆ ತಾ. ಹೆಬ್ಬಾಲೆ, ಅತ್ತೂರು ನಲ್ಲೂರು, ಮೆಣಸ, ತೋಳೂರು ಶೆಟ್ಟಳ್ಳಿ.
ಜನವರಿ, 04 ರಂದು ಮಡಿಕೇರಿ ತಾ. ಕಾರುಗುಂದ, ಬೇಂಗೂರು, ಎಮ್ಮೆಮಾಡು, ಎಂ. ಬಾಡಗ, ಕಿಗ್ಗಾಲು. ವಿರಾಜಪೇಟೆ ತಾ. ದೇವಣಗೇರಿ, ಮೈತಾಡಿ, ಹಾತೂರು, ಚೆನ್ನಯ್ಯನಕೋಟೆ, ಬಾಡಗರಕೇರಿ,ತೆರಾಲು, ಕುಂದ, ಕಿರುಗೂರು, ಕೈಕೇರಿ. ಸೋಮವಾರಪೇಟೆ ತಾ. ಹೆಬ್ಬಾಲೆ, ಹೆರೂರು, ಅಂಕನಳ್ಳಿ, ಕೂತಿ. 
ಜನವರಿ, 05 ರಂದು ಮಡಿಕೇರಿ ತಾ. ಬೇಂಗೂರು, ಕೊಳಗದಾಳು, ನೆಲಜಿ, ಕಿಗ್ಗಾಲು. ವಿರಾಜಪೇಟೆ ತಾ.  ಐಮಂಗಲ, ಮೈತಾಡಿ, ನಲ್ವತ್ತೋಕ್ಲು, ಹಾತೂರು, ಚೆನ್ನಯ್ಯನಕೋಟೆ, ತೆರಾಲು, ಕಿರುಗೂರು, ಗೋಣ ಕೊಪ್ಪ. ಸೋಮವಾರಪೇಟೆ ತಾ. ಹೆಬ್ಬಾಲೆ, ಹೆರೂರು, ಮೈಲಾತ್‌ಪುರ, ತಲ್ತೆರೆಶೆಟ್ಟಳ್ಳಿ. 
ಜನವರಿ, 06 ರಂದು ಮಡಿಕೇರಿ ತಾ. ಕೊಳಗದಾಳು, ನೆಲಜಿ, ಕುಂಜಿಲ, ಮರಗೋಡು. ವಿರಾಜಪೇಟೆ ತಾ. ಮಗ್ಗುಲ, ಬಿಳುಗುಂದ, ಚೆನ್ನಯ್ಯನಕೋಟೆ, ತೆರಾಲು, ಪರಗಟಗೇರಿ, ಕಿರುಗೂರು, ಅರುವತ್ತೋಕ್ಲು. ಸೋಮವಾರಪೇಟೆ ತಾ. ತೊರೆನೂರು, ಹೆರೂರು, ಹಾರೋಹಳ್ಳಿ, ಶಾಂತಳ್ಳಿ. 


ಜನವರಿ, 07 ರಂದು ಮಡಿಕೇರಿ ತಾ. ಕೊಳಗದಾಳು, ಬಿ. ಬಾಡಗ, ಕುಂಜಿಲ, ಮರಗೋಡು, ಅರೆಕಾಡು. ವಿರಾಜಪೇಟೆ ತಾ. ಕುಟ್ಟಂದಿ, ವಿ.ಬಾಡಗ, ಹೊಸೂರು, ಪರಗಟಗೇರಿ, ಕಿರುಗೂರು. ಸೋಮವಾರಪೇಟೆ ತಾ. ತೊರೆನೂರು, ಚೇರಳ, ಶ್ರೀಮಂಗಲ, ಮಾಲಂಬಿ, ಅಭಿಮಠ.
ಜನವರಿ, 08 ರಂದು ಮಡಿಕೇರಿ ತಾ. ಬಿ.ಬಾಡಗ, ಕೋಪಟ್ಟಿ, ನಾಲಡಿ, ಯುವಕಪಾಡಿ(ಮರಂದೋಡ), ಹೊಸ್ಕೇರಿ. ಸೋಮವಾರಪೇಟೆ ತಾ. ತೊರೆನೂರು, ಚೇರಳ, ಶ್ರೀಮಂಗಲ, ಆಲೂರು, ಬೆಟ್ಟದಳ್ಳಿ.
ಜನವರಿ, 09 ರಂದು ಮಡಿಕೇರಿ ತಾ. ಕೋಪಟ್ಟಿ, ಸಿಂಗತ್ತೂರು, ಯುವಕಪಾಡಿ(ಮರಂದೋಡ), ಹೊಸ್ಕೇರಿ, ಸೊಡ್ಲೂರು, ಕಟ್ಟೆಮಾಡು. ಸೋಮವಾರಪೇಟೆ ತಾಲ್ಲೂಕಿನ ತೊರೆನೂರು, ಚೇರಳ, ಶ್ರೀಮಂಗಲ, ದೊಡ್ಡಕಣಗಾಲು, ಬೆಟ್ಟದಳ್ಳಿ.
