Header Ads Widget

ಸರ್ಚ್ ಕೂರ್ಗ್ ಮೀಡಿಯ

ಜನವರಿ, 02, 2022 ಪ್ರಮುಖ ಸುದ್ದಿಗಳು

ಜನವರಿ, 02, 2022  ಪ್ರಮುಖ ಸುದ್ದಿಗಳು

ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶ 
ಮಡಿಕೇರಿ ಜ.02:-ವೃತ್ತಿಪರ ಶಿಕ್ಷಣ ಮೊದಲನೇ ವರ್ಷದಲ್ಲಿ ಓದುತ್ತಿರುವ ಮಾಜಿ ಸೈನಿಕರ ಮಕ್ಕಳಿಗೆ (ಸೈನ್ಯಾಧಿಕಾರಿಗಳ ಮಕ್ಕಳನ್ನು ಹೊರತುಪಡಿಸಿ) ಕೇಂದ್ರಿಯ ಸೈನಿಕ ಮಂಡಳಿಯಿAದ ಪ್ರಧಾನಮಂತ್ರಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಜನವರಿ, 31 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರೀಯ ಸೈನಿಕ ಮಂಡಳಿಯು ಘೋಷಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು (WWW.KSB.GOV.IN) ನಲ್ಲಿ ಸಲ್ಲಿಸಬಹುದು.

ಅಂತೆಯೇ ಒಂದನೇ ತರಗತಿಯಿಂದ ಪದವಿಯವರೆಗೆ (ವೃತ್ತಿಪರ ಶಿಕ್ಷಣ ಹೊರತುಪಡಿಸಿ) ಓದುತ್ತಿರುವ ಮಾಜಿ ಸೈನಿಕರ (ಹವಿಲ್ದಾರ್ ರ‍್ಯಾಂಕಿನವರೆಗಿನ) ಮಕ್ಕಳಿಗೆ ಶಿಷ್ಯವೇತನಕ್ಕೆ ಜನವರಿ, 07 ರ ವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರೀಯ ಸೈನಿಕ ಮಂಡಳಿ ತಿಳಿಸಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.   

ಜ.03 ರಂದು ಮಕ್ಕಳ ಕೋವಿಡ್-19 ಲಸಿಕಾಕರಣಕ್ಕೆ ಚಾಲನೆ 

ಮಡಿಕೇರಿ ಜ.01:-ಜಿಲ್ಲೆಯಾದ್ಯಂತ 15 ರಿಂದ 18 ವರ್ಷ ವಯೋಮಾನದ ಮಕ್ಕಳ ಕೋವಿಡ್-19 ಲಸಿಕಾಕರಣ ಚಾಲನಾ ಕಾರ್ಯಕ್ರಮವು ಜನವರಿ, 03 ರಂದು ಬೆಳಗ್ಗೆ 10 ಗಂಟೆಗೆ ಪಾಲಿಬೆಟ್ಟದ ಸರ್ಕಾರಿ ಪ್ರೌಢಶಾಲೆಯ ಹತ್ತಿರ ಮಹಿಳಾ ಸಮಾಜದಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ತಿಳಿಸಿದ್ದಾರೆ.  

ಸಾಲ ಸೌಲಭ್ಯ ಪಡೆಯಕ್ಕೆ ಅರ್ಜಿ ಆಹ್ವಾನ

ಮಡಿಕೇರಿ ಜ.01 :-2021-22 ನೇ ಸಾಲಿನ ಭಾರತ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ (ಪಿಎಂಇಜಿಪಿ) ಕಾರ್ಯಕ್ರಮದಡಿ ಕೈಗಾರಿಕೆ, ಉತ್ಪಾದನ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಸೈನಿಕ, ಅಂಗವಿಕಲರು, ಮಹಿಳೆಯರು, ಸಾಮಾನ್ಯ ವರ್ಗ, ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 

