ಮಾರ್ಚ್ 9ರಿಂದ ಕೊಡಗಿನ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ
ಕಾರ್ಯಕ್ರಮದ ವಿವರ:
ದಿನಾಂಕ : 09-03-2022ನೇ ಬುಧವಾರ
ಬೆಳಿಗ್ಗೆ 9-00 ಗಂಟೆಗೆ ಜಾತ್ರೋತ್ಸವಕ್ಕೆ ಮುಹೂರ್ತದ ಗೊನೆ ಕಡಿಯುವುದು (ಪುದುವಟ್ಟು ಕಾಸು ಸ್ಥಾನದಿಂದ) ಹಾಗೂ ಬೆಳಿಗ್ಗೆ 10-30 ಗಂಟೆಗೆ ಜಾತ್ರೋತ್ಸವದ ಬಗ್ಗೆ ಸಭೆ
ದಿನಾಂಕ : 25-03-2022ನೇ ಶುಕ್ರವಾರ
ಬೆಳಿಗ್ಗೆ 9-00 ಗಂಟೆಗೆ ಉಗ್ರಾಣ ತುಂಬಿಸುವುದು
ದಿನಾಂಕ : 26-03 -2022ನೇ ಶನಿವಾರ
ಬೆಳಿಗ್ಗೆ 11-00 ಗಂಟೆಗೆ ಕಲಶೋತ್ಸವ, ಮಧ್ಯಾಹ್ನ 12-30 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 1-30 ಗಂಟೆಗೆ ಮಹಾಸಮಾರಾಧನೆ.
ಸಾಯಂಕಾಲ 4-00 ಗಂಟೆಗೆ ಶ್ರೀ ಉಳ್ಳಾಗುಳ ಮಾಡದ ಅರಮನೆಯಿಂದ ಭಂಡಾರ ತರುವುದು, ಸಾಯಂಕಾಲ 5-00 ಗಂಟೆಗೆ ಮುಖ ತೋರಣ ಏರಿಸುವುದು, ಸಾಯಂಕಾಲ 5-30 ಗಂಟೆಗೆ ಶಿಸ್ತು ಅಳೆಯುವುದು, ಸಾಯಂಕಾಲ 7-30 ಗಂಟೆಗೆ ಶ್ರೀ ದೇವರ ಭೂತಬಲಿ, ರಾತ್ರಿ 8-00 ಗಂಟೆಗೆ ದೇವರ ನೃತ್ಯ ಬಲಿ ನಂತರ ಕಟ್ಟೆ ಪೂಜೆ
ದಿನಾಂಕ : 27-03-2022ನೇ ರವಿವಾರ
ಬೆಳಿಗ್ಗೆ ಗಂಟೆ 8-40 ರಿಂದ ರಾತ್ರಿ ಗಂಟೆ 8-00ರಿಂದ ದೇವರ ದರ್ಶನಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ.
ರಾತ್ರಿ ಗಂಟೆ 8-00ರಿಂದ ತುಳು ಕೋಲದ ಬೆಳ್ಳಾಟ 2, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು 2
ದಿನಾಂಕ: 28-03-2022ನೇ ಸೋಮವಾರ
ಮಧ್ಯಾಹ್ನ ಗಂಟೆ 12-00 ರಿಂದ ಬೇಟೆಕರಿಮಗನ್ ಈಶ್ವರನ್ ದೈವ,
ರಾತ್ರಿ ಗಂಟೆ 8-00ರಿಂದ ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಮತ್ತು ತುಳು ಕೋಲ 2 ರ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು
ದಿನಾಂಕ: 29-03-2022ನೇ ಮಂಗಳವಾರ
ಮಧ್ಯಾಹ್ನ ಗಂಟೆ 12-00ರಿಂದ ಬೇಟೆಕರಿಮಗನ್ ಈಶ್ವರನ್ ದೈವ
ರಾತ್ರಿ ಗಂಟೆ 7-40ರಿಂದ ಪಳ್ಳಿಯಾರ ಬಾಗಿಲು ತೆರೆಯುವುದು ಮತ್ತು ಕರಿಂತಿರಿ ನಾಯರ್, ಪುಲಿಮಾರುತನ್ ದೈವಗಳ ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲದ ಬೆಳ್ಳಾಟಗಳು 2 ಮತ್ತು ಅವುಗಳ ತಿರುವಪ್ಪಗಳು 2
ದಿನಾಂಕ:30-03-2022ನೇ ಬುಧವಾರ
