Header Ads Widget

Responsive Advertisement

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಣ್ಣು ಪರೀಕ್ಷಾ ಘಟಕ ಉದ್ಘಾಟನೆ

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಣ್ಣು ಪರೀಕ್ಷಾ ಘಟಕ ಉದ್ಘಾಟನೆ

ಕೃಷಿಕರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕೆ.ಜಿ.ಬೋಪಯ್ಯ ಕರೆ


ತಾ.14.1.2022 ರಂದು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಸ್ಥೆಯ ನೂತನ ಅತ್ಯಾಧುನಿಕ ಮಣ್ಣು ಪರೀಕ್ಷಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಾಸಕ ಶ್ರೀ .ಕೆ.ಜಿ.ಬೋಪಯ್ಯರವರು ಪ್ರಸಕ್ತ ನಮ್ಮ ಕೃಷಿಕರು ತಮ್ಮ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮಣ್ಣು ಪರೀಕ್ಷೆ ಮಾಡಿ ಪೂರಕ ಸಾವಯವ ಗೊಬ್ಬರ ಬಳಕೆಯಂತಹ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕರೆ ನೀಡಿದರು

ಇದೇ ವೇಳೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಕೊಡಂದೇರ ಬಾಂಡ್ ಗಣಪತಿಯವರು ಪಯಸ್ವಿನಿ ಸಹಕಾರ ಸಂಸ್ಥೆಯು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಪ್ರಾರಂಭಿಸಿದ ನೂತನ ಯೋಜನೆ " ಸ್ವಾವಲಂಬಿ "ಮೊಟ್ಟೆ ಕೋಳಿ ಸಾಕಾಣಿಕೆ ಘಟಕಕ್ಕೆ ಸಾಲ ವಿತರಣೆ ಮಾಡುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಐಮರ ಇಕೋಲಾಜಿಕಲ್ ಫಾರ್ಮಿಂಗ್ ಟೆಕ್ನಾಲಜೀಸ್ ಸಂಸ್ಥೆಯ ಶ್ರೀ ಮಾದೆಟ್ಟಿರ ತಿಮ್ಮಯ್ಯರವರು ಮಣ್ಣು ಪರೀಕ್ಷೆಯ ವಿಧಾನ, ಅಗತ್ಯ, ಉಪಯುಕ್ತತೆ ಮತ್ತು ಮೊಟ್ಟೆ ಕೋಳಿ ಸಾಕಾಣಿಕೆಗೆ ಇರುವ ವಿಪುಲ ಅವಕಾಶವನ್ನು ವಿವರಿಸಿದರು

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಂಪಾಜೆಯ ಹಿರಿಯ ಸಾಹಿತಿ ,ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಶ್ರೀ ಎನ್.ಎಸ್.ದೇವಿಪ್ರಸಾದ್ ರವರಿಗೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಅದ್ಯಕ್ಷ ಶ್ರೀ ಅನಂತ್ .ಎನ್.ಸಿ ,ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅದ್ಯಕ್ಷ ಶ್ರೀ ಶಾಂತೆಯಂಡ ರವಿ ಕುಶಾಲಪ್ಪ ,ಅಕ್ರಮ ಸಕ್ರಮ ಸಮಿತಿಯ ಅದ್ಯಕ್ಷ ಶ್ರೀ ನಾಗೇಶ್ ಕುಂದಲ್ಪಾಡಿ  ಉಪಸ್ಥಿತರಿದ್ದರು.

ಶ್ರೀ ಯಶೋದರ.ಬಿ.ಜೆ ಕಾರ್ಯಕ್ರಮ ನಿರೂಪಣೆ ಮಾಡಿದ್ದು,ಉಪಾಧ್ಯಕ್ಷ ಶ್ರೀ ರಾಜಾರಾಮ ಕಳಗಿ ವಂದಿಸಿದರು.ಸಂಪಾಜೆ ಚೆಂಬು ಗ್ರಾಮಗಳ ಪ್ರಗತಿಪರ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,