ಬೆಳೆ ವಿಮಾ ಯೋಜನೆ; ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಮಿತಿಯ ಸಭೆ
ಮಡಿಕೇರಿ: ಹವಾಮಾನ ಬೆಳೆ ವಿಮಾ ಯೋಜನೆಯ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಮಿತಿಯ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
2022-23ನೇ ಸಾಲಿನಲ್ಲಿ ಮುಂಗಾರು ಹವಾಮಾನ ಮರು ವಿನ್ಯಾಸಗೊಳಗಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಕೊಡಗು ಜಿಲ್ಲೆಯಲ್ಲಿ ಮುಖ್ಯ ಬಹುವಾರ್ಷಿಕ ಬೆಳೆಗಳಾದ ಕಾಳುಮೆಣಸು ಹಾಗೂ ಅಡಿಕೆ ಬೆಳೆಗಳಿಗೆ ಅನುಷ್ಠಾನ ಮಾಡಲಾಗುತ್ತಿದ್ದು, ಈ ಯೋಜನೆಯಡಿ ವಿಮಾ ನೋಂದಣಿಗೆ ಜೂನ್, 30 ಕೊನೆಯ ದಿನವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಸಿ.ಎಂ.ಪ್ರಮೋದ್ ಅವರು ಮಾಹಿತಿ ನೀಡಿದರು.
ಹವಾಮಾನ ಆಧಾರಿತ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ, ಆರ್ದತೆ ಮತ್ತಿತರ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
2022-23 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು ವಿಮಾ ಮೊತ್ತವು ಕಾಳುಮೆಣಸು ಬೆಳೆಗೆ ಒಟ್ಟು ರೂ.47 ಸಾವಿರ ಹಾಗೂ ಅಡಿಕೆ ಬೆಳೆಗೆ ರೂ. 1.28 ಲಕ್ಷ ರೂ ಆಗಿದೆ. ಇನ್ಸೂರೆನ್ಸ್ ಕಂಪೆನಿಯವರು ಒಟ್ಟು ವಿಮಾ ಮೊತ್ತಕ್ಕೆ ಶೇ.30 ರಷ್ಟು ಮೊತ್ತವನ್ನು ಬಿಡ್ಡ್ ಮಾಡಿರುತ್ತಾರೆ. ಅದರಲ್ಲಿ ರೈತರು ಕಾಳುಮೆಣಸು ಬೆಳೆಗೆ ಶೇ.5ರ ವಿಮಾ ಮೊತ್ತ ರೂ.2,350 ಹಾಗೂ ಅಡಿಕೆ ಬೆಳೆಗೆ ರೂ.6,400 ಪ್ರತಿ ಹೆಕ್ಟೇರ್‍ಗೆ ಪಾವತಿಸಬೇಕಾಗಿದೆ. ಇದರಲ್ಲಿ ಶೇ.25ರ ಮೊತ್ತವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಭರಿಸಲಾಗುತ್ತದೆ ಎಂದು ಪ್ರಮೋದ್ ಅವರು ಮಾಹಿತಿ ನೀಡಿದರು.
2020-21 ನೇ ಸಾಲಿನಲ್ಲಿ ರೂಪಿಸಿದ ಟರ್ಮ್‍ಶೀಟ್, 2022-23 ನೇ ಸಾಲಿನವರೆಗೆ ಅನುಮೋದನೆಯಾಗಿದ್ದು, ಅದರ ಆಧಾರದಲ್ಲಿ ವಿಮಾ ಮೊತ್ತ ನಿರ್ಧರಿಸಲಾಗುತ್ತದೆ. ಅದರಂತೆ ಕೊಡಗು ಜಿಲ್ಲೆಗೆ ಎಸ್‍ಬಿಐ ಜನರಲ್ ಇನ್ಸೂರೆನ್ಸ್ ವಿಮಾ ಕಂಪೆನಿಯನ್ನು ನಿರ್ದೇಶನಾಲಯದಿಂದ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಾಳುಮೆಣಸು ಬೆಳೆಗೆ ವಿಮೆ ಪಡೆಯಲು ವಿವಿಧ ಹಂತಗಳಲ್ಲಿ, ಮಳೆ ಕೊರತೆ ಹಾಗೂ ಹೆಚ್ಚು ಮಳೆಯ ಪ್ರಮಾಣವನ್ನು ಆಧಾರಿಸಿ ವಿಮೆಯನ್ನು ಯಾವ ರೀತಿ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಹಾಗೂ ಅಡಿಕೆ ಬೆಳೆಯಲ್ಲಿ ಹೆಚ್ಚು ಮಳೆ, ನಿರಂತರ ಮಳೆ, ಹೆಚ್ಚು ಉಷ್ಣಾಂಶ, ನಿರಂತರ ಒಣ ಹವೆಯಿಂದಾಗಿ ಅಡಿಕೆ ಬೆಳೆಯ ಮೇಲೆ ಆಗುವ ಹಾನಿಯಿಂದಾಗಿ ವಿಮೆ ಪಡೆಯುವ ಬಗ್ಗೆ ಪ್ರಮೋದ್ ಅವರು ವಿವರಿಸಿದರು.