ಬೆಳಿಗ್ಗೆ ಗಂಟೆ 8-00ರಿಂದ ಕರಿಂತಿರಿ ನಾಯರ್ ದೈವ , ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ
ರಾತ್ರಿ ಗಂಟೆ 8-00ರಿಂದ ಕಾಳ ಪುಲಿಯನ್ ಮತ್ತು ಮುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ ತುಳು ಕೋಲಗಳ ಬೆಳ್ಳಾಟ 2 ಮತ್ತು ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲಗಳ ತಿರುವಪ್ಪಗಳು 2
ದಿನಾಂಕ: 31-03-2022ನೇ ಗುರುವಾರ
ಬೆಳಿಗ್ಗೆ ಗಂಟೆ 8-00ರಿಂದ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಬೇಟೆ ಕರಿಮಗನ್ ಈಶ್ವರನ್ ದೈವ
ರಾತ್ರಿ ಗಂಟೆ 7-00ರಿಂದ ಪುಲ್ಲೂರ್ ಕಣ್ಣನ್ ಬೆಳ್ಳಾಟ 1 , ತುಳು ಕೋಲಗಳು ಬೆಳ್ಳಾಟ 1 , ಮಲೆಕಾರಿ ಬೆಳ್ಳಾಟ 1 , ವಿಷ್ಣುಮೂರ್ತಿ ತೊಡಜಲು , ರಕ್ರೇಶ್ವರಿ ತೊಡಂಜಲು , ಮೊಟ್ಟನ್ ದೈವದ ತೊಡಂಜಲು , ಬೇಟೆ ಕರಿಮಗನ್ ಬೆಳ್ಳಾಟ , ಭಗವತಿ ಕಲಶ ಬರುವುದು ಮತ್ತು ಭಗವತಿ ತೋಟ್ಟಂ , ಆಯರ್ ಭಗವತಿ ತೋಟ್ಟಂ , ಪುಲ್ಲೂರುಕಾಳಿ ತೋಟ್ಟಂ , ತುಳುಕೋಲ ಮತ್ತು ಮಲೆಕ್ಕಾರಿ ತಿರುವಪ್ಪಗಳು
ದಿನಾಂಕ : 01-04-2022ನೇ ಶುಕ್ರವಾರ
ಬೆಳಿಗ್ಗೆ ಗಂಟೆ 6-00 ರಿಂದ ಪೊಟ್ಟನ್ ದೈವ , ರಕ್ತಶ್ವರಿ , ಆಯರ್ ಭಗವತಿ, ಪುತ್ತೂರು ಕಾಳಿ, ಪುತ್ತೂರುಕಣ್ಣನ್, ವಿಷ್ಣುಮೂರ್ತಿ ದೈವ ಮತ್ತು ಬೇಟೆಕರಿಮಗನ್ ಈಶ್ವರನ್ ದೈವ
ಮಧ್ಯಾಹ್ನ 12-30 ಗಂಟೆಗೆ ಮಹಾಪೂಜೆ
ಮಧ್ಯಾಹ್ನ ಗಂಟೆ 1-00ರಿಂದ ಅನ್ನಸಂತರ್ಪಣೆ
ಅಪರಾಹ್ನ ಗಂಟೆ 4-00ಕ್ಕೆ ಶ್ರೀ ಭಗವತಿ ದೊಡ್ಡಮುಡಿ
ರಾತ್ರಿ ಗಂಟೆ 8-00ಕ್ಕೆ, ಪಯ್ಯೋಳಿ
ದಿನಾಂಕ : 02-04-2022ನೇ ಶನಿವಾರ
ರಾತ್ರಿ ಗಂಟೆ 7-00ಕ್ಕೆ ಪಾಲಿಸಿರಿ
ದಿನಾಂಕ: 03-04-2022ನೇ ರವಿವಾರ
ಮಹಾಪೂಜೆಯ (ನಂತರ ಸಮಾರಾದನೆ ಪುದುವಟ್ಟು ಕಾಪು ಸ್ಥಾನದ ಬಾಬು ಮೂಲೆಮಜಲು ಮನೆತನದವರಿಂದ)
ಸಂಜೆ ಗಂಟೆ 6-00ಕ್ಕೆ ದೇವಳದಿಂದ ಉಳ್ಳಾಗುಳ ಭಂಡಾರ ಹೊರಟು ಮಂಟಮೆಯಲ್ಲಿ ಹಿರಿಯರ ನೇಮಕ್ಕೆ ಮುಡಿಯಾಗಿ ಮಾಡದಲ್ಲಿ ನೇಮ ನಂತರ ಸೋಮಕೊಟ್ಯಕ್ಕೆ ತೆರಳಿ ತಂಬಿಲ ; ಫಲಹಾರವಾಗಿ ಪುನಃ ತಂಬಿಲ ; ಮಾಡಕ್ಕೆ ಹಿಂತಿರುಗಿ ಕಿರಿಯರ ನೇಮ ಮತ್ತು ರುದ್ರ ಚಾಮುಂಡಿ , ಆಗಿ ಭಂಡಾರ ದೇವಳಕ್ಕೆ ಬಂದು ಕಟ್ಟಾಜ್ಞೆಯಿಂದ ಭಂಡಾರವನ್ನು ಸ್ವಸ್ಥಾನದಲ್ಲಿರಿಸುವುದು.
