Header Ads Widget

ಸರ್ಚ್ ಕೂರ್ಗ್ ಮೀಡಿಯ

‘ಒಳಚರಂಡಿ ಸಂಸ್ಕರಣಾ ಘಟಕ’ ಸ್ಥಳಕ್ಕೆ ಅಪ್ಪಚ್ಚು ರಂಜನ್ ಭೇಟಿ; ಪರಿಶೀಲನೆ

‘ಒಳಚರಂಡಿ ಸಂಸ್ಕರಣಾ ಘಟಕ’ ಸ್ಥಳಕ್ಕೆ ಅಪ್ಪಚ್ಚು ರಂಜನ್ ಭೇಟಿ; ಪರಿಶೀಲನೆ


ಮಡಿಕೇರಿ ಫೆ.11: ನಗರದ ಹೊರ ವಲಯದ ಗಾಲ್ಫ್ ಮೈದಾನದ ಬಳಿ ಗುರುತಿಸಲಾಗಿರುವ ‘ಒಳಚರಂಡಿ ಸಂಸ್ಕರಣಾ ಘಟಕ’ ಸ್ಥಳಕ್ಕೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು. 

ನಗರದ ಒಳಚರಂಡಿ ಪೈಪ್‍ಲೈನ್ ಹಾದು ಹೋಗುವ ಮಾರ್ಗ ಹಾಗೂ ನಗರದ ಕೆಲವು ಕಡೆಗಳಲ್ಲಿ ಒಳಚರಂಡಿ ನಿರ್ಮಾಣಕ್ಕೆ ಇರುವ ತೊಂದರೆ ಮತ್ತಿತರ ಸಂಬಂಧ ನಕಾಶೆ ಮೂಲಕ ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದರು. 

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಪ್ಪಚ್ಚು ರಂಜನ್ ಅವರು ಒಟ್ಟು 109 ಕಿ.ಮೀ.ಉದ್ದದ ಒಳಚರಂಡಿ ಪೈಪ್ ಲೈನ್ ಮಾರ್ಗದಲ್ಲಿ 69 ಕಿ.ಮೀ ಪೈಪ್‍ಲೈನ್ ಒಳಚರಂಡಿ ಕಾರ್ಯ ಪೂರ್ಣಗೊಂಡಿದೆ. ಸದ್ಯ ಇನ್ನೂ 15 ಕಿ.ಮೀ. ಒಳಚರಂಡಿ ಪೈಪ್‍ಲೈನ್ ನಿರ್ಮಾಣ ಮಾಡಬೇಕಿದೆ. ಆ ದಿಸೆಯಲ್ಲಿ ಈ ಬಗ್ಗೆ ಸಂಬಂಧಪಟ್ಟವರ ಜೊತೆಗೆ ಚರ್ಚಿಸಿ ಅಗತ್ಯ ಕ್ರಮವಹಿಸುವಂತೆ ಎಂಜಿನಿಯರ್‍ಗಳಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕರು ಹೇಳಿದರು.  

ಒಟ್ಟು 49 ಕೋಟಿ ರೂ. ವೆಚ್ಚದ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸದ್ಯ 85 ಕಿ.ಮೀ. ಉದ್ದದ ಒಳಚರಂಡಿ ಪೈಪ್‍ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾಗದ ತಕರಾರು ಮತ್ತಿತರವನ್ನು ಸರಿಪಡಿಸಿಕೊಂಡು ತ್ವರಿತವಾಗಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. 

ಸಂಬಂಧಪಟ್ಟ ಎಂಜಿನಿಯರ್‍ಗಳು, ಕಂದಾಯ, ನಗರಸಭೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ತಿಳಿಸಿದರು. 

ಒಳಚರಂಡಿ ಮಂಡಳಿಯ ಅಧೀಕ್ಷಕ ಎಂಜಿನಿಯರ್ ನಟರಾಜು ಅವರು ಮಾತನಾಡಿ ಒಳಚರಂಡಿ ನಿರ್ಮಾಣ ಸಂಬಂಧಿಸಿದಂತೆ ಮಡಿಕೇರಿ ನಗರದಲ್ಲಿ ಮೂರು ವಲಯಗಳನ್ನಾಗಿ ಮಾಡಿ ವೆಟ್ ವೆಲ್ ನಿರ್ಮಿಸಿ ಒಳಚರಂಡಿಯ ನೀರು ಸರಾಗವಾಗಿ ಹರಿಯುವಂತೆ ಮಾಡಿ ಕ್ರಮವಹಿಸಲಾಗಿದೆ. ಜಾಗದ ತಕರಾರು ಸರಿಪಡಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು. 

ಎಲ್ಲರ ಸಹಕಾರದಿಂದ ಒಂದು ಅಥವಾ ಎರಡು ವರ್ಷದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ತಹಶೀಲ್ದಾರ್ ಪಿ.ಎಸ್.ಮಹೇಶ್, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ವಿರೂಪಾಕ್ಷ, ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯ ಇತರರು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,