Header Ads Widget

Responsive Advertisement

ಮತದಾರರ ಪಟ್ಟಿ; ಚುನಾವಣಾ ಆಯೋಗದ ನಿರ್ದೇಶನ ಪಾಲಿಸಿ: ಅನ್ಬುಕುಮಾರ್

ಮತದಾರರ ಪಟ್ಟಿ; ಚುನಾವಣಾ ಆಯೋಗದ ನಿರ್ದೇಶನ ಪಾಲಿಸಿ: ಅನ್ಬುಕುಮಾರ್


ಮಡಿಕೇರಿ ಡಿ.28: ಜನವರಿ 1, 2022 ಅರ್ಹತಾ ದಿನಾಂಕದಂತೆ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೈಗೊಳ್ಳುವಂತೆ ಮತದಾರರ ಪಟ್ಟಿ ವೀಕ್ಷಕರಾದ ವಿ.ಅನ್ಬು ಕುಮಾರ್ ಅವರು ಸೂಚಿಸಿದ್ದಾರೆ. 

 ಕೊಡಗು ಜಿಲ್ಲೆಗೆ ಮತದಾರರ ಪಟ್ಟಿ ಸಂಬಂಧಿಸಿದಂತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಹಶೀಲ್ದಾರರು ನಮೂನೆ-6,7,8 ಮತ್ತು 8 ಎ ಗಳನ್ನು ನಿಯಮಾನುಸಾರ ಇತ್ಯರ್ಥಗೊಳಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. 

ಮತದಾನದ ಹಕ್ಕು ಸಾಂವಿಧಾನಿಕ ಹಕ್ಕು ಆಗಿದ್ದು, 18 ವರ್ಷ ಮೀರಿದ ಭಾರತೀಯ ಪ್ರಜೆಗೆ ಈ ಮತದಾನ ಹಕ್ಕನ್ನು ಒಗದಿಸುವುದು ಮತದಾರರ ನೋಂದಣಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಮತದಾರರ ಪಟ್ಟಿ ವೀಕ್ಷಕರು ತಿಳಿಸಿದರು. 

 ಕ್ಲೇಮು ಮತ್ತು ಆಕ್ಷೇಪಣೆ ಸ್ವೀಕರಿಸುವ ಅವಧಿಯಲ್ಲಿ ಮತಗಟ್ಟೆವಾರು ಸ್ವೀಕೃತವಾಗಿರುವ ಒಟ್ಟು ನಮೂನೆ, ಅಂಗೀಕಾರ ಮತ್ತು ತಿರಸ್ಕøತ ಅಂಕಿ ಅಂಶಗಳ ವಿವರವನ್ನು ನೀಡುವುದು. ಬೂತ್ ಮಟ್ಟದ ಅಧಿಕಾರಿಗಳು ನಮೂನೆಗಳನ್ನು ತಾಲ್ಲೂಕು ಕಚೇರಿಗೆ ನೀಡಿದ್ದು, ತಾಲ್ಲೂಕು ಕಚೇರಿಯಲ್ಲಿ ಡಾಟಾ ಎಂಟ್ರಿ ಮಾಡದೇ ಬಾಕಿ ಇರುವ ಅರ್ಜಿಗಳ ಮತಗಟ್ಟೆವಾರು ವಿವರ ನೀಡುವುದು. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹೆಸರು ಸೇರ್ಪಡೆಗೆ ಸಲ್ಲಿಸಲಾದ ನಮೂನೆ-6ನ್ನು ತಿರಸ್ಕರಿಸಿದ್ದಲ್ಲಿ, ಮತದಾರರ ನೋಂದಣಾಧಿಕಾರಿ ಅವರ ಆದೇಶದ ವಿರುದ್ಧ ಮತದಾರರು ಮೇಲ್ಮನವಿ ಸಲ್ಲಿಸಲು ನಿಯಮಗಳಲ್ಲಿ ಅವಕಾಶ ಇರುವುದರಿಂದ ತಿರಸ್ಕರಿಸಿದ ಎಲ್ಲಾ ನಮೂನೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅರ್ಜಿದಾರರಿಗೆ ರಿಜಿಸ್ಟರ್ ಪೋಸ್ಟ್ (ಆರ್‍ಪಿಎಡಿ) ಮೂಲಕ ಮಾಹಿತಿ ನೀಡುವಂತೆ ವಿ.ಅನ್ಬುಕುಮಾರ್ ಅವರು ಹೇಳಿದರು.  

