ಮೊಬೈಲ್ ನಲ್ಲೇ ಜಮೀನಿನ ಅಳತೆ ಮಾಡುವ ಬಗ್ಗೆ ಮಾಹಿತಿ
ಕಂದಾಯ ಇಲಾಖೆಯು ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಅನುಕೂಲವಾಗಲೆಂದು ಹೊಸ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದೆ. ದಿಶಾಂಕ್ ಎಂಬ ಆ್ಯಪ್ ಸಹಾಯದಿಂದ ರೈತರು ಕ್ಷಣಮಾತ್ರದಲ್ಲಿ ಜಮೀನಿನ ಅಳತೆ ಮಾಡಬಹುದು. ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960 ರ ಸರ್ವೆ ನಕಾಶೆಗಳ ಆಧಾರದಲ್ಲಿ ದಿಶಾಂಕ್ ಆ್ಯಪ್ ನ್ನು ಅಭಿವೃದ್ಧಿಪಡಿಸಲಾಗಿದೆ. ದಿಶಾಂಕ ಆ್ಯಪ್ ರಾಜ್ಯದ 30 ಜಿಲ್ಲೆಗಳ ಪ್ರತಿ ಭೂ ಭಾಗದ ಮಾಹಿತಿಯನ್ನು ಹೊಂದಿದೆ.
ದಿಶಾಂಕ್ ಆ್ಯಪ್ ಸಹಾಯದಿಂದ ಭೂಭಾಗದ ವಿವರ, ಜಮೀನಿನ ಸುತ್ತಮುತ್ತಲಿರುವ ಕೆರೆ ಕುಂಟೆಗಳ ಪ್ರದೇಶ, ಆಸ್ತಿಯ ಅಕ್ಕಪಕ್ಕದಲ್ಲಿರುವ ಇತರ ಜಮೀನಿನ ಮಾಹಿತಿ ಹಾಗೂ ಜಮೀನು ಒತ್ತುವರಿಯಾಗಿದೆಯೇ ಎಂಬ ಮಾಹಿತಿಯನ್ನು ಸಹ ಪಡೆಯಬಹುದು. ಹೊಸ ಜಮೀನು ಖರೀದಿ ಮಾಡುವಾಗ, ಹಾಗೂ ಜಮೀನಿನ ಅಳತೆ ಮಾಡಲು ಈ ಆ್ಯಪ್ ಬಳಕೆ ಮಾಡಬಹುದು. ಭೂಮಿ ಖಾತೆ ವಿವರದಲ್ಲಿ ನಮೂದಿಸಿರುವ ಸರ್ವೆ ನಂಬರ್ ಸರಿಯಾಗಿದೆಯೇ ಎಂಬ ಮಾಹಿತಿಯನ್ನು ಸಹ ನೋಡಬಹುದು. ನೀವು ನೋಡುವ ಸರ್ವೆನಂಬರ್ ನಲ್ಲಿ ಸರ್ಕಾರದ ಯಾವುದಾದರೂ ಆಸ್ತಿಗಳಿವೆಯೇ? ಅಂದರೆ ಕೆರೆ ಕಟ್ಟೆ, ಹಳ್ಳಕೊಳ್ಳ, ಜಮೀನು, ರಾಜಕಾಲುವೆ, ಖರಾಬು ಜಮೀನು ಸೇರಿದಂತೆಇನ್ನಿತರ ಸರ್ಕಾರದ ಆಸ್ತಿಗಳಿದ್ದರೆ ಮಾಹಿತಿ ಸಿಗುತ್ತದೆ. ನೀವು ಯಾವ ಸ್ಥಳದಲ್ಲಿ ನಿಂತಿರುತ್ತೀರೋ ಆ ಸ್ಥಳದಮಾಹಿತಿ ಅಲ್ಲೇ ಸಿಗುತ್ತದೆ.
ಮೊಬೈಲ್ ನಲ್ಲಿ ದಿಶಾಂಕ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು
https://play.google.com/store/apps/details?id=com.ksrsac.sslr&hl=en_IN
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಥವಾ ನಿಮ್ಮ ಮೊಬೈಲ್ ನಲ್ಲಿರುವ Google play store ನಲ್ಲಿ Dishank Survey app ಎಂದು ಟೈಪ್ ಮಾಡಿ ದಿಶಾಂಕ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಅಲೋ ದಿಶಾಂಕ್ ಟು ಅಕ್ಸೈಸ್ ದಿಸ್ ಡಿವೈಸ್ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಯಾವ ಭಾಷೆಯಲ್ಲಿ ವೀಕ್ಷಿಸಬೇಕೆಂದುಕೊಂಡಿದ್ದೀರೋ ಅಲ್ಲಿ ಭಾ ಷೆ ಆಯ್ಕೆ ಮಾಡಿಕೊಳ್ಳಬೇಕು. ಜಿಪಿಎಸ್ ಆನ್ ಮಾಡಿಕೊಂಡಿರಬೇಕು. ನಂತರ ನೀವು ಇದ್ದ ಸ್ಥಳದ ಮಾಹಿತಿ ಅಲ್ಲಿ ಕಾಣುತ್ತದೆ. ಅಂದರೆ ಯಾವ ಸರ್ವೆ ನಂಬರ್ ನಲ್ಲಿರುತ್ತೀರೋ Point ಕಾಣುತ್ತದೆ. ಆ ಪಾಯಿಂಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನೀವು ನಿಂತಿರುವ ಸರ್ವೆ ನಂಬರ್ ಕಾಣುತ್ತದೆ. ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ಮಾಲೀಕರ ವಿವರಗಳು ಮೇಲೆ ಕ್ಲಿಕ್ ಮಾಡಿದರೆ ಸರ್ವೋಕ್ ಸಂಖ್ಯೆ ಹಿಸ್ಸಾ ನಂಬರ್ ಆಯ್ಕೆಮಾಡಿಕೊಂಡರೆ ಮಾಲಿಕರು ಮೇಲೆ ಕ್ಲಿಕ್ ಮಾಡಿದರೆ ಸಾಕು ಆ ಜಮೀನಿನ ಮಾಲಿಕರು ಯಾರು, ಜಮೀನಿನ ವಿಸ್ತೀರ್ಣದೊಂದಿಗೆ ಅಕ್ಕಪಕ್ಕದ ಮಾಲೀಕರ ಹೆಸರು ಸಹ ಕಾಣುತ್ತದೆ.
ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ನೇರವಾಗಿ ಪಾಯಿಂಟ್ ಕಾಣದಿದ್ದರೆ ಸರ್ವೆ ನಂಬರ್ ಹುಡುಕಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ, ಜಿಲ್ಲೆ, ತಾಲೂಕು, ಹೋಬಳಿ ಗ್ರಾಮ ಆಯ್ಕೆ ಸರ್ವೆ ನಂಬರ್ ನಮೂದಿಸಿದರೆ ನೀವು ಯಾವ ನಿಂತ ಸ್ಥಳ ತೋರಿಸುತ್ತದೆ. ಆ ಸ್ಥಳಕ್ಕೆ ರಸ್ತೆ ಮಾರ್ಗವಿದೆಯೇ ಎಂಬ ಮಾಹಿತಿಯನ್ನು ಪಡೆಯಬಹುದು.
ನಾವು ಯಾವ ಸ್ಥಳದ ಅಳತೆ ಮಾಡಬೇಕೆಂದುಕೊಂಡಿದ್ದೇವೋ ಅಲ್ಲಿ ನಿಂತುಕೊಂಡಮೇಲೆ ಪಾಯಿಂಟ್ ಮೇಲೆ ಒತ್ತಬೇಕು. ಅಂದರೆ ಕ್ಲಿಕ್ ಮಾಡಬೇಕು. ಆಗ ಸರ್ವೆ ನಂಬರ್, ಗ್ರಾಮದ ಹೆಸರು, ಹೋಬಳಿ, ಯಾವ ತಾಲೂಕಿನಲ್ಲಿ ಜಮೀನು ಬರುತ್ತೋ ಆ ತಾಲೂಕಿನ ಹೆಸರು ಹಾಗೂ ಜಿಲ್ಲೆಯ ಹೆಸರು ಮೂಡುತ್ತದೆ. ಹೆಚ್ಚಿನ ವಿವರಗಳ ಮೇಲೆ ಕ್ಲಿಕ್ ಮಾಡಿದ ನಂತರ ಸರ್ನೋಕ್ ಸಂಖ್ಯೆ ಸ್ಟಾರ್ ಇದ್ದರೆ ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಸಂಖ್ಯೆಯಿದ್ದರೆ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಿಕೊಂಡು ಮಾಲೀಕರು ಮೇಲೆ ಕ್ಲಿಕ್ ಮಾಡಿದರೆ ಆ ಜಮೀನಿಗೆ ಯಾರು ಮಾಲೀಕರಿರುತ್ತಾರೆಯೋ ಅವರ ಹೆಸರು ಕಾಣುತ್ತದೆ.
ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡಿದರೆ ಲೈನ್ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಗುರುತಿನ ನಾಲ್ಕು ದಿಕ್ಕು ಆಯ್ಕೆ ಮಾಡಿಕೊಳ್ಳಬೇಕು. ಮೀಟರ್ ನಲ್ಲಿ ನೋಡಬೇಕೆಂದುಕೊಂಡರೆ ಮೀಟರ್ ಆಯ್ಕೆ ಮಾಡಿಕೊಳ್ಳಬೇಕು ಫೀಟ್ ನಲ್ಲಿ ನೋಡಬೇಕೆಂದುಕೊಂಡರೆ ಫೀಟ್ ಆಯ್ಕೆ ಮಾಡಿಕೊಳ್ಳಬೇಕು, ಆಗ ಜಮೀನಿನ ಸುತ್ತಳತೆ ತೋರಿಸುತ್ತದೆ.
ಬಲಗಡೆಯಿರುವ ನಾಲ್ಕು ಲೈನ್ ಮೇಲೆ ಕ್ಲಿಕ್ ಮಾಡಿದರೆ ನಕ್ಷೆ ಸೂಚಿ ಇನ್ನೊಂದು ಪರದೆ ತೆರೆದುಕೊಳ್ಳುತ್ತದೆ. ಅಲ್ಲಿ ರಾಜ್ಯದ ಗಡಿ, ಜಿಲ್ಲೆಯ, ತಾಲೂಕು ಗ್ರಾಮದ ಗಡಿ, ಬೆಟ್ಟ. ನದಿ, ರಸ್ತೆ ಸೈಲು ಮಾರ್ಗಗಳಿದ್ದರೆ ಅಲ್ಲಿಕಾಣುತ್ತದೆ.
ದಿಶಾಂಕ ಆ್ಯಪ್ ನಲ್ಲಿ ಸಿಗುವ ಮಾಹಿತಿ ಕಾನೂನುಬದ್ಧವಾಗಿರುವುದಿಲ್ಲ. ಅದೇ ಕೇವಲಮಾಹಿತಿ ನೀಡುವ ಆ್ಯಪ್ ಆಗಿದೆ. ಕಾನೂನುಬದ್ಧ ದಾಖಲೆ ಅಧಿಕೃತವಾಗಿ ಪಡೆಯಲು ಸಂಬಂಧಿಸಿದ ಕಚೇರಿಗೆ ಹೋಗಿ ಪಡೆಯಬೇಕಾಗುತ್ತದೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network