ದಿನಾಂಕ: 04-04-2022ನೇ ಸೋಮವಾರ
ಸಂಜೆ ಗಂಟೆ 6-00ರಿಂದ ಶ್ರೀ ಕಲ್ಕುಡ ಮತ್ತು ಪಾಷಾಣಮೂರ್ತಿ ದೈವಗಳ ಕೋಲ ಹಾಗೂ ಶ್ರೀ ಕೊರಗ ತನಿಯ ದೈವದ ಕೋಲಗಳು.
ದಿನಾಂಕ: 05-04-2022ನೇ ಮಂಗಳವಾರ
ಬೆಳಿಗ್ಗೆ ಗಂಟೆ 9-00ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಸಹಯೋಗ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಒಕ್ಕೂಟ , ಪೆರಾಜೆ.
ರಾತ್ರಿ ಗಂಟೆ 8-00ರಿಂದ ಕರಿಭೂತ ಕೋಮಾಳಿ ಮಾಮೂಲು ಕೋಲಗಳು.
ದಿನಾಂಕ : 06-04-2022ನೇ ಬುಧವಾರ
ರಾತ್ರಿ ಗಂಟೆ 8-00ಕ್ಕೆ ಶ್ರೀ ಕರಿಭೂತ ಕೋಮಾಳಿ ದೈವಗಳ ಹರಿಕೆ ಕೋಲಗಳು.
ದಿನಾಂಕ : 07-04-2022ನೇ ಗುರುವಾರ
ರಾತ್ರಿ ಗಂಟೆ 7-00ರಿಂದ ಗುಳಿಗನ ಕೋಲ.
ದಿನಾಂಕ : 09-04-2022ನೇ ಶನಿವಾರ
ರಾತ್ರಿ ಗಂಟೆ 8-00ರಿಂದ ಒತ್ತೆಕೋಲಕ್ಕೆ ಕೂಡುವುದು, ಭಂಡಾರ ತೆಗೆಯುವುದು , ಮೇಲೇರಿ ಕುಳ್ಚಾಟ
ದಿನಾಂಕ: 10-04-2022ನೇ ರವಿವಾರ
ಬೆಳಿಗ್ಗೆ ಗಂಟೆ 5-30ರಿಂದ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ ಮತ್ತು ರುದ್ರ ಚಾಮುಂಡಿ ಕೋಲ ಹಾಗೂ ಪ್ರಸಾದ ವಿತರಣೆ, ಮಾರಿಕಳ.
ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮ
ದಿನಾಂಕ: 05-04-2022 ನೇ ಮಂಗಳವಾರ
ರಾತ್ರಿ ಗಂಟೆ 9-30ರಿಂದ ಶ್ರೀ ಶಾಸ್ತಾವು ಯಕ್ಷಗಾನ ಕಲಾ ಸಂಘ ಪೆರಾಜೆ ಮತ್ತು ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಪೆರಾಜೆ ಹಾಗೂ ನುರಿತ ಕಲಾವಿದರ ಕೂಡುವಿಕೆಯಿಂದ ದೇವಿಮಹಾತ್ಮ ಯಕ್ಷಗಾನ ಬಯಲಾಟ
ದಿನಾಂಕ : 09-04-2022ನೇ ಶನಿವಾರ
ರಾತ್ರಿ ಗಂಟೆ 7 -00ರಿಂದ ಸಾರ್ವಜನಿಕ ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಪ್ರಾಯೋಜಕರು : ಯುವಶಕ್ತಿ ಕ್ರೀಡಾಕಲಾ ಹವ್ಯಾಸಿ ಸಂಘ (ರಿ.) ಪೆರಾಜೆ.