ವಯಸ್ಸಿನ ಬಗ್ಗೆ ಮತ್ತು ವಿಳಾಸದ ಬಗ್ಗೆ ದಾಖಲೆಗಳನ್ನು ಪಡೆದು ಸೇರ್ಪಡೆ ಮಾಡುವುದು. ಯಾವುದೇ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸಬಾರದು. ನಮೂನೆಗಳಲ್ಲಿ ಯಾವುದೇ ದಾಖಲೆಗಳ/ ಮಾಹಿತಿ ಕೊರತೆ ಇದ್ದಲ್ಲಿ ಸಂಬಂಧಪಟ್ಟ ಅರ್ಜಿದಾರರನ್ನು ಸಂಪರ್ಕಿಸಿ, ದಾಖಲೆಗಳನ್ನು ಪಡೆದು ಸೇರ್ಪಡೆ ಮಾಡುವುದು. ಪ್ರತಿ ಅರ್ಜಿಗಳಿಗೆ ಕಚೇರಿ ಆದೇಶ ಮಾಡುವಂತೆ ಸೂಚಿಸಿದರು. 

ಎಲ್ಲಾ ನಮೂನೆ-7 ರ ಅರ್ಜಿಗಳಿಗೆ ಸಂಬಂಧಿಸಿದಂತೆ ನೋಟೀಸ್‍ನ್ನು ಕಡ್ಡಾಯವಾಗಿ ನೀಡಿರುವ ಬಗ್ಗೆ ಪರಿಶೀಲಿಸುವುದು. ಅತೀ ಹೆಚ್ಚು ನಮೂನೆ-6, 7, 8 ಮತ್ತು 8 ಎ ಸ್ವೀಕೃತವಾಗಿರುವ/ ಡಾಟಾ ಎಂಟ್ರಿ ಆಗಿರುವ ಮತಗಟ್ಟೆಗಳ ನಮೂನೆಗಳನ್ನು ತಹಶೀಲ್ದಾರರು ಕಡ್ಡಾಯವಾಗಿ ಮತ್ತೊಮ್ಮೆ ಸ್ಥಳ ಪರಿಶೀಲಿಸಬೇಕು. ಅತೀ ಕಡಿಮೆ / ಶೂನ್ಯ ನಮೂನೆ-6, 7, 8 ಮತ್ತು 8 ಎ ಸ್ವೀಕೃತವಾಗಿರುವ / ಡಾಟಾ ಎಂಟ್ರಿ ಆಗಿರುವ ಮತಗಟ್ಟೆಗಳನ್ನು ತಹಶೀಲ್ದಾರರು ಕಡ್ಡಾಯವಾಗಿ ಮತ್ತೊಮ್ಮೆ ಸ್ಥಳ ಪರಿಶೀಲಿಸಿ, ಖಚಿತಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದರು. 

20 ವರ್ಷ ಮೇಲ್ಪಟ್ಟ ಅರ್ಜಿದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ, ಸಂಬಂಧಪಟ್ಟವರು ಈ ಹಿಂದೆ ನೋಂದಣಿಯಾಗಿರುವ ಬಗ್ಗೆ, ಆಗದೇ ಇರುವ ಬಗ್ಗೆ ಯಾವುದೇ ದಾಖಲೆಗಳು ಇರುವ ಬಗ್ಗೆ ಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಗತ್ಯ ಕ್ರಮ ವಹಿಸುವಂತೆ  ಮತದಾರ ಪಟ್ಟಿ ವೀಕ್ಷಕರಾದ ವಿ.ಅನ್ಬುಕುಮಾರ್ ಅವರು ಸ್ಪಷ್ಟ ನಿರ್ದೇಶನ ನೀಡಿದರು. 

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನ ಪಾಲಿಸಬೇಕು. 18 ವರ್ಷ ಪೂರ್ಣಗೊಂಡವರೆಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವಂತಾಗಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ತಹಶೀಲ್ದಾರರಾದ ಮಹೇಶ್, ಯೋಗಾನಂದ, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಇತರರು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,