ಸ್ವಉದ್ಯೋಗ ಮಾಡಿಕೊಳ್ಳುವವರಿಗೆ, ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನೀAದ ಗರಿಷ್ಟ ರೂ.25 ಲಕ್ಷಗಳವರೆಗೆ ಸಾಲ ನೀಡಿ ಗರಿಷ್ಟ ಶೇ.25 ರಿಂದ 35 ರವರೆಗೆ ಸಹಾಯಧನವನ್ನು ನೀಡಲಾಗುವುದು. ಈ ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ www.kvic.org.in  (ಪಿಎಂಇಜಿಪಿ ಆನ್‌ಲೈನ್ ಅಪ್ಲಿಕೇಶನ್)ನಲ್ಲಿ ಅರ್ಜಿ ಸಲ್ಲಿಸುವಾಗ (ಏಜೆನ್ಸಿ ಕೋಡ್ ಕೆವಿಐಬಿ) ಎಂದು ಅರ್ಜಿಯಲ್ಲಿ ಅಳವಡಿಸಿ ಅದರ ಪ್ರತಿಯೊಂದಿಗೆ 2 ಸೆಟ್ ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸುವುದು. ಅಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ಪರಿಗಣ ಸುವುದಿಲ್ಲ.  

ಹೆಚ್ಚಿನ ವಿವರಗಳಿಗೆ ಎಚ್.ಆರ್.ರಾಮಕೃಷ್ಣ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕ ಕೇಂದ್ರದ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ, ಹಾಗೂ  ದೂ.ಸಂ.08272-225946, 9480825630 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಎಚ್.ಆರ್.ರಾಮಕೃಷ್ಣ ಅವರು ತಿಳಿಸಿದ್ದಾರೆ. 

ಜ.04 ಮತ್ತು 05 ರಂದು ಯುವ ಜನೋತ್ಸವ

ಮಡಿಕೇರಿ ಜ.02:-2021-22 ನೇ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವವು ಜನವರಿ, 04 ಮತ್ತು 05 ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯ/ ಮಹಾ ಸಂಸ್ಥಾನದಲ್ಲಿ ನಡೆಯಲಿದೆ.  

ಕೊಡಗು ಜಿಲ್ಲಾ ಮಟ್ಟದ ಯುವ ಜನೋತ್ಸವದಲ್ಲಿ ವಿಜೇತರಾದ ಸ್ಪರ್ಧಾಳುಗಳು ಜನವರಿ, 04 ಮತ್ತು 05 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಅವರು ಕೋರಿದ್ದಾರೆ.   


ಗ್ರಾಮ ಉಜಾಲಾ ಯೋಜನೆಯಡಿಯಲ್ಲಿ 10 ರೂಪಾಯಿಗೆ ಒಂದು ಬಲ್ಬ್ ನಂತೆ ಒಟ್ಟು5 ಎಲ್ಇಡಿ ಬಲ್ಬ್ ಗಳನ್ನು ಪಡೆಯಬಹುದು

ಗ್ರಾಮ ಉಜಾಲಾ ಯೋಜನೆಯಡಿಯಲ್ಲಿ 10 ರೂಪಾಯಿಗೆ ಒಂದು ಬಲ್ಬ್ ನಂತೆ ಒಟ್ಟು5 ಎಲ್ಇಡಿ ಬಲ್ಬ್ ಗಳನ್ನು ಪಡೆಯಬಹುದು. 


ಸಿಇಎಸ್ಎಲ್ ಸಾಂಪ್ರದಾಯಿಕ ಬಲ್ಬ್ ಗಳ ಬದಲಿಗೆ ಪ್ರತಿ ಬಲ್ಬ್ ಗೆ 10 ರೂಪಾಯಿ ದರದಲ್ಲಿ 3 ವರ್ಷಗಳ ಗ್ಯಾರೆಂಟಿಯೊಂದಿಗೆ ಉತ್ತಮ ಗುಣಮಟ್ಟದ 7W, ಮತ್ತು  12W LED ಬಲ್ಬ್ ಗಳನ್ನು ಗ್ರಾಮ ಉಜಾಲಾ ಯೋಜನೆಯಡಿ ನೀಡಲಾಗುವುದು. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ಗರಿಷ್ಠ 5 ಬಲ್ಬ್ ಗಳನ್ನು ನೀಡಲಾಗುವುದು. ಈ ಬಲ್ಬ್ ಗಳ ಬಳಕೆಯಿಂದ ಸಾಕಷ್ಟು ವಿದ್ಯುತ್ ಉಳಿತಾಯವಾಗುತ್ತದೆ.