2018-19 ನೇ ಸಾಲಿನಲ್ಲಿ ಒಟ್ಟು 2,393 ರೈತರು ಹೆಸರು ನೋಂದಾಯಿಸಿದ್ದು, ರೂ. 251.39383 ಲಕ್ಷ 2304 ರೈತರಿಗೆ ವಿಮಾ ಪಾವತಿ ಆಗಿದೆ. 2019-20ನೇ ಸಾಲಿನಲ್ಲಿ ಒಟ್ಟು 1218 ರೈತರು ನೋಂದಾಯಿಸಿದ್ದು, ರೂ. 114.11 ಲಕ್ಷ 1,130 ರೈತರಿಗೆ ವಿಮಾ ಪಾವತಿಯಾಗಿದೆ. 2020-21 ನೇ ಸಾಲಿನಲ್ಲಿ ಒಟ್ಟು 2,318 ರೈತರು ನೋಂದಾಯಿಸಿದ್ದು, ರೂ. 237.56208 ಲಕ್ಷ 2171 ರೈತರಿಗೆ ವಿಮಾ ಪಾವತಿಯಾಗಿರುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ನುಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ವಿಮೆ ಪಡೆಯಲು ಅನುಮೋದಿತ ಟರ್ಮ್‍ಶೀಟ್‍ಗಳಲ್ಲಿ ವಿಮೆಯು ಯಾವ ರೀತಿ ಪಾವತಿಯಾಗುತ್ತದೆ ಎಂಬ ವಿವಿಧ ಹಂತದ ನಿಖರ ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕೂಡಲೇ ತಮ್ಮ ಅಧೀನದಲ್ಲಿ ಬರುವ ಎಲ್ಲಾ ಬ್ಯಾಂಕ್‍ಗಳಿಗೆ ಮಾಹಿತಿಯನ್ನು ಒದಗಿಸಿ ಇಚ್ಚಿಸುವ ರೈತರನ್ನು ನೋಂದಣಿ ಮಾಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದರು.
ಸಹಕಾರ ಇಲಾಖೆ ಉಪ ನಿಬಂಧಕರು ತಮ್ಮ ಅಧೀನದಲ್ಲಿ ಬರುವ ಡಿಸಿಸಿ ಬ್ಯಾಂಕ್ ಹಾಗೂ ಇತರೆ ಕೊ-ಅಪರೇಟಿವ್ ಬ್ಯಾಂಕಿನಲ್ಲಿ ಹೆಚ್ಚಿನ ಸಂಖ್ಯೆ ರೈತರನ್ನು ನೋಂದಾಯಿಸಲು ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು.
ಬೆಳೆ ವಿಮೆ ಮಾಡಿಸಲು ಬ್ಯಾಂಕಿಗೆ ಬರುವ ಯಾವುದೇ ರೈತರನ್ನು ವಾಪಸ್ಸು ಕಳುಹಿಸದೆ ಬೆಳೆ ವಿಮೆ ಮಾಡಿಸಲು ಕ್ರಮವಹಿಸಬೇಕು. ತೋಟಗಾರಿಕೆ ಉಪ ನಿರ್ದೇಶಕರು ಬೆಳೆ ವಿಮಾ ಯೋಜನೆಯ ನೋಂದಾಣಿಯಿಂದಾಗಿ ರೈತರಿಗೆ ಆಗುವ ಲಾಭಗಳ ಬಗ್ಗೆ ಮಾಹಿತಿಯನ್ನು ನೀಡಿ 3 ಸಾವಿರಕ್ಕೂ ಹೆಚ್ಚು ರೈತರು ಹೆಸರು ನೋಂದಾಯಿಸುವ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಬ್ಯಾಂಕಿನ ವ್ಯವಸ್ಥಾಪಕರು ಕೂಡಲೇ ತಮ್ಮ ಬ್ಯಾಂಕಿನ ಶಾಖೆಯಲ್ಲಿ ಬೆಳೆ ವಿಮೆ ಮಾಡಿಸಲು ಭೇಟಿ ನೀಡುವ ಎಲ್ಲಾ ರೈತರಿಗೆ ಬೆಳೆ ವಿಮೆ ಮಾಡಿಸಲು ಅಗತ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದರು.
