Header Ads Widget

Responsive Advertisement

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅರೆಭಾಷೆ ದಿನಾಚರಣೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅರೆಭಾಷೆ ದಿನಾಚರಣೆ


ಮಡಿಕೇರಿ ಡಿ.16: ಕರ್ನಾಟಕ ಅರೆಭಾಷೆ ಅಕಾಡೆಮಿಯ ಸ್ಥಾಪನೆಯು ಹಿರಿಯರು, ಯುವ ಜನರು ಹಾಗೂ ಅರೆಭಾಷಿಕರ ಹಗಲುರಾತ್ರಿ ದುಡಿಮೆಯ ಪ್ರತಿಫಲವಾಗಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟಗಳ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ತಿಳಿಸಿದ್ದಾರೆ.   

ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅರೆಭಾಷೆ ದಿನಾಚರಣೆ ಪ್ರಯುಕ್ತ ಎನ್.ಎಸ್.ದೇವಿಪ್ರಸಾದ್ ಅವರ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. 

ಅರೆಭಾಷೆ ಅಕಾಡೆಮಿಯು 10 ವರ್ಷಗಳನ್ನು ಪೂರೈಸಿದ ಐತಿಹಾಸಿಕ ದಿನದ ಬಗ್ಗೆ ನೆನಪು ಮಾಡುವ ಕಾರ್ಯಕ್ರಮವಾಗಿದ್ದು, ಜಿಲ್ಲೆಯ ಮೂಲೆ ಮೂಲೆಯ ಜನರ ಧ್ವನಿಯನ್ನು ಒಗ್ಗೂಡಿಸಿ ಅರೆಭಾಷೆ ಅಕಾಡೆಮಿ ರೂಪಿಸಲಾಗಿದೆ. ಈ ದಿನವನ್ನು ರಾಜ್ಯಾದ್ಯಂತ ಹಲವಾರು ಕಡೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ. ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ಅರೆಭಾಷೆಯ ಮಹತ್ವವನ್ನು ಎಲ್ಲರಲ್ಲಿಯೂ ಬಿತ್ತುವಂತೆ ಸೂರ್ತಲೆ ಸೋಮಣ್ಣ ಅವರು ಸಲಹೆ ಮಾಡಿದರು. 

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಕಜಗದ್ದೆ ಅವರು ಮಾತನಾಡಿ ಪ್ರತಿಯೊಬ್ಬರೂ ಅಕಾಡೆಮಿಗಾಗಿ ದುಡಿದವರನ್ನು ಸ್ಮರಿಸಿ ಅವರ ಶ್ರಮ ಮತ್ತು ಧ್ಯೇಯೆಗಳನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸುವುದು ಅರೆಭಾಷೆ ಅಕಾಡೆಮಿ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು.

ಅರೆಭಾಷೆಯನ್ನು ಬೆಳೆಸಬೆಕೆಂದರೆ ಕಲೆ, ಸಾಹಿತ್ಯ ಸುಗಮ ಸಂಗೀತ, ಕತೆ, ಕಾದಂಬರಿ ಮೂಲಕ ಭಾಷೆಗೆ ಬೌಧ್ಧಿಕ ಶ್ರೀಮಂತಿಕೆಯನ್ನು ಹೆಚ್ಚಿಸಬೇಕು ಎಂದರು. 

ಕಳೆದ ಹಲವು ತಿಂಗಳಿಂದ ಅರೆಭಾಷೆಗೆ ಸಂಬಂಧಿಸಿದಂತೆ ಶಬ್ಧಕೋಶ, ಪಾರಂಪರಿಕ ಕೋಶ, ಪುಸ್ತಕ ರೂಪದಲ್ಲಿ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯು ಶ್ರಮಿಸುತ್ತಿದೆ ಎಂದರು. 

ಮುಖ್ಯ ಭಾಷಣಕಾರರಾದ ಪಟ್ಟಡ ಶಿವಕುಮಾರ ಅವರು ಮಾತನಾಡಿ ರಾಜ್ಯಾದ್ಯಂತ 18 ಕಡೆಗಳಲ್ಲಿ ಅರೆಭಾಷೆ ದಿನಾಚರಣೆ ನಡೆಯುತ್ತಿದೆ. ಪ್ರತಿಯೊಬ್ಬ ಅರೆಭಾಷಿಕನ ನಿಸ್ವಾರ್ಥ ಸೇವೆ ಮತ್ತು ತಪಸ್ಸಿನ ಫಲವೇ ಅರೆಭಾಷೆ ಅಕಾಡೆಮಿಯು ಬೆಳವಣಿಗೆಗೆ ಕೊಡುಗೆಯಾಗಿದೆ. ಗೌಡ ಜನಾಂಗಕ್ಕೆ 90 ರ ದಶಕವು ಕ್ರಾಂತಿಯಿಂದ ಕೂಡಿದ್ದು ಅದರ ಫಲ ಇಂದಿನ ಅರೆಭಾಷೆ ದಿನಾಚರಣೆಯಾಗಿದೆ ಎಂದರು. 

