ಈ ಸಂಧರ್ಭದಲ್ಲಿ ಸಮಾರಂಭದಲ್ಲಿ ನಿರ್ದೇಶಕರಾದ ಶ್ರೀ ಮೂಕಳೇರ ಕುಸಾಲಪ್ಪನವರು ನಾಗರಿಕ ವೇದಿಕೆ ನಡೆದು ಬಂದ ದಾರಿ ಹಾಗೂ ನೂತನ ತಾಲೂಕು ರಚನೆಯಲ್ಲಿ ನಾಗರಿಕ ವೇದಿಕೆಯ ಸಫಲತೆ ಹಾಗೂ ಕಾರ್ಯವನ್ನು ವಿವರಿಸಿದರು ವೇದಿಕೆಯ ಕಾನೂನು ಸಲಹೆಗಾರರಾದ ಶ್ರೀ ಎಂ ಪಿ ಅಪ್ಪಚ್ಚು ರವರು ಮಾತನಾಡುತ್ತಾ ನೂತನ ಆಡಳಿತ ಮಂಡಳಿಯ ಕರ್ತವ್ಯ ಹಾಗೂ ಜವಾಬ್ದಾರಿಯ ಬಗ್ಗೆ ವಿವರಿಸಿ ವೇದಿಕೆಯ ಹಂಗಾಮಿ ಕಾರ್ಯದರ್ಶಿ ಶ್ರೀ ಪಿ.ಪಿ ಪ್ರಭಾಕರ್ ರವರು ಅದಿಕಾರ ಹಸ್ತಾಂತರದ ವಿದಿವಿದಾನ ಪುಸ್ತಕ ದಾಖಲಾತಿಗಳ ವ್ಯವಸ್ಥೆಯನ್ನು ತಯಾರಿಸಿದ್ದು, ಶ್ರೀ ಪಿ. ಬಿಪೂಣಚ್ಚರವರು ನೂತನ ಅಧ್ಯಕ್ಷರಾದ ಶ್ರೀ ವಾಸು ಉತ್ತಪ್ಪನವರಿಗೆ ಅದಿಕಾರ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ನಿರ್ದೇಶಕರುಗಳಾದ ವಿಮಲ ಬೋಪಯ್ಯ, ಶ್ರೀಮತಿ ರೇಖಾಶ್ರೀಧರ್, ಉಪಾಧ್ಯಕ್ಷರಾದ ಶ್ರೀ ಸಿ.ಕೆ ಸೋಮಯ್ಯ ಗೌರವ ಕಾರ್ಯದರ್ಶಿ ಶ್ರೀ ಚೆಲುವರಾಜ್ ನಿರ್ದೇಶಕರಾದ ಶ್ರೀ ಕೆ.ಎಂ ಗಣಪತಿ, ಶ್ರೀ ಐನಂಡ ಕೆ ಬೋಪಣ್ಣ ಸೇರಿದಂತೆ ದಾನಿಗಳಾದ ಶ್ರೀ ಕಾಕಮಡ ಅರ್ಜುನ ಶ್ರೀ ಮಾಣಿಪಂಡ ದೇವಯ್ಯ ಹಾಜರಿದ್ದರು. ಕಾರ್ಯಕ್ರಮದಲ್ಲಿ ಸ್ರೀಮತಿ ರೇಖಾಶ್ರೀಧರ್ ಪ್ರಾರ್ಥಿಸಿ ನಿರೂಪಿಸಿದರು. ಉಪಾಧ್ಯಕ್ಷರಾದ ಶ್ರೀ ಸಿ.ಕೆ ಸೋಮಯ್ಯ ನವರು ಪ್ರಾರಂಭದಲ್ಲಿ ಸರ್ವರನ್ನು ಸ್ವಾಗತಿಸಿ ಕೊನೆಯಲ್ಲಿ ಸರ್ವರಿಗೂ ಹಾಗೂ ದಾನಿಗಳಿಗೂ ವಂದಿಸಿದರು.
ವರದಿ: ✍️....ಐನಂಡ ಕೆ. ಬೋಪಣ್ಣ
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network