Header Ads Widget

ಸರ್ಚ್ ಕೂರ್ಗ್ ಮೀಡಿಯ

ಗೋಣಿಕೊಪ್ಪಲಿನ ಕಾಪ್ಸ್ ಗೆ 'ಅತ್ಯುತ್ತಮ ಎನ್.ಸಿ.ಸಿ. ಶಾಲೆ' ಗೌರವ

ಗೋಣಿಕೊಪ್ಪಲಿನ ಕಾಪ್ಸ್ ಗೆ 'ಅತ್ಯುತ್ತಮ ಎನ್.ಸಿ.ಸಿ. ಶಾಲೆ' ಗೌರವ

ಇಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ


ಪೊನ್ನಂಪೇಟೆ: ರಾಷ್ಟ್ರೀಯ ಯುವ ಸೈನಿಕ ದಳ (ಎನ್.ಸಿ.ಸಿ.)ದ ಕರ್ನಾಟಕ-ಗೋವಾ ವಲಯದಲ್ಲಿ ಪ್ರತಿವರ್ಷ ನೀಡಲಾಗುವ 'ಅತ್ಯುತ್ತಮ ಎನ್.ಸಿ.ಸಿ. ಶಾಲೆ' ಎಂಬ ಪ್ರಥಮ ಸ್ಥಾನದ ಪ್ರತಿಷ್ಠಿತ ಗೌರವಕ್ಕೆ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್ (ಕಾಪ್ಸ್) ಪಾತ್ರವಾಗಿದೆ. ಇದೇ ಮೊದಲ ಬಾರಿಗೆ ಈ ಗೌರವವನ್ನು ಕಾಪ್ಸ್ ತನ್ನದಾಗಿಸಿಕೊಂಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಬೆಂಗಳೂರಿನಲ್ಲಿರುವ ಕರ್ನಾಟಕ-ಗೋವಾ ಎನ್.ಸಿ.ಸಿ. ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕರಾದ ಲೆಫ್ಟಿನೆಂಟ್ ಕರ್ನಲ್ ಸಿಜಿ ಪಿಳ್ಳೆ, ಎನ್.ಸಿ.ಸಿ.ಯ ವಿವಿಧ ಆಯಾಮಗಳಲ್ಲಿ ಅತ್ಯುತ್ತಮ ಸಾಧನೆ ತೋರುವ ಶಾಲೆಗಳಿಗೆ ನೀಡಲಾಗುವ ಪ್ರಥಮ ಸ್ಥಾನದ ಗೌರವಕ್ಕೆ ಮಂಗಳೂರು ಗ್ರೂಪ್  ನ ಮಡಿಕೇರಿಯ19ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಅಧೀನದಲ್ಲಿರುವ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆ ಭಾಜನವಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ರತಿಷ್ಠಿತ ಪ್ರಥಮ ಸ್ಥಾನದ  ಗೌರವದ ಪ್ರತೀಕವಾದ ನೀಡಲಾಗುವ ರೋಲಿಂಗ್ ಟ್ರೋಫಿಯನ್ನು ಮಾರ್ಚ್ 13ರಂದು (ಇಂದು) ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಪ್ರಧಾನ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎನ್.ಸಿ.ಸಿ.ಯ ಕರ್ನಾಟಕ-ಗೋವಾ ನಿರ್ದೇಶನಾಲಯದ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮೋಡೊರ್ ಎಲ್.ಕೆ.ಜೈನ್ ಅವರು ಪ್ರಧಾನ ಮಾಡಲಿದ್ದಾರೆ.

ಈ ಗೌರವವನ್ನು ಮಡಿಕೇರಿಯ 19ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ.ಯ ಕಮಾಂಡಿಂಗ್ ಆಫೀಸರ್ ಕರ್ನಲ್ ಚೇತನ್ ದಿಮನ್, ಕಾಪ್ಸ್ ಶಾಲೆಯ ಪ್ರಾಂಶುಪಾಲರಾದ ಡಾ. ಬೆನ್ನಿ ಕುರಿಯಕೊಸ್ ಹಾಗೂ ಕಾಪ್ಸ್ ನ ಎನ್.ಸಿ.ಸಿ. ಮುಖ್ಯಸ್ಥರಾದ ಡಾ. ಕ್ಯಾಪ್ಟನ್ ಬಿ.ಎಂ. ಗಣೇಶ್ ಅವರು ಸ್ವೀಕರಿಸಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಪ್ಸ್ ಪ್ರಾಂಶುಪಾಲ ಡಾ ಬೆನ್ನಿ ಕುರಿಯಕೊಸ್ ಅವರು, ಶಾಲೆಯ ಎನ್.ಸಿ.ಸಿ. ಮುಖ್ಯಸ್ಥರಾಗಿರುವ ಕ್ಯಾ. ಗಣೇಶ್ ಅವರ ಕರ್ತವ್ಯ ನಿಷ್ಠೆ, ಸೇವಾ ಬದ್ಧತೆ ಮತ್ತು ಅವಿರತ ಶ್ರಮದ  ಫಲವಾಗಿ ಶಾಲೆಗೆ ಈ ಪ್ರತಿಷ್ಠಿತ ಗೌರವ ಸಂದಿದೆ. ಈ ಗೌರವದಿಂದಾಗಿ ಶಾಲೆಯ ಘನತೆ ಮತ್ತಷ್ಟು ಹೆಚ್ಚಿದಂತಾಗಿದೆ.ಈ ಕಾರಣಕ್ಕಾಗಿ ಡಾ.ಬಿ.ಎಂ.ಗಣೇಶ್ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,