ಎಸ್‍ಬಿಐ ಜನರಲ್ ಇನ್ಸೂರೆನ್ಸ್ ಕಂಪನಿಯ ವ್ಯವಸ್ಥಾಪಕರಿಗೆ ಸಾಮಾಜಿಕ ಜಾಲತಾಣ, ಸಭೆ ಸಮಾರಂಭ, ತಾಲ್ಲೂಕು ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಿ ರೈತರಿಗೆ ವಿಮಾ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ಮಾಡಿದರು.
ಹಾಗೆಯೇ ಪ್ರತಿ ಬ್ಯಾಂಕಿಗೆ ಭೇಟಿ ನೀಡಿ ವಿಮಾ ಮಾಹಿತಿಯನ್ನು ನೀಡಲು ಕ್ರಮ ಕೈಗೊಳ್ಳಲು ಸೂಚಿಸಿದರು. ಹಾಗೂ ತೋಟಗಾರಿಕೆ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ವಿಮಾ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ಪಡಿಸಿ ರೈತರನ್ನು ವಿಮೆ ಯೋಜನೆಯಲ್ಲಿ ನೊಂದಾಯಿಸಲು ಕ್ರಮಕೈಗೊಳ್ಳಲು ಸೂಚಿಸಿದರು.
ಗರಿಷ್ಠ ಪ್ರಮಾಣದ ರೈತರನ್ನು ಬೆಳೆ ವಿಮೆಯಲ್ಲಿ ನೋಂದಣಿ ಮಾಡಿಸಲು ಇಲಾಖೆ, ಬ್ಯಾಂಕ್, ಹಾಗೂ ವಿಮಾ ಕಂಪನಿಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು
ಕರ್ನಾಟಕ ಸ್ಟೇಟ್ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಅಥಾರಿಟಿ (ಕೆಎಸ್‍ಡಿಎಂಎ) ವತಿಯಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ಮಳೆಯ ಪ್ರಮಾಣ, ತಾಪಮಾನ, ಉಷ್ಣಾಂಶ, ಆದ್ರತೆ ಮತ್ತಿತರ ಅಂಶಗಳ ಆಧಾರದಲ್ಲಿ ವಿಮಾ ಮೊತ್ತ ಪಾವತಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದರು.
ಕಾಳುಮೆಣಸು ಮತ್ತು ಅಡಿಕೆ ಬೆಳೆಯ ವಿಮಾ ಅವಧಿಯು 2022 ರ ಜುಲೈ, 01 ರಿಂದ 2023 ರ ಜೂನ್, 30 ರವರೆಗೆ ಇರುತ್ತದೆ. ಆದರೆ ಯಾವುದೇ ಹಂತದಲ್ಲಿ ಬೆಳೆ ವಿಮೆಗೆ ಅರ್ಹರಾದಲ್ಲಿ ವಿಮಾ ಹಣದ ಪಾವತಿಯು ವಿಮಾ ಅವಧಿಯು ಮುಗಿದ ನಂತರ ಅಂದರೆ 2023ರ ಜೂನ್, 30 ರ ನಂತರದಲ್ಲಿ ಪಾವತಿಯಾಗುತ್ತದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ವಿಮಾ ಮೊತ್ತವು ವಿವಿಧ ಹಂತಗಳಲ್ಲಿ ರೈತರಿಗೆ ಪಾವತಿಯಾಗುತ್ತದೆ. ಕಾಳುಮೆಣಸು ಬೆಳೆಗೆ ಒಟ್ಟು ವಿಮಾ ಮೊತ್ತವು ಪ್ರತಿ ಹೆಕ್ಟೇರ್ ಗೆ ರೂ 47 ಸಾವಿರ ಇದ್ದು, ವಿಮಾ ಮೊತ್ತವನ್ನು ಪಾವತಿಸುವಾಗ ಹೆಚ್ಚು ಮಳೆ ಮತ್ತು ಕಡಿಮೆ ಮಳೆಯ ಪ್ರಮಾಣದ ಆಧಾರದ ಮೇಲೆ ಒಟ್ಟು 6 ಹಂತಗಳಾಗಿ ವಿಂಗಡಿಸಿ ವಿಮಾ ಮೊತ್ತ ನಿರ್ಧರಿಸಿ ಪಾವತಿಸಲಾಗುತ್ತದೆ ಎಂದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಶಿವಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಾರಾಯಣ ರೆಡ್ಡಿ, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಇತರರು ಇದ್ದರು.
