Header Ads Widget

ಸರ್ಚ್ ಕೂರ್ಗ್ ಮೀಡಿಯ

"ಸಾವಯವ ಸಿರಿ" ಯೋಜನೆ ನೋಂದಾಯಿತ ಸಂಸ್ಥೆಗಳಿಂದ ಅರ್ಜಿ ಆಹ್ವಾನ

"ಸಾವಯವ ಸಿರಿ" ಯೋಜನೆ ನೋಂದಾಯಿತ ಸಂಸ್ಥೆಗಳಿಂದ ಅರ್ಜಿ ಆಹ್ವಾನ


ಮಡಿಕೇರಿ ಫೆ.17: "ಸಾವಯವ ಸಿರಿ" ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ನೋಂದಾಯಿತ ಸಾಮಾಜಿಕ ಸಂಸ್ಥೆಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. 

      ಜನರಿಗೆ ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ದೊರಕಿಸಲು ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು "ಸಾವಯವ ಸಿರಿ" ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಸಾವಯವ ಸಿರಿ ಯೋಜನೆಯನ್ನು ಮೂರು ಹಂತದ ಕಾರ್ಯಕ್ರಮವಾಗಿ ಮೂರು ವರ್ಷದ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.  

ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಸಂಸ್ಥೆಗಳ ಮುಖಾಂತರ. ತಾಲ್ಲೂಕು ಮಟ್ಟದಲ್ಲಿ ಸಾವಯವ ಕೃಷಿಕರ ಸಂಘ/ ಸಂಸ್ಥೆ/ ಒಕ್ಕೂಟಗಳ ಮುಖಾಂತರ. ಕ್ಷೇತ್ರ ಮಟ್ಟದಲ್ಲಿ ಆಯ್ಕೆಯಾಗುವ ಸಾವಯವ ಕೃಷಿಕರ ಮುಖಾಂತರ. 

ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ಯೋಜನೆಯ ಅನುಷ್ಠಾನ ಮಾಡಲು ಸಾವಯವ ಕೃಷಿಯ ಉತ್ತೇಜನದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ನೋಂದಾಯಿತ ಸಾಮಾಜಿಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಸಾಮಾಜಿಕ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ.

        ಅರ್ಜಿ ಸಲ್ಲಿಸಲು ಅರ್ಹತೆ: ನೋಂದಾಯಿತ ಸಾಮಾಜಿಕ ಸಂಸ್ಥೆಗಳು ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿರುವುದು. ಸಾವಯವ ಕೃಷಿ ಸಂಬಂಧಿತ ತರಬೇತಿ/ ಕಾರ್ಯಾಗಾರಗಳನ್ನು ಆಯೋಜಿಸಲು ಅವಶ್ಯಕ ಮೂಲಭೂತ ಸೌಲಭ್ಯ ಒದಗಿಸುವುದು. ಕನಿಷ್ಠ 10 ಹೆಕ್ಟೇರ್ ವ್ಯವಸಾಯಕ್ಕೆ ಯೋಗ್ಯ ಪ್ರದೇಶವನ್ನು ಹೊಂದಿರುವುದು. ಗೋಶಾಲೆ ನಿರ್ವಹಿಸುತ್ತಿರುವುದು. 

       ಈ ಎಲ್ಲಾ ಅರ್ಹತಾ ಅಂಶಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸುವುದು. ಸಾಮಾಜಿಕ ಸಂಸ್ಥೆಗಳ ಅನುಷ್ಠಾನ ಜವಾಬ್ದಾರಿ: ಕ್ಷೇತ್ರ ಮಟ್ಟದಲ್ಲಿ ಈ ಯೋಜನೆಯಡಿ ಆಯ್ಕೆಯಾಗುವ ರೈತರಿಗೆ ತರಬೇತಿ, ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಅಧ್ಯಯನ ಪ್ರವಾಸವನ್ನು ಕೈಗೊಳ್ಳುವುದು, ಸಾವಯವ ಕೃಷಿಯ ಪ್ರಚಾರ, ಮಾದರಿ ಸಾವಯವ ಕ್ಷೇತ್ರ ಸ್ಥಾಪನೆ, ನಾಟಿ ತಳಿಗಳ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ, ಮಾರಾಟ ಮಳಿಗೆ, ಗೋಶಾಲೆ ಸ್ಥಾಪನೆ, ಕೆರೆ ನಿರ್ಮಾಣಕ್ಕೆ ನಿಗಧಿಪಡಿಸಲಾಗಿರುವ ಅನುದಾನದಲ್ಲಿ ಅನುಷ್ಠಾನಗೊಳಿಸುವುದು.  

       ಅರ್ಜಿ ನಮೂನೆಯು ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಲಭ್ಯವಿದ್ದು, ಆಸಕ್ತಿ ಇರುವ ಸಾಮಾಜಿಕ ಸಂಸ್ಥೆಗಳು ಅರ್ಜಿ/ ಪ್ರಸ್ತಾವನೆಯನ್ನು ಜಿಲ್ಲಾ ವ್ಯಾಪ್ತಿಯ ಕೃಷಿ ವಿಶ್ವವಿದ್ಯಾಲಯ/ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರಗಳ ಶಿಫಾರಸ್ಸಿನೊಂದಿಗೆ ಫೆಬ್ರವರಿ, 24 ರೊಳಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ.ಷೇಕ್ ಅವರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,