ಸುಜಾ ಕುಶಾಲಪ್ಪಗೆ 705 ಹಾಗೂ ಡಾ.ಮಂಥರ್ ಗೌಡ ಅವರಿಗೆ 603 ಮತ
ಮಡಿಕೇರಿ ಡಿ.14: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಏಕ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಂ.ಪಿ.ಕುಶಾಲಪ್ಪ(ಸುಜಾ) ಅವರು 705 ಮತ ಪಡೆದು ಜಯಗಳಿಸಿದ್ದಾರೆ. ಹಾಗೆಯೇ ಡಾ.ಮಂಥರ್ ಗೌಡ ಅವರು 603 ಮತ ಪಡೆದಿದ್ದಾರೆ.
ಜಿಲ್ಲೆಯಲ್ಲಿ 1325 ಮತದಾನವಾಗಿದ್ದು, ಇದರಲ್ಲಿ 17 ಮತಗಳು ತಿರಸ್ಕøತವಾಗಿದ್ದು, ಉಳಿದಂತೆ 1308 ಮತಗಳಲ್ಲಿ 705 ಮತಗಳನ್ನು ಸುಜಾ ಕುಶಾಲಪ್ಪ ಅವರು ಪಡೆದಿದ್ದಾರೆ. ಹಾಗೆಯೇ 603 ಮತಗಳನ್ನು ಡಾ.ಮಂಥರ್ ಗೌಡ ಅವರು ಪಡೆದಿದ್ದಾರೆ. ಒಟ್ಟಾರೆ 102 ಮತಗಳ ಅಂತರದಿಂದ ಸುಜಾ ಕುಶಾಲಪ್ಪ ಅವರು ಜಯ ಗಳಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಧನ್ಯವಾದ ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯ ಮತ ಎಣಿಕೆಯು ಚುನಾವಣಾ ವೀಕ್ಷಕರಾದ ಡಾ.ಆರ್.ವಿಶಾಲ್ ಅವರ ಉಪಸ್ಥಿತಿಯಲ್ಲಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ನೇತೃತ್ವದಲ್ಲಿ ನಗರದ ಸಂತ ಜೋಸೆಫರ ಶಾಲೆಯಲ್ಲಿ ಮಂಗಳವಾರ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ತಹಶೀಲ್ದಾರ್ ಪಿ.ಎಸ್.ಮಹೇಶ್, ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ಇತರರು ಇದ್ದರು.
ತಹಶೀಲ್ದಾರರಾದ ಗೋವಿಂದರಾಜು, ಯೋಗಾನಂದ, ಡಿಡಿಎಲ್‍ಆರ್ ಪಿ.ಶ್ರೀನಿವಾಸ್, ಶೇಖರ್, ಪ್ರಮೋದ್, ವಿರೂಪಾಕ್ಷ ಸೇರಿದಂತೆ ಮತ ಎಣಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಮತ ಎಣಿಕೆಯನ್ನು ವ್ಯವಸ್ಥಿತವಾಗಿ ನಡೆಸಿದರು.
ಇನ್ನಷ್ಟು ಮಾಹಿತಿ; ಟೇಬಲ್ ನಂಬರ್ 1 ರಲ್ಲಿ 200 ಮತಗಳಿಗೆ ಎಂ.ಪಿ.ಕುಶಾಲಪ್ಪ ಅವರಿಗೆ 99, ಮಂಥರ್ ಗೌಡ ಅವರಿಗೆ 99 ಮತ ಪಡೆದಿದ್ದು, 2 ಮತಗಳು ತಿರಸ್ಕøತಗೊಂಡಿವೆ. ಟೇಬಲ್ ನಂಬರ್ 2 ರಲ್ಲಿ ಎಂ.ಪಿ.ಕುಶಾಲಪ್ಪ 95, ಮಂಥರ್ ಗೌಡ 99 ಮತಗಳನ್ನು ಪಡೆದಿದ್ದು, 6 ಮತಗಳು ತಿರಸ್ಕøತಗೊಂಡಿವೆ. ಟೇಬಲ್ ನಂಬರ್ 3 ರಲ್ಲಿ ಎಂ.ಪಿ.ಕುಶಾಲಪ್ಪಗೆ 89, ಮಂಥರ್ ಗೌಡ 110 ಮತಗಳನ್ನು ಪಡೆದಿದ್ದು, 01 ಮತ ತಿರಸ್ಕøತಗೊಂಡಿವೆ. ಟೇಬಲ್ ನಂಬರ್ 4 ರಲ್ಲಿ ಎಂ.ಪಿ.ಕುಶಾಲಪ್ಪಗೆ 100, ಮಂಥರ್ ಗೌಡ 98 ಮತಗಳನ್ನು ಪಡೆದಿದ್ದು, 02 ಮತಗಳು ತಿರಸ್ಕøತಗೊಂಡಿವೆ. ಟೇಬಲ್ ನಂಬರ್ 5 ರಲ್ಲಿ ಎಂ.ಪಿ.ಕುಶಾಲಪ್ಪಗೆ 117, ಮಂಥರ್ ಗೌಡ 81 ಮತಗಳನ್ನು ಪಡೆದಿದ್ದು, 02 ಮತಗಳು ತಿರಸ್ಕøತಗೊಂಡಿವೆ. ಟೇಬಲ್ ನಂಬರ್ 6 ರಲ್ಲಿ ಎಂ.ಪಿ.ಕುಶಾಲಪ್ಪಗೆ 139, ಮಂಥರ್ ಗೌಡ ಅವರು 59 ಮತಗಳನ್ನು ಪಡೆದಿದ್ದು, 02 ಮತಗಳು ತಿರಸ್ಕøತಗೊಂಡಿವೆ. ಉಳಿದಂತೆ 125 ಮತಗಳಲ್ಲಿ ಎಂ.ಪಿ.ಕುಶಾಲಪ್ಪಗೆ 66 ಮತ್ತು ಮಂಥರ್ ಗೌಡ 57 ಮತಗಳನ್ನು ಪಡೆದಿದ್ದಾರೆ. 2 ಮತಗಳು ತಿರಸ್ಕøತಗೊಂಡಿವೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network