Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ


ಮಡಿಕೇರಿ ಡಿ.07: ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯು ಮಂಗಳವಾರ ಜರುಗಿತು.  

 ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿನ ಯುದ್ಧ ಸ್ಮಾರಕಕ್ಕೆ ಕರ್ನಲ್(ನಿವೃತ್ತ) ಎನ್.ಶರತ್ ಭಂಡಾರಿ, ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ, ಕರ್ನಲ್(ನಿವೃತ್ತ) ಕಂಡ್ರತಂಡ ಸುಬ್ಬಯ್ಯ, ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ, ಕರ್ನಲ್ ಚೇತನ್ ದಿಮನ್, ಲೆಪ್ಟಿನೆಂಟ್ ಕರ್ನಲ್(ನಿವೃತ್ತ) ದೇವಯ್ಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಆರ್.ಶೆಟ್ಟಿ ಇತರರು ಪುಷ್ಪ ಗುಚ್ಛ ಸಮರ್ಪಿಸಿ, ಗೌರವ ನಮನ ಸಲ್ಲಿಸಿದರು. 

 ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದರು. ಮೌನಾಚರಿಸಲಾಯಿತು. ಕರ್ನಲ್(ನಿವೃತ್ತ) ಎನ್.ಶರತ್ ಭಂಡಾರಿ ಅವರು ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಿದರು.         

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕರ್ನಲ್(ನಿವೃತ್ತ) ಎನ್.ಶರತ್ ಭಂಡಾರಿ ಅವರು ಕೊಡಗು ನಾಡು ಭಾರತದಲ್ಲಿಯೇ ಹೆಚ್ಚಿನ ಸೇನಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೀಡಿರುವ ಜಿಲ್ಲೆಯಾಗಿದೆ ಎಂದರು.   

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಂದರ್ಭದಲ್ಲಿ ಸಂಗ್ರಹವಾದ ನಿಧಿಯಿಂದ ಮಾಜಿ ಸೈನಿಕರು ಹಾಗೂ ಇತರೆ ಸೈನಿಕರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ಶರತ್ ಭಂಡಾರಿ ಅವರು ನುಡಿದರು. 

ರಾಷ್ಟ್ರದಲ್ಲಿ 32 ಸೈನಿಕ ಕಲ್ಯಾಣ ರಾಜ್ಯ ಮಂಡಳಿ ಹಾಗೂ 372 ಜಿಲ್ಲಾ ಸೈನಿಕ ಕಲ್ಯಾಣ ಮಂಡಳಿ ಇದ್ದು, ಸೈನಿಕರ ಕಲ್ಯಾಣಕ್ಕಾಗಿ ಮಂಡಳಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು. ಮಾಜಿ ಸೈನಿಕರು, ಪೊಲೀಸ್ ಸಿಬ್ಬಂಧಿಗಳು ಇತರರು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,