ತುಲಾಭಾರ ಸೇವೆ ಮಾಡಿಸಲು ಇಚ್ಛಿಸುವವರು ಮಾರ್ಚ್ 25 ರ ಮೊದಲು ದೇವಸ್ಥಾನ ಕಛೇರಿಯಲ್ಲಿ ಹೆಸರು ನೋಂದಾಯಿಸುವುದು, ತುಲಾಭಾರ ಸೇವೆ ಮಾರ್ಚ್ 27 ರ ದೇವರ ದರ್ಶನ ಬಲಿ ದಿನ ಮಾತ್ರ.
ವಿಶೇಷ ಸೂಚನೆ:
1.ನಿತ್ಯ ಅನ್ನಸಂತರ್ಪಣೆ ಇರುವುದರಿಂದ ಅನ್ನದಾನ ನಿಧಿಗೆ ದೇಣಿಗೆ ನೀಡಿ ರಶೀದಿ ಪಡೆಯಬೇಕಾಗಿ ವಿನಂತಿ.
2. ಊರ ಮಹಾಜನರು ತಮ್ಮ ವಂತಿಗೆಗಳನ್ನು 25-03-2022ನೇ ಶುಕ್ರವಾರ ಅಂದರೆ ಉಗ್ರಾಣ ತುಂಬಿಸುವ ದಿವಸವೇ ತಂದು ರಶೀದಿ ಪಡೆಯಬೇಕಾಗಿ ವಿನಂತಿ.
3. ದೇವರ ಬಲಿಯ ಸಮಾರಾಧನೆ ಮತ್ತು ಬಿಟ್ಟಿ ಮಕ್ಕಳ ಊಟ ದಿನಾಂಕ 26-03-2022ನೇ ಶನಿವಾರ ಮಧ್ಯಾಹ್ನ ಗಂಟೆ 1-30ರಿಂದ 3-00ರ ವರೆಗೆ ಮತ್ತು ರಾತ್ರಿ ಅನ್ನಸಂತರ್ಪಣೆಯಿರುತ್ತದೆ.
4. ಊರ ವಂತಿಗೆ ಕುಳುವಾರುಗಳು ಒತ್ತೆಕೋಲಕ್ಕೆ ಕೂಡುವ ದಿವಸ ಬಲಿತಟ್ಟುಗಳನ್ನು ಪ್ರತಿ ಮನೆಗಳಿಂದ ತರಬೇಕಾಗಿ ವಿನಂತಿ.
5.31-03-2022ನೇ ಗುರುವಾರ ಶ್ರೀ ಭಗವತೀ ದೇವಿಯ ಬಗ್ಗೆ ಸಮಾರಾಧನೆ ಇದೆ. ಮತ್ತು ರಾತ್ರಿ ಕುಂಬಳಚೇರಿಯ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೇವಸ್ಥಾನದ ಪರವಾಗಿ ಕೈವೀದು ನಡೆಯಲಿರುವುದು.
6. ಶ್ರೀ ಕರಿಭೂತ ಕೋಮಾಳಿ ಹರಿಕೆ ಕೋಲ ನಡೆಸುವವರು 06-04-2022ನೇ ಬುಧವಾರ ಅಪರಾಹ್ನ 6-00 ಗಂಟೆಗೆ ಮುಂಚಿತವಾಗಿ ರಶೀದಿ ಪಡಕೊಳ್ಳತಕ್ಕದ್ದು , ಶ್ರೀ ಕರಿಭೂತ ಕೋಮಾಳಿ ಹರಿಕೆ ಕೋಲ ಒಂದರ ರೂ . 200 /
7. ಹಿಂಗಾರ ಮತ್ತು ತೆಂಗಿನ ಚಿರಿಯನ್ನು ಕುಳುವಾರು ವಂತಿಗೆಯ ಮೂಲಕ ಭಕ್ತಾಧಿಗಳು 31-03-2022 ಗುರುವಾರ ಮತ್ತು 09-04-2022 ಶನಿವಾರ ಈ ಎರಡು ದಿವಸಗಳಲ್ಲಿ ತಂದು ಸಹಕರಿಸಬೇಕಾಗಿ ವಿನಂತಿ.
8. ಜೀರ್ಣೋದ್ಧಾರ ವಂತಿಗೆ ಬಾಕಿ ಎಲ್ಲ ಮೌಲ್ಯವನ್ನು ಕೊಟ್ಟು ರಶೀದಿ ಪಡೆಯಬೇಕಾಗಿ ವಿನಂತಿ.