ಗ್ರಾಮ ಉಜಾಲಾ ಯೋಜನೆಯಡಿಯಲ್ಲಿ ಪ್ರಸ್ತುತ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ ಮತ್ತು ಉತ್ತರ ಪ್ರದೇಶದ ರಾಜ್ಯದಲ್ಲಿ ಗ್ರಾಮ ಉಜಾಲಾ ಯೋಜನೆ ಜಾರಿಯಲ್ಲಿದೆ. ಗ್ರಾಮದ ಜನ ಕಡಿಮೆ ದರದಲ್ಲಿ ಅಂದರೆ ಕೇಲವ 10 ರೂಪಾಯಿಗೆ ಒಂದು ಬಲ್ಬ್ ನಂತೆ ಒಟ್ಟು 5 ಬಲ್ಬ್ ಗಳನ್ನು 5 ಎಲ್ಇಡಿ ಬಲ್ಬ್ ಪಡೆಯಬಹುದು. ಒಂದುವೇಳೆ ಎಲ್ಇಡಿಸಿ ಈ ಬಲ್ಬ್ ಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಲು ಹೋದರೆ ಒಂದು ಬಲ್ಬ್ ಗೆ ಸುಮಾರು 100 ರೂಪಾಯಿ ಬೇಕಾಗುತ್ತದೆ. ಹಾಗಾಗಿ  ಗ್ರಾಮೀಣ ಜನರಿಗೆ ಅನುಕೂಲವಾಗಲೆಂದು ಕಡಿಮೆ ದರದಲ್ಲಿ ವಿತರಿಸಲಾಗುತ್ತದೆ.  ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.

ಒಂದು ಕುಟುಂಬಕ್ಕೆ 5 ಎಲ್ಇಡಿ ಬಲ್ಬ್ ಗಳು ಸಿಗುತ್ತವೆ. ಈ ಬಲ್ಬ್ ಗಳನ್ನು ಸರ್ಕಾರಿ ಕಂಪನಿ ಕನ್ಸರ್ಜಿನ್ಸ್  ಎನರ್ಜಿ ಸರ್ವಿಸೆಸ್ ಲಿಮಿಟೆಡ್ (ಸಿಇಎಸ್ಎಲ್) ನೀಡುತ್ತದೆ.  ಈ ಬಲ್ಬ್ ಗಳನ್ನು ನಿಮ್ಮ ಗ್ರಾಮ ಪಂಚಾಯತಿ ಅಥವಾ ನಿಮ್ಮ ಹತ್ತಿರದ ಕೆಇಬಿ ಕಚೇರಿಯಲ್ಲಿ ಪಡೆಯಬಹುದು. ಗ್ರಾಮ ಉಜಾಲಾ ಯೋಜನೆಯಡಿಯಲ್ಲಿ ಒಂದು ಕುಟುಂಬವು  7 ರಿಂದ 12 ವ್ಯಾಟ್ ಗಳ 5 ಬಲ್ಬ್ ಗಳನ್ನು ಪಡೆಯಬಹುದು. 31ನೇ ಮಾರ್ಚ್ 2022 ರವರೆಗೆ ಈ ಬಲ್ಬ್ ಗಳನ್ನು ಗ್ರಾಮೀಣ ಪ್ರದೇಶದ ಜನರು ಪಡೆಯಬಹುದು.