ರಂಗ ಪ್ರಯೋಗದ ಮೂಲಕ ಅಕಾಡೆಮಿಯ ಕಾರ್ಯವೈಖರಿಯು ವಿಬಿನ್ನವಾಗಿದ್ದು, ಆ ದಿಸೆಯಲ್ಲಿ ಮುಂದಿನ ತಲೆಮಾರಿಗೆ ಸಂಸ್ಕøತಿಯನ್ನು ಪಸರಿಸುವ ಕಾರ್ಯ, ಸಂಸ್ಕøತಿ ಶಿಬಿರ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಮುಂದಿನ ಪೀಳಿಗೆಯು ಅರೆಭಾಷೆಯ ಪ್ರಾಚೀನ ಸಂಸ್ಕøತಿಯನ್ನು ಬೆಳೆಸುವ ಮತ್ತು ಕಲಿಸುವ ಕಾರ್ಯ ಅಕಾಡೆಮಿಯಿಂದ ನಡೆಯಬೇಕಿದೆ. ಅರೆಭಾಷೆ ಭಾಷಾ ವೈವಿದ್ಯತೆ, ಭಾಷಾ ಪ್ರೌಢಿಮೆ ಹೆಚ್ಚಾಗುತ್ತಿದ್ದು, ಬಹು ಮಾದ್ಯಮಗಳಲ್ಲಿಯೂ ಭಾಷೆಯ ಬಳಕೆ ಅಧಿಕವಾಗಿದೆ. ಭಾಷೆಯ ಬಳಕೆಯಿಂದ ಮಾತ್ರ ಭಾಷೆ ಬೆಳವಣಿಗೆ ಸಾದ್ಯವಾಗುತ್ತದೆ ಎಂದು ಪಟ್ಟಡ ಶಿವಕುಮಾರ್ ಅವರು ಹೇಳಿದರು

ಮಡಿಕೇರಿ ನಗರಸಭಾ ಸದಸ್ಯರಾದ ಮಹೇಶ್ ಜೈನಿ ಅವರು ಮಾತನಾಡಿ ಅರೆಭಾಷೆಯು ಹರಿಯುವ ನದಿಯಂತೆ ನಿರಂತರ ಪ್ರಕ್ರಿಯೆ ಹೊಂದಿದೆ. ಉತ್ತಮ ರೀತಿಯ ಜನ ಸ್ಪಂದನೆ ಅಕಾಡೆಮಿಗೆ ದೊರೆಯುತ್ತಿದ್ದು, ಅರೆಭಾಷೆ  ಕಾರ್ಯಕ್ರಮಗಳು ಹೆಚ್ಚು ಹೆಚ್ಚು  ನಡೆಯುವಂತಾಗಲಿ ಎಂದರು. 

ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಅರೆಭಾಷೆ ಸಂಸ್ಕøತಿ, ಸಾಹಿತ್ಯ ಅಚಾರ-ವಿಚಾರ ಸೊಬಾನೆ ಗೀತೆ, ಕ್ರೀಡಾ ಮನೋಭಾವ ಮುಂತಾದ ವಿಷಯಗಳಲ್ಲಿ ಅಕಾಡೆಮಿಯು ಹೆಚ್ಚಿನ ಕಾಳಜಿ ತೋರುತ್ತಿರುವುದು ಭಾಷಾ ಬೆಳವಣಿಗೆ ಮೇಲಿನ ಅಪಾರ ಪ್ರೀತಿ ಸೂಚಿಸುತ್ತದೆ. ಜನಪರ ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗುತ್ತದೆ ಎಂದರು. 

 ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಪ್ರೇಮ ರಾಘವಯ್ಯ, ಧನಂಜಯ ಕಗೋಳಿಕಜೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಕೆ.ಟಿ.ದರ್ಶನ, ಪ್ರಮುಖರಾದ ತುಂತಜೆ ಗಣೇಶ್ ಇತರರು ಇದ್ದರು. ಅಕಾಡೆಮಿ ಸದಸ್ಯರಾದ ಕೂಡಕಂಡಿ ದಯಾನಂದ ನಿರೂಪಿಸಿದರು, ಎ.ಟಿ.ಕುಸುಮಾದರ್ ಸ್ವಾಗತಿಸಿದರು, ಪುರುಷೋತ್ತಮ ಕಿರ್ಲಾಯ ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,