9. ಭಕ್ತಾದಿಗಳು ಕೊಡುವ ಭಕ್ತಿ ಕಾಣಿಕೆ, ವಂತಿಗೆ ಧನಸಹಾಯವನ್ನು ಹೃತೂರ್ವಕವಾಗಿ ಸ್ವೀಕರಿಸಲಾಗುವುದು.
10. ಜಾತ್ರಾ ಸಮಯದಲ್ಲಿ ಊರ ಹಾಗೂ ಪರ ಊರ ಮಹಾಜನರು ಸಭ್ಯ ರೀತಿಯಲ್ಲಿ ವರ್ತಿಸಬೇಕಾಗಿ ಪ್ರಾರ್ಥನೆ.
11. ಗೊನೆ ಕಡಿದ ನಂತರ ಗ್ರಾಮದಲ್ಲಿ ಪ್ರಾಣಿ ಹತ್ಯೆ ನಿಷೇಧ.
12.ಜಾತ್ರೋತ್ಸವದ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ನಡೆಯುವುದು.
13. ಜಾತ್ರೋತ್ಸವದ ಸಮಯದಲ್ಲಿ ವ್ಯಾಪಾರ ಮಾಡಲಿಚ್ಚಿಸುವವರು 9-03-2022ಕ್ಕೆ ಮುಂಚಿತವಾಗಿ ತಿಳಿಸುವಂತೆ ಕೋರಿಕೆ.
14. ಭಗವತಿ ದೊಡ್ಡ ಮುಡಿಗೆ ಹೂವು ನೀಡುವವರು ಹಣದ ರೂಪದಲ್ಲೂ ನೀಡಬಹುದು.
15. 06-04-2022ರ ಬುಧವಾರ ಬೆಳಿಗ್ಗೆ ಗಂಟೆ 8-00ಕ್ಕೆ ಒತ್ತಕೋಲಕ್ಕೆ ಮುಹೂರ್ತದ ಕೊಳ್ಳಿ ಕಡಿಯುವುದು. ಮತ್ತು 08-04-2022ರ ಸಂಜೆಯೊಳಗೆ ಒತ್ತೆಕೋಲಕ್ಕೆ ಕೊಳ್ಳ ತಲುಪಿಸುವಂತೆ ವಿನಂತಿ (ಹಸಿ ಮರದ ಕೊಳ್ಳಿ ನಿಷೇಧ, ದಪ್ಪ ಮರದ ದಿಮ್ಮಿಗಳನ್ನು ಸೀಳಿ ತರುವುದು).
16. ಜಾತ್ರೆ ಪ್ರಯುಕ್ತ ನಿತ್ಯ ರಾತ್ರಿ ಗಂಟೆ 8-00ರಿಂದ 9-00ತನಕ ಅನ್ನಸಂತರ್ಪಣೆಯಿರುತ್ತದೆ.
17. ತಾರೀಕು 11-04-2022ರಂದು ಬೆಳಿಗ್ಗೆ ಗಂಟೆ 9-00ರಿಂದ ದೇವಸ್ಥಾನದ ವಠಾರವನ್ನು ಸ್ವಚ್ಛಮಾಡುವ ಶ್ರಮದಾನ ಕಾರ್ಯ ನಡೆಯುತ್ತದೆ . ಸರ್ವರು ಸಹಕರಿಸಬೇಕಾಗಿ ವಿನಂತಿ.
ಜಾತ್ರೋತ್ಸವಕ್ಕೆ ತಮ್ಮೆಲ್ಲರನ್ನು ಆದರದಿಂದ ಆಮಂತ್ರಿಸುವ:
ಹೊನ್ನಪ್ಪ ಕೊಳಂಗಾಯ ಆಡಳಿತ ಕಾರ್ಯದರ್ಶಿ ನಿಡ್ಯಮಲೆ ಜೋಯಪ್ಪ ಸಹ ಕಾರ್ಯದರ್ಶಿ, ರಾಜಗೋಪಾಲ ರಾಮಕಜೆ ದೇವತಕ್ಕರು ಮತ್ತು ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ, ಪುರುಷೋತ್ತಮ ನಿಡಮಲೆ ತಕ್ಕ ಮುಖ್ಯಸ್ಥರು. ವಿಶ್ವನಾಥ ಕುಂಬಳಚೇರಿ ಆಡಳಿತ ಮೊತ್ತೇಸರರು ಆಡಳಿತ ಸಮಿತಿ ಸದಸ್ಯರುಗಳು ಹಾಗೂ ಗ್ರಾಮಸ್ಥರು ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network