ಜನವರಿ, 10 ರಂದು ಮಡಿಕೇರಿ ತಾ. ಸಿಂಗತ್ತೂರು, ನರಿಯಂದಡ, ಸೊಡ್ಲೂರು, ಕಟ್ಟೆಮಾಡು, ಬಲಮುರಿ. ವಿರಾಜಪೇಟೆ ತಾ.  ವಿ.ಬಾಡಗ, ಕಾರ್ಮಾಡು, ಚಿಕ್ಕಮಂಡೂರು. ಸೋಮವಾರಪೇಟೆ ತಾ. ತೊರೆನೂರು, ಇರಳವಳಮುಡಿ, ಕೂಡ್ಲೂರುಚೆಟ್ಟಳ್ಳಿ, ಕುಂದಳ್ಳಿ.
ಜನವರಿ, 11  ರಂದು ಮಡಿಕೇರಿ ತಾ. ಸಿಂಗತ್ತೂರು, ಸಂಪಾಜೆ, ಕೋಕೇರಿ, ಬಲಮುರಿ. ವಿರಾಜಪೇಟೆ ತಾ. 1 ನೇ ರುದ್ರಗುಪ್ಪೆ, ಅಮ್ಮತ್ತಿ, ಹೊಸಕೋಟೆ, ಚಿಕ್ಕಮಂಡೂರು, ಬಲ್ಯಮಂಡೂರು. ಸೋಮವಾರಪೇಟೆ ತಾ.ತೊರೆನೂರು, ನೆಲ್ಲಿಹುದಿಕೇರಿ, ಕೊತ್ತನಳ್ಳಿ, ನೆಲ್ಲಿದುದಿಕೇರಿ, ತೋರೆನೂರು.
ಜನವರಿ, 12 ರಂದು ಮಡಿಕೇರಿ ತಾ. ಸಂಪಾಜೆ, ಚೆಂಬು, ಊರುಬೈಲು, ಕುದುರೆಪಾಯಿ, ಮೇಲ್ಚೆಂಬು, ಕೊಳಕೇರಿ, ಕಿರುಂದಾಡು. ವಿರಾಜಪೇಟೆ ತಾ. 1 ನೇ ರುದ್ರಗುಪ್ಪೆ,  ಬಿ ಶೆಟ್ಟಿಗೇರಿ, ಕಾವಾಡಿ, ಬಲ್ಯಮಂಡೂರು, ಬೇಗೂರು.  ಸೋಮವಾರಪೇಟೆ ತಾ. ಮಣಜೂರು, ನೆಲ್ಲಿಹುದಿಕೇರಿ, ಹರಗ. 
ಜನವರಿ, 13 ರಂದು ಮಡಿಕೇರಿ ತಾ. ಚೆಂಬು, ಬೇತು, ಕಿರುಂದಾಡು, ಕೊಣಂಜಗೇರಿ, ವಿರಾಜಪೇಟೆ ತಾ. ಬಿ.ಶೆಟ್ಟಿಗೇರಿ, ಕಣ್ಣಂಗಾಲ, ಬೆಗೂರು, ಮುಗುಟಗೇರಿ. ಸೋಮವಾರಪೇಟೆ ತಾಲ್ಲೂಕಿನ ಶಿರಂಗಾಲ, ಅಭ್ಯತ್‌ಮಂಗಲ, ಹರಗ.
ಜನವರಿ, 14 ರಂದು ಮಡಿಕೇರಿ ತಾ. ಚೆಂಬು, ನಾಪೋಕ್ಲು, ಕೊಣಂಜಗೇರಿ. ಸೋಮವಾರಪೇಟೆ ತಾ. ಶಿರಂಗಾಲ ವಾಲ್ನೂರು ತ್ಯಾಗತ್ತೂರು, ಕುಮಾರಳ್ಳಿ.
ಜನವರಿ, 15 ರಂದು ಮಡಿಕೇರಿ ತಾ. ಚೆಂಬು, ಕೆ.ಪೆರಾಜೆ, ನಾಪೋಕ್ಲು, ಹೊದವಾಡ, ಚೇಲಾವರ, ಕರಡ. ವಿರಾಜಪೇಟೆ ತಾ. ಹಚ್ಚಿನಾಡು, ಯಡೂರು, ಹಾಲುಗುಂದ. ಸೋಮವಾರಪೇಟೆ ತಾ. ಶಿರಂಗಾಲ, ವಾಲ್ನೂರು ತ್ಯಾಗತ್ತೂರು, ಕುಮಾರಳ್ಳಿ.
ಜನವರಿ, 16 ರಂದು ಮಡಿಕೇರಿ ತಾ. ಕೆ.ಪೆರಾಜೆ, ಕರಿಕೆ, ಅರಪಟ್ಟು. ಜನವರಿ, 17 ರಂದು ಮಡಿಕೇರಿ ತಾ. ಕರಿಕೆ. ವಿರಾಜಪೇಟೆ ತಾ. ಹಾಲುಗುಂದ ಜನವರಿ, 18 ರಂದು ವಿರಾಜಪೇಟೆ ಕಳತ್ಮಾಡು ಮತ್ತು ಬೈರಂಬಾಡ ಇಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. 


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,