ಈ ಯೋಜನೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಆರಂಭಿಸಲಾಗಿತ್ತು. ಡಿಸೆಂಬರ್ ತಿಂಗಳಲ್ಲಿ ರಾಷ್ಟ್ರೀ ಇಂಧನ ಸಂರಕ್ಷಣಾ ದಿನದ ಅಂಗವಾಗಿ 31 ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ. ಈ ಬಲ್ಬ್ ಗಳನ್ನು ಬಳಸುವುದರಿಂದ ವಿದ್ಯುತ್ ಉಳಿತಾಯವಾಗುತ್ತದೆ.  ಇಂಗಾಲದ ಹೊರಸೂಸುವಿಕೆ ಸಹ ಕಡಿಮೆ ಮಾಡಬಹುದು.  ಅಷ್ಟೇ ಅಲ್ಲ, ವಿದ್ಯುತ್ ಬಿಲ್ ಸಹ ಉಳಿತಾಯವಾಗುತ್ತದೆ.

ರೈತರಿಗೆ ಉಗ್ರಾಣ ಉಪಯುಕ್ತತೆ ಬಗ್ಗೆ ತರಬೇತಿ ಕಾರ್ಯಕ್ರಮ

ರೈತರಿಗೆ ಉಗ್ರಾಣ ಉಪಯುಕ್ತತೆ ಬಗ್ಗೆ ತರಬೇತಿ ಕಾರ್ಯಕ್ರಮ


ಮಡಿಕೇರಿ ಜ.01: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಉಗ್ರಾಣ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ, ಭಾರತೀಯ ರಾಷ್ಟ್ರೀಯ ಸಹಕಾರ ಯೂನಿಯನ್ ಇವರ ಸಂಯುಕ್ತಾಶ್ರಯದಲ್ಲಿ ರೈತರಿಗೆ ಉಗ್ರಾಣದ ಉಪಯುಕ್ತತೆ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವು ಕುಶಾಲನಗರದ ಎಪಿಸಿಎಂಎಸ್ ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ರೈತ ಸದಸ್ಯರು, ಎಪಿಸಿಎಂಎಸ್ ಕುಶಾಲನಗರ ಇದರ ಉಪಾಧ್ಯಕ್ಷರಾದ ಜಗದೀಶ್ ಹಾಗೂ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಧುಕರ್ ಹಾಗೂ ಹೊಸಗೌಡರ್, ಕೃಷಿ ವಿಜ್ಞಾನಿ ಮತ್ತು ಉಪನ್ಯಾಸಕರು, ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ, ರವಿಶಂಕರ್, ಉಪವ್ಯವಸ್ಥಾಪಕರು, ಬೀಜ ನಿಗಮ ನಿಯಮಿತ ಮೈಸೂರು, ಹಾಗೂ ನಗರದ ಕೆಐಸಿಎಂ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಆರ್.ಎಸ್.ರೇಣುಕಾ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಚುನಾವಣೆ ಕುರಿತು ಕಾರ್ಯಕ್ರಮ

ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಚುನಾವಣೆ ಕುರಿತು ಕಾರ್ಯಕ್ರಮ

ಸಹಕಾರ ಸಂಘಗಳ ಕಾಯ್ದೆ ಕಾನೂನು ತಿಳಿಯಿರಿ: ಮನುಮುತ್ತಪ್ಪ


ಮಡಿಕೇರಿ ಜ.01: ಸಹಕಾರ ಸಂಘಗಳ ಚುನಾವಣೆಗಳು ಸಕಾಲಿಕ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕಾನೂನು ಕಾಯ್ದೆಗಳು ರಚಿತವಾಗಿದ್ದು, ಅದರಲ್ಲಿರುವ ಅಂಶಗಳನ್ನು ಪ್ರತಿಯೊಬ್ಬ ಸಹಕಾರಿಯು ತಿಳಿಯುವುದು ಅವಶ್ಯಕ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಎ.ಕೆ.ಮನುಮುತ್ತಪ್ಪ  ತಿಳಿಸಿದರು.  

