Header Ads Widget

ಸರ್ಚ್ ಕೂರ್ಗ್ ಮೀಡಿಯ

ಶ್ರೀಮಂಗಲ ಪಶು ವೈದ್ಯ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಶ್ರೀಮಂಗಲ ಪಶು ವೈದ್ಯ ಶಾಲೆಯ ನೂತನ ಕಟ್ಟಡ ಉದ್ಘಾಟನೆ


ಶ್ರೀಮಂಗಲ ಪಶು ವೈದ್ಯ ಶಾಲೆಯ ನೂತನ ಕಟ್ಟಡವನ್ನು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪ್ಪಯ್ಯನವರು ದಿನಾಂಕ 31-01-2022ರ ಸೋಮವಾರದಂದು ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಸುಜಾ ಕುಶಾಲಪ್ಪ, ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎ.ಸಿ.ಜಯ, ಪಶು ಇಲಾಖೆಯ ಅಧಿಕಾರಿಗಳು, ಗಣ್ಯರಾದ ಚೋಡುಮಾಡ ಶರೀನ್‌ ಸುಬ್ಬಯ್ಯ, ಅರುಣ್‌ ಭೀಮಯ್ಯ, ಎಂ.ಟಿ.ಕಾರ್ಯಪ್ಪ, ಕೊಟ್ರಂಗಡ ತಿಮ್ಮು, ಕಟ್ಟಿ ಮಂದಯ್ಯ, ಎ.ಟಿ.ಚಂಗಪ್ಪ, ಲವ ಕುಶಾಲಪ್ಪ, ಅಜ್ಜಮಾಡ ಸುಬ್ಬಯ್ಯ, ಸಂದೀಪ್‌, ಕಾಲಿಮಾಡ ದಿಲೀಪ್‌ ಬೊಳ್ಳಜ್ಜಿರಾ ಸುಶೀಲ, ವಾಣಿ ಮಾದಪ್ಪ, ಕಟ್ಟೆರ ಈಶ್ವರ, ನೆಲ್ಲಿರ ಚಲನ್‌, ಗ್ರಾಮ ಪಂಚಾಯಿತಿ ಪಿ.ಡಿ.ಒ. ಸತೀಶ್‌, ಉಪಾಧ್ಯಕ್ಷೆ ಕಲ್ಪನಾ, ಸದಸ್ಯರಾದ ಮಾದೀರ ಸುದಿ ಮಲ್ಲಿಗೆ ಬೇಬಿ ಇತರ ಸದಸ್ಯರು ಹಾಗೂ ಮುಂತಾದವರು ಹಾಜರಿದ್ದರು. ‌


ಈ ಸಂದರ್ಭದಲ್ಲಿ ಕೆ.ಜಿ.ಬೋಪ್ಪಯ್ಯನವರ ಸಾಧನೆಯನ್ನು ಮತ್ತು ಅವರು ಈ ಭಾಗದಲ್ಲಿ ಮಾಡಿದ ಸಮಾಜಮುಖಿ ಕೆಲಸ ಕಾರ್ಯಗಳನ್ನು ಸಾರ್ವಜನಿಕರು ಪ್ರಶಂಸಿದರು. ವೈದ್ಯರಾದ ಡಾ.ಗಿರೀಶ್‌ ಕಾರ್ಯಕ್ರಮ ನಿರೂಪಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,