ತಾರೆ ಜಮೀನ್‍ಫರ್ ಸಂಸ್ಥೆಯ ವತಿಯಿಂದ 7 ರಿಂದ 10 ನೇ ತರಗತಿ ಮಕ್ಕಳಿಗೆ ವಿಜ್ಞಾನ ಕಿಟ್ ಮತ್ತು ತಾರಾಲಯ ಪ್ರದರ್ಶನ ಕಾರ್ಯಕ್ರಮ
ಮಡಿಕೇರಿ ಫೆ.16: ನಗರದ ಸರಕಾರಿ ಪ್ರೌಢಶಾಲೆಯಲ್ಲಿ ತಾರೆ ಜಮೀನ್‍ಫರ್ ಸಂಸ್ಥೆಯ ವತಿಯಿಂದ 7 ರಿಂದ 10 ನೇ ತರಗತಿ ಮಕ್ಕಳಿಗೆ ವಿಜ್ಞಾನ ಕಿಟ್ ಮತ್ತು ತಾರಾಲಯ ಪ್ರದರ್ಶನ ಕಾರ್ಯಕ್ರಮವು ಬುಧವಾರ ಜರುಗಿತು.
ತಾರೆ ಜಮೀನಪರ್ ಸಂಸ್ಥೆಯ ಸಿಇಒ ದಿನೇಶ ಬಾಡಗಂಡಿ ಅವರು ಮಾತನಾಡಿ ಮಕ್ಕಳಲ್ಲಿ ಗುರಿ ಇರಬೇಕು. ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ತಾರೆ ಜಮೀನ್‍ಫರ್ ಎಂದರೆ ಹಿಂದಿಯಲ್ಲಿ ನಕ್ಷತ್ರಗಳು ಭೂಮಿಯ ಮೇಲೆ ಎಂಬ ಅರ್ಥವಿದೆ. ಹಳ್ಳಿಯ ಮಕ್ಕಳಿಗೆ ತಾರೆ- ನಕ್ಷತ್ರ ತೋರಿಸುವ ಪ್ರಯತ್ನ ಮಾಡುವುದು ಇದರ ಗುರಿಯಾಗಿದೆ. ಹಳ್ಳಿಯ ಮಕ್ಕಳೇ ಮುಂದೆ ದೇಶದ ತಾರೆಗಳಾಗಬೇಕು ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಯಲ್ಲಿ ಓದಿದವರು ಹಲವು ಸಾಧನೆ ಮಾಡಿದ್ದಾರೆ. ಹಳ್ಳಿಯ ಮಕ್ಕಳಲ್ಲಿ ಹಲವಾರು ಪ್ರತಿಭೆಗಳಿವೆ. ಹಳ್ಳಿಯಿಂದ ಬಂದವರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಆ ದೃಷ್ಟಿಯಿಂದ 7 ರಿಂದ 10 ನೇ ತರಗತಿ ಮಕ್ಕಳಿಗೆ ಪಠ್ಯದಲ್ಲಿರುವ ಪ್ರಯೋಗಗಳನ್ನು ಅವರೇ ಮಾಡಿ ಕಲಿಯುವಂತಹ ವಿಜ್ಞಾನ ಕಿಟ್‍ಗಳನ್ನು ನೀಡಲಾಗುತ್ತಿದೆ ಎಂದರು.
ಮುಖ್ಯ ಅಥಿತಿಗಳಾದ ನಿವೃತ್ತ ಕರ್ನಲ್ ಬಿ.ವಿ.ಜಿ. ಕುಮಾರ್ ಅವರು ಮಾತನಾಡಿ ನನ್ನ ತಂದೆಯವರು ಇದೇ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಮಕ್ಕಳು ವಿದ್ಯಾವಂತರಾಗಿ ಬುದ್ದಿವಂತರಾಗಬೇಕು, ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂದರು.