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಚುನಾವಣೆ ಕುರಿತು ಏರ್ಪಡಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ತತ್ವಗಳಲ್ಲಿ ಪ್ರಜಾಸತ್ತಾತ್ಮಕ ಸದಸ್ಯ ನಿಯಂತ್ರಣ ಎಂಬುದು ಸದಸ್ಯರು ಸದಸ್ಯರಿಗಾಗಿ ಇರುವುದೆಂಬುದನ್ನು ನಿರೂಪಿಸುತ್ತದೆ. ಸಹಕಾರ ಸಂಘಗಳಲ್ಲಿ ಅಂತಿಮ ಅಧಿಕಾರ ವಾರ್ಷಿಕ ಮಹಾಸಭೆಯಲ್ಲಿ ನೆಲೆಸಿರುತ್ತದೆ. ಸಹಕಾರ ಸಂಘಗಳ ನೀತಿ ರೂಪಿಸುವಲ್ಲಿ ಮತ್ತು ನಿರ್ಣಯ ಮಾಡುವ  ಪ್ರಕ್ರಿಯೆಗಳಲ್ಲಿ ಸದಸ್ಯರು ಸಕ್ರಿಯವಾಗಿ ಭಾಗವಹಿಸುವುದರಿಂದ ಸಂಘದ ಉದ್ದೇಶಗಳು ಸಫಲವಾಗುತ್ತವೆ ಎಂದರು. 

ಸಹಕಾರ ಸಂಘದ ಉದ್ದೇಶಗಳ ಸಾಧನೆಗಾಗಿ ಅಗತ್ಯ ನಿರ್ದೇಶನ ನೀಡುವುದಕ್ಕಾಗಿ ನಿರ್ದಿಷ್ಟ ಸಂಖ್ಯೆಯ ನಿರ್ದೇಶಕರನ್ನು ಹೊಂದಿರಲು ಸಹಕಾರ ಕಾಯ್ದೆ ಮತ್ತು ನಿಯಮಗಳು ಮತ್ತು ಉಪ ವಿಧಿಗಳಲ್ಲಿ ಅವಕಾಶ ನೀಡಲಾಗಿದೆ. ಚುನಾವಣೆಗಳು ನಿಯಮಾನುಸಾರ ನಡೆದಲ್ಲಿ ಮಾತ್ರ ಸಿಂಧುವಾಗುತ್ತದೆ ಎಂದು ಅವರು ನುಡಿದರು. 

ಸಹಕಾರ ಚುನಾವಣೆಗಳು ಪ್ರಾರಂಭಿಕ ಹಂತದಿಂದ ಕೊನೆಯ ಹಂತದವರೆಗೆ ಪರಿಶುದ್ಧತೆಯಿಂದ ನಿಖರವಾಗಿ ಪಾರದರ್ಶಕವಾಗಿ ಮತ್ತು ಸಕಾಲಿಕವಾಗಿ ನಡೆಯಬೇಕೆಂಬುದು ಕಾನೂನಿನ ಆಶಯವಾಗಿದೆ ಎಂದರು.  

ಸಂಘದ ಮುಖ್ಯ ಕಾರ್ಯ ನಿರ್ವಾಹಕರು ಕಾಯ್ದೆ ಮತ್ತು ನಿಯಮಗಳು ಆಗುವ ಬದಲಾವಣೆಗಳ ಕುರಿತು ಆಡಳಿತ ಮಂಡಳಿಯವರಿಗೆ ಮಾಹಿತಿಯನ್ನು ತಲುಪಿಸಿದಲ್ಲಿ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಎ.ಕೆ.ಮನುಮುತ್ತಪ್ಪ ಅವರು ನುಡಿದರು.  

ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ ಅವರು ಸಹಕಾರ ಚುನಾವಣಾ ಪ್ರಕ್ರಿಯೆ ನಡೆಸುವ ಕುರಿತು ಉಪನ್ಯಾಸ ನೀಡಿದರು. ಯೂನಿಯನ್ ನಿರ್ದೇಶಕರಾದ ರವಿಬಸಪ್ಪ, ಕನ್ನಂಡ ಸಂಪತ್, ಕೆ.ಎಂ.ತಮ್ಮಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಈ.ಮೋಹನ್ ಇತರರು ಇದ್ದರು. ವ್ಯವಸ್ಥಾಪಕಿ ಆರ್.ಮಂಜುಳಾ ಪ್ರಾರ್ಥಿಸಿದರು. ಸಿಇಒ ಯೋಗೇಂದ್ರ ನಾಯಕ್ ಅವರು ಸ್ವಾಗತಿಸಿದರು, ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,