Header Ads Widget

Responsive Advertisement

ಅಂತರಾಷ್ಟ್ರೀಯ ಅವ್ವ ಪಾಜೆರ ದಿನಾಚರಣೆ, ಕೊಡವ ಲಿಪಿ-ಅರಿವು-ಪಡಿಪು

ಅಂತರಾಷ್ಟ್ರೀಯ ಅವ್ವ ಪಾಜೆರ ದಿನಾಚರಣೆ, ಕೊಡವ ಲಿಪಿ-ಅರಿವು-ಪಡಿಪು


ಮಡಿಕೇರಿ ಫೆ.22: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸೋಮವಾರ ಅಕಾಡೆಮಿ ಸಭಾಂಗಣದಲ್ಲಿ “ಅಂತರಾಷ್ಟ್ರೀಯ ಅವ್ವಪಾಜೆರ ದಿನಾಚರಣೆ, ಕೊಡವ ಲಿಪಿ- ಅರಿವು - ಪಡಿಪು” ಎಂಬ ಕಾರ್ಯಕ್ರಮ ನಡೆಯಿತು. 

ಈ ಕಾರ್ಯಕ್ರಮವನ್ನು ಲೆಕ್ಸಿಕೋಗ್ರಫಿ, ಸೃಜನಶೀಲ ಬರವಣಿಗೆ ಮತ್ತು ಜಾನಪದ ಕೇಂದ್ರೀಯ ಭಾಷಾ ಸಂಸ್ಥೆ ಶಿಕ್ಷಣ ಸಚಿವಾಲಯ, ಮಾನಸ ಗಂಗೋತ್ರಿ, ಮೈಸೂರು, ಆರ್‍ಆರ್‍ಒನ ಮುಖ್ಯಸ್ಥರಾಗಿರುವ ಪ್ರೊ.ಸಿ.ವಿ.ಶಿವರಾಮ ಕೃಷ್ಣ ಅವರು ಉದ್ಘಾಟಿಸಿದರು. 

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ, ಬೊವ್ವೇರಿಯಂಡ ಉತ್ತಯ್ಯ, ಬಾಚರಣಿಯಂಡ ರಾಣು ಅಪ್ಪಣ್ಣ,  ಮೂಕೊಂಡ ನಿತಿನ್ ಕುಶಾಲಪ್ಪ ಹಾಗೂ ಡಾ. ಭಾಮಿನಿ ರಾಘವಯ್ಯ ಅವರುಗಳು ಭಾಷಾ ತಜ್ಞರುಗಳಾಗಿ ಭಾಗವಹಿಸಿ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. 

ಅದಲ್ಲದೆ ಅಕಾಡೆಮಿಯ ಸದಸ್ಯರುಗಳಾದ ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ, ಮಾಚಿಮಾಡ ಜಾನಕಿ ಮಾಚಯ್ಯ, ತೇಲಪಂಡ ಕವನ್ ಕಾರ್ಯಪ್ಪ ಹಾಗೂ ಕುಡಿಯರ ಮುತ್ತಪ್ಪ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೂಕೊಂಡ ನಿತಿನ್ ಕುಶಾಲಪ್ಪ ಅವರು ತಾವು ಕೊಡವ ಲಿಪಿಯ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಎಲ್ಲರ ಸಮ್ಮುಖದಲ್ಲಿ ಬಹಿರಂಗವಾಗಿ ಪ್ರದರ್ಶಿಸಿದರು. 

ಬಾಚರಣಿಯಂಡ ಅಪ್ಪಣ್ಣ ಅವರು ಡಾ.ಐ.ಮಾ.ಮುತ್ತಣ್ಣನವರ ಲಿಪಿಯ ವಿವರಣೆ ನೀಡಿದರು. ಉಳಿದ ಲಿಪಿಗಳ ಸಂಗ್ರಹವನ್ನು ಪಿಪಿಟಿ ಮೂಲಕ ವೀಕ್ಷಿಸಿ ಹಲವು ವಿಷಯಗಳನ್ನು ಚರ್ಚಿಸಲಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,