ಬೇಗೂರಿನ ಪೂಳೆಮಾಡ್ ಮಂದ್‍ನಲ್ಲಿ ನಡೆದ “ಮಂದ್ ತೊರ್‍ಪೊ ಕಾರ್ಯಕ್ರಮ”
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪೂಳೆಮಾಡ್ ಈಶ್ವರ ದೇವಸ್ಥಾನ ಅಧ್ಯಕ್ಷರಾದ ಬೊಳ್ಳಿಯಂಗಡ ದಾದು ಪೂವಯ್ಯ ಅವರು ಮಾತನಾಡಿ ಪ್ರತಿ ನಾಡಿನಲ್ಲಿರುವ ಮಂದ್‍ನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಇಂದಿನ ಯುವ ಜನತೆ ನಮ್ಮ ಸಂಸ್ಕøತಿಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಪೂಳೆಮಾಡ್ ಈಶ್ವರ ದೇವಸ್ಥಾನದ ದೇವಸ್ಥಾನ ಮುಖ್ಯಸ್ಥರಾದ ಮತ್ರಂಡ ಪೂಣಚ್ಚನವರು ಇಂದಿಗೂ ಕೆಲವು ನಾಡಿನಲ್ಲಿ ಮಂದ್‍ಗಳು ಮುಚ್ಚಿಹೋಗಿರುತ್ತದೆ. ಮಂದ್‍ಗಳಲ್ಲಿ ನಾಡ್ ಮಂದ್ ಹಾಗೂ ಊರ್ ಮಂದ್ ಇರುತ್ತದೆ. ಊರಿನೊಳಗಡೆ ಕೇರಿಮಂದ್, ಅಂಬಲ ಹೀಗೆ ನಮ್ಮ ಸಂಸ್ಕøತಿಯಲ್ಲಿ ಕಾಣಬಹುದು. ನಾವುಗಳು ಕೈಜೋಡಿಸಿದರೆ ಮಂದ್‍ಗಳು ಮುಂದೇ ಉಳಿಯಲು ಸಾಧ್ಯವಾಗುತ್ತದೆ ಎಂದರು.
ಪೂಳೆಮಾಡ್ ಈಶ್ವರ ದೇವಸ್ಥಾನದ ತಕ್ಕರಾದ ಚೇಂದೀರ ಮಧು ಕರುಂಬಯ್ಯ, ಪೂಳೆಮಾಡ್ ಈಶ್ವರ ದೇವಸ್ಥಾನದ ಬಂಡಾರ ತಕ್ಕರಾದ ಮಲ್ಲಂಡ ನಾಚಪ್ಪ, ಕೃಷಿಕರಾದ ಕಾರಪಂಡ ಗಿರೀಶ್, ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಗೂ ಪೂಮಾಲೆ ವಾರಪತ್ರಿಕೆಯ ಸಂಪಾದಕರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ನವರು “ಕೊಡಗ್‍ರ ಮಂದ್ ಮಾನಿ” ವಿಷಯದ ಕುರಿತಾಗಿ ಅರ್ಥಪೂರ್ಣವಾಗಿ ವಿಚಾರಮಂಡನೆ ಮಾಡಿದರು.
ಕಾರ್ಯಕ್ರಮದಲ್ಲಿ ಮಂದತವ್ವ ಕೊಡವ ಸಾಂಸ್ಕøತಿಕ ಟ್ರಸ್ಟ್ ಇವರಿಂದ ಸ್ವಾಗತನೃತ್ಯ, ಗೆಜ್ಜೆತಂಡ್ ನೃತ್ಯ, ಚಿಣ್‍ಕ್‍ಮಳೆ ನೃತ್ಯ, ಬೇಗೂರು ತಂಡದಿಂದ ಬೊಳಕಾಟ್, ಕೋಲಾಟ್, ಕತ್ತಿಯಾಟ್, ಉಮ್ಮತ್ತಾಟ್ ನೃತ್ಯ, ಹಾಗೂ ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಕೊಡವ ಸಾಂಸ್ಕøತಿಕ ನೃತ್ಯ ಪ್ರದರ್ಶನ ಇದ್ದವು. ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‍ರಾದ ಅಜ್ಜಿಕುಟ್ಟಿರ ಸಿ.ಗಿರೀಶ್, ಅಕಾಡೆಮಿ ಸದಸ್ಯರಾದ ಪಡಿಞರಂಡ ಪ್ರಭುಕುಮಾರ್, ಮಾಚಿಮಾಡ ಜಾನಕಿ ಮಾಚಯ್ಯ, ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ಅವರು ಭಾಗವಹಿಸಿದ್ದರು. ಕುಮಾರಿ ಪುತ್ತಾಮನೆ ಕುಶಿ ಕಾವೇರಮ್ಮ ಅವರು ಪ್ರಾರ್ಥಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network