Header Ads Widget

Responsive Advertisement

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ ಸಮಾಲೋಚನಾ ಸಭೆ

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ ಸಮಾಲೋಚನಾ ಸಭೆ‌

ಮಡಿಕೇರಿ: ಕೊಡವ ನ್ಯಾಷನಕ್ ಕೌನ್ಸಿಲ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದ ಸಮೀಪವಿರುವ ಮಂದ್‍ನಲ್ಲಿ ಸಮಾಲೋಚನಾ ಸಭೆ ನಡೆಯಿತು.

ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊಡವರನ್ನು ಒಳಗೊಳ್ಳಲಿರುವ ಪರಿಪೂರ್ಣ ಗಣರಾಜ್ಯಕ್ಕಾಗಿ ಸಿಎನ್‍ಸಿ ಮುಂದಿಟ್ಟಿರುವ ಬೇಡಿಕೆಗಳಿಗೆ ಮನ್ನಣೆ ಸಿಗಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಭೆಯಲ್ಲಿ ಕೊಡವ ಜನಾಂಗವನ್ನು ಒಳಗೊಳ್ಳಲಿರುವ ಭಾರತ ಗಣರಾಜ್ಯ ಮಾತ್ರ ಪರಿಪೂರ್ಣ, ಕೊಡವ ಲ್ಯಾಂಡ್ ಜಿಯೋ ಪೊಲಿಟಿಕಲ್ ಅಟೋನಮಿ, ಕೊಡವ ರೇಸಿಗೆ ಸಂವಿಧಾನದಲ್ಲಿ ಬಡಕಟ್ಟು ಜನಾಂಗದ ಸ್ಥಾನಮಾನ, ಕೊಡವ ತಕ್ಕನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆ, ಕೊಡವ ರೇಸಿ ಗೆ ಬಂದೂಕು ಹಕ್ಕು ಅಬಾಧಿತವಾಗಿ ಮುಂದುವರೆಯುವ ಸಂವಿಧಾನದ 25, 26, 27, 28 ವಿಧಿಗಳಲ್ಲಿ ಧಾರ್ಮಿಕ ಸಂಸ್ಕೃತಿ ಎಂದು ಘೋಷಣೆ ಸೇರಿದಂತೆ ಕೊಡವರ ಭೂಮಿ, ಭಾಷೆ, ಸಂಸ್ಕೃತಿ, ಜನಪದ ನೆಲೆ ಎಲ್ಲದಕ್ಕೂ ರಾಜ್ಯಾಂಗ ಭದ್ರತೆ ನೀಡಬೇಕೆಂದು ಒತ್ತಾಯಿಸಲಾಯಿತು.

ಕೊಡವರ ಈ ಬೇಡಿಕೆಗಳು ಈಡೇರಿದಾಗ ಮಾತ್ರ ಭಾರತ ಗಣರಾಜ್ಯಕ್ಕೆ ಪರಿಪೂರ್ಣ ಅರ್ಥ ಬರಲಿದೆ. ಅಲ್ಲದೆ ಭಾರತ ಗಣರಾಜ್ಯ ನಿರ್ಮಾಣಕ್ಕಾಗಿ ಸುಭದ್ರ ಹಾಗೂ ಸುಂದರ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕೃತಜ್ಞತೆ ಮತ್ತು ಶ್ರದ್ಧಾಂಜಲಿ ಅರ್ಪಿಸಿದಂತ್ತಾಗುತ್ತದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಅಜ್ಜಿನಿಕಂಡ ಇನಿತ ಮಾಚಯ್ಯ, ಕಲಿಯಂಡ ಮೀನಾ ಪ್ರಕಾಶ್, ಪಟ್ಟಮಾಡ ಲಲಿತ ಗಣಪತಿ, ಅರೆಯಡ ಸವಿತ, ಪುಲ್ಲೇರ ಸ್ವಾತಿ ಕಾಳಪ್ಪ, ಮಣವಟ್ಟಿರ ರಮ್ಯ ಚಿಣ್ಣಪ್ಪ, ಮುಕ್ಕಾಟಿರ ರೋಜಿ ಗಣಪತಿ, ಕಂಗಂಡ ಶಶಿ, ಬೊಟ್ಟಂಗಡ ಸವಿತ ಮತ್ತು ಕಲಿಯಂಡ ಪ್ರಕಾಶ್, ಬೇಪಡಿಯಂಡ ದಿನು, ಅರೆಯಡ ಗಿರೀಶ್, ನಂದಿನೆರವಂಡ ವಿಜು, ಪುಲ್ಲೇರ ಕಾಳಪ್ಪ, ಪುದಿಯೊಕ್ಕಡ ಕಾಶಿ, ಮಣವಟ್ಟಿರ ಚಿಣ್ಣಪ್ಪ, ನಂದಿನೆರವಂಡ ಅಯ್ಯಣ್ಣ, ನಂದಿನೆರವಂಡ ಅಪ್ಪಯ್ಯ, ಕೂಪದಿರ ಸಾಬು, ಕೂಪದಿರ ಪ್ರಣಾಮ್, ಬೊಟ್ಟಂಗಡ ಗಿರೀಶ್, ಬಿಟ್ಟಂಗಡ ದೇವಯ್ಯ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶರೀನ್, ಪುಟ್ಟಿಚಂಡ ಡಾನ್ ದೇವಯ್ಯ, ಕೋಡಿರ ರತ್ನ ದೇವಯ್ಯ, ಚೋಳಪಂಡ ನಾಣಯ್ಯ, ಕೊಂಗೆಟ್ಟಿರ ಲೋಕೇಶ್ ಭಾಗವಹಿಸಿದ್ದರು.ಕೊಡವ ನ್ಯಾಷನಕ್ ಕೌನ್ಸಿಲ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದ ಸಮೀಪವಿರುವ ಮಂದ್‍ನಲ್ಲಿ ಸಮಾಲೋಚನಾ ಸಭೆ ನಡೆಯಿತು.

ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊಡವರನ್ನು ಒಳಗೊಳ್ಳಲಿರುವ ಪರಿಪೂರ್ಣ ಗಣರಾಜ್ಯಕ್ಕಾಗಿ ಸಿಎನ್‍ಸಿ ಮುಂದಿಟ್ಟಿರುವ ಬೇಡಿಕೆಗಳಿಗೆ ಮನ್ನಣೆ ಸಿಗಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಭೆಯಲ್ಲಿ ಕೊಡವ ಜನಾಂಗವನ್ನು ಒಳಗೊಳ್ಳಲಿರುವ ಭಾರತ ಗಣರಾಜ್ಯ ಮಾತ್ರ ಪರಿಪೂರ್ಣ, ಕೊಡವ ಲ್ಯಾಂಡ್ ಜಿಯೋ ಪೊಲಿಟಿಕಲ್ ಅಟೋನಮಿ, ಕೊಡವ ರೇಸಿಗೆ ಸಂವಿಧಾನದಲ್ಲಿ ಬಡಕಟ್ಟು ಜನಾಂಗದ ಸ್ಥಾನಮಾನ, ಕೊಡವ ತಕ್ಕನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆ, ಕೊಡವ ರೇಸಿ ಗೆ ಬಂದೂಕು ಹಕ್ಕು ಅಬಾಧಿತವಾಗಿ ಮುಂದುವರೆಯುವ ಸಂವಿಧಾನದ 25, 26, 27, 28 ವಿಧಿಗಳಲ್ಲಿ ಧಾರ್ಮಿಕ ಸಂಸ್ಕೃತಿ ಎಂದು ಘೋಷಣೆ ಸೇರಿದಂತೆ ಕೊಡವರ ಭೂಮಿ, ಭಾಷೆ, ಸಂಸ್ಕೃತಿ, ಜನಪದ ನೆಲೆ ಎಲ್ಲದಕ್ಕೂ ರಾಜ್ಯಾಂಗ ಭದ್ರತೆ ನೀಡಬೇಕೆಂದು ಒತ್ತಾಯಿಸಲಾಯಿತು.

ಕೊಡವರ ಈ ಬೇಡಿಕೆಗಳು ಈಡೇರಿದಾಗ ಮಾತ್ರ ಭಾರತ ಗಣರಾಜ್ಯಕ್ಕೆ ಪರಿಪೂರ್ಣ ಅರ್ಥ ಬರಲಿದೆ. ಅಲ್ಲದೆ ಭಾರತ ಗಣರಾಜ್ಯ ನಿರ್ಮಾಣಕ್ಕಾಗಿ ಸುಭದ್ರ ಹಾಗೂ ಸುಂದರ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕೃತಜ್ಞತೆ ಮತ್ತು ಶ್ರದ್ಧಾಂಜಲಿ ಅರ್ಪಿಸಿದಂತ್ತಾಗುತ್ತದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಅಜ್ಜಿನಿಕಂಡ ಇನಿತ ಮಾಚಯ್ಯ, ಕಲಿಯಂಡ ಮೀನಾ ಪ್ರಕಾಶ್, ಪಟ್ಟಮಾಡ ಲಲಿತ ಗಣಪತಿ, ಅರೆಯಡ ಸವಿತ, ಪುಲ್ಲೇರ ಸ್ವಾತಿ ಕಾಳಪ್ಪ, ಮಣವಟ್ಟಿರ ರಮ್ಯ ಚಿಣ್ಣಪ್ಪ, ಮುಕ್ಕಾಟಿರ ರೋಜಿ ಗಣಪತಿ, ಕಂಗಂಡ ಶಶಿ, ಬೊಟ್ಟಂಗಡ ಸವಿತ ಮತ್ತು ಕಲಿಯಂಡ ಪ್ರಕಾಶ್, ಬೇಪಡಿಯಂಡ ದಿನು, ಅರೆಯಡ ಗಿರೀಶ್, ನಂದಿನೆರವಂಡ ವಿಜು, ಪುಲ್ಲೇರ ಕಾಳಪ್ಪ, ಪುದಿಯೊಕ್ಕಡ ಕಾಶಿ, ಮಣವಟ್ಟಿರ ಚಿಣ್ಣಪ್ಪ, ನಂದಿನೆರವಂಡ ಅಯ್ಯಣ್ಣ, ನಂದಿನೆರವಂಡ ಅಪ್ಪಯ್ಯ, ಕೂಪದಿರ ಸಾಬು, ಕೂಪದಿರ ಪ್ರಣಾಮ್, ಬೊಟ್ಟಂಗಡ ಗಿರೀಶ್, ಬಿಟ್ಟಂಗಡ ದೇವಯ್ಯ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶರೀನ್, ಪುಟ್ಟಿಚಂಡ ಡಾನ್ ದೇವಯ್ಯ, ಕೋಡಿರ ರತ್ನ ದೇವಯ್ಯ, ಚೋಳಪಂಡ ನಾಣಯ್ಯ, ಕೊಂಗೆಟ್ಟಿರ ಲೋಕೇಶ್ ಭಾಗವಹಿಸಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,