ಈ ರೀತಿಯ ಸಣ್ಣ ಕಾರ್ಯಕ್ರಮಗಳು ಪ್ರಸ್ತುತ ದಿನದಲ್ಲಿ ಆನ್‍ಲೈನ್‍ನಲ್ಲಿ ಸಿಗುತ್ತದೆ. ಎರಡು ವರ್ಷದಿಂದ ಆನ್‍ಲೈನ್ ತರಗತಿಗಳು ನಡೆಯುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪರಿಣಿತರಾಗಿದ್ದಾರೆ. ಆನ್‍ಲೈನ್‍ನಲ್ಲಿ ಈ ರೀತಿಯ ಕಾರ್ಯಕ್ರಮ ನೋಡಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ದೊಡ್ಡ ದೊಡ್ಡ ಹೆಜ್ಜೆಗಳನಿಟ್ಟು ಉನ್ನತ ಹುದ್ದೆಗಳನ್ನು ಪಡೆದು ಭಾರತ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ನಿವೃತ್ತ ಕರ್ನಲ್ ಬಿ.ವಿ.ಜಿ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲೆಯ ವಿಜ್ಞಾನ ಶಿಕ್ಷಕರಾದ ನೀತು ಅವರು ಮಾತನಾಡಿ ಬಹಳಷ್ಟು ವರ್ಷಗಳಿಂದ ವಿಜ್ಞಾನ ಮತ್ತು ಗಣಿತ ವಿಚಾರದಲ್ಲಿ ವಿದ್ಯಾರ್ಥಿಗಳು ಬಹಳ ಆಸಕ್ತಿ ವಹಿಸಿ, ಕಲಿಯಬೇಕು. ಈ ವಿಷಯಗಳನ್ನು ಕಬ್ಬಿಣ ಕಡಲೆ ಎಂದು ಭಾವಿಸಬಾರದು ಎಂದು ಅವರು ನುಡಿದರು.
ತಾರೆ ಜಮೀನ್‍ಫರ್ ಸಂಸ್ಥೆ ವತಿಯಿಂದ ವಿಜ್ಞಾನದ ಸಣ್ಣ ಸಣ್ಣ ಪ್ರಯೋಗಗಳು ಮತ್ತು ಕೆಲವೊಂದು ವಿಜ್ಞಾನ ಕಿಟ್‍ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇದರಲ್ಲಿ ನೀಡಲಾದ ಕೆಲವೊಂದು ಪರಿಕರಗಳಿಂದ ಖುದ್ದಾಗಿ ವಿದ್ಯಾರ್ಥಿಗಳೇ ಪ್ರಯೋಗಗಳನ್ನು ಮಾಡಿದಾಗ ಜ್ಞಾನ ಹೆಚ್ಚಾಗುತ್ತದೆ ಮತ್ತು ಕೆಲಕ್ಷಣಗಳ ಕಾಲ ಬೇರೆಡೆಗೆ ಕೊಂಡೊಯ್ಯುತ್ತದೆ. ಇದರಿಂದ ವಿಜ್ಞಾನದ ವಿಚಾರದಲ್ಲಿ ಉತ್ಸುಕರಾಗಲು ಇದು ದಾರಿದೀಪವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್‍ಡಿಎಂಸಿ ಆಧ್ಯಕ್ಷರಾದ ಚಂದ್ರಶೇಖರ್, ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಕಮಿಷನರ್ ಜಿಮ್ಮಿ ಸೀಕ್ವೆರಾ ಶಾಲಾ ಉಪ ಮುಖ್ಯೋಪಾಧ್ಯರಾದ ಸೌಮ್ಯಲತ ಮತ್ತು ಆನ್‍ಲೈನ್ ಮೂಲಕ ಸಂಪನ್ಮೂಲ ವ್ಯಕ್ತಿಯಾಗಿ ಗುಲ್ಬರ್ಗದ ನಿವೃತ್ತ ಕುಲಪತಿಗಳಾದ ಪ್ರೊ.ಬಿ.ಜಿ.ಮೂಲಿಮನಿ ಅವರು ಪಾಲ್ಗೊಂಡಿದ್ದರು. ಉಷಾ ನಿರೂಪಿಸಿದರು, ನೀತಾ ಕುಮಾರಿ ಅವರು ಸ್ವಾಗತಿಸಿದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network