ಮತ್ತಷ್ಟು ಮಾಹಿತಿ: ಮೊದಲನೇ ಹಂತದಲ್ಲಿ 2022 ಜುಲೈ 1 ರಿಂದ 30 ಸಪ್ಟೆಂಬರ್-2022 ರವರೆಗೆ 900 ಮೀ.ಮೀ ನಿಂದ 800 ಎಂ.ಎಂ ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎಂ ಮಳೆಗೆ ರೂ.25 ರಂತೆ ಮತ್ತು 800 ಎಂ.ಎಂ ಯಿಂದ 700 ಎಂ.ಎಂ ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎಂ.ಗೆ ರೂ.55 ಹಾಗೂ 700 ಎಂ.ಎಂ. ಗಿಂತ ಕಡಿಮೆ ಮಳೆಯಾದರೆ ರೂ. 8 ಸಾವಿರ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ಎರಡನೇ ಹಂತದಲ್ಲಿ 01 ಏಪ್ರಿಲ್ 2023 ರಿಂದ 30 ಏಪ್ರಿಲ್ 2023 ವರೆಗೆ 100 ಎಂ.ಎಂ ನಿಂದ 50 ಎಂ.ಎಂ ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎಂ ಮಳೆಗೆ ರೂ. 25 ರಂತೆ ಹಾಗೂ ಮತ್ತು 50 ಎಂ.ಎಂ ಯಿಂದ 25 ಎಂ.ಎಂ ವರೆಗೆ ಮಳೆಯಾದರೆ ಪ್ರತಿ ಎಂ.ಎಂ. ರೂ.140 ಹಾಗೂ 25 ಎಂ.ಎಂ.ಗಿಂತ ಕಡಿಮೆ ಮಳೆಯಾದರೆ ರೂ. 6 ಸಾವಿರ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ಮೂರನೇ ಹಂತದಲ್ಲಿ 01 ಮೇ 2023 ರಿಂದ 31 ಮೇ 2023 ವರೆಗೆ 200 ಎಂ.ಎಂ ನಿಂದ 150 ಎಂ.ಎಂ ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎಂ ರೂ.50ರಂತೆ ಮತ್ತು 150 ಎಂ.ಎಂ ನಿಂದ 100 ಎಂ.ಎಂ ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎಂ.ಗೆ ರೂ.70 ಮತ್ತು 100 ಎಂ.ಎಂ.ಗಿಂತ ಕಡಿಮೆ ಮಳೆಯಾದರೆ ರೂ 6 ಸಾವಿರ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ನಾಲ್ಕನೇ ಹಂತದಲ್ಲಿ 01 ಜೂನ್ 2023 ರಿಂದ 30 ಜೂನ್ 2023 ರವರೆಗೆ 500 ಎಂ.ಎಂ ನಿಂದ 400 ಎಂ.ಎಂ ವರೆಗೆ ಕಡಿಮೆ ಮಳೆಯಾದರೆ ಪ್ರತಿ ಎಂ.ಎಂ ರೂ 25/ ರಂತೆ ಮತ್ತು 400 ಎಂ.ಎಂ ನಿಂದ 300 ಎಂ.ಎಂ ವರೆಗೆ ಪ್ರತಿ ಎಂ.ಎಂ.ಗೆ ರೂ35/ ಮತ್ತು 300 ಎಂ.ಎಂ.ಗಿಂತ ಕಡಿಮೆ ಮಳೆಯಾದರೆ ರೂ. 6000/- ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ಐದನೇ ಹಂತದಲ್ಲಿ 01 ಜುಲೈ 2022 ರಿಂದ 31 ಜುಲೈ 2022 ರವರೆಗೆ 275 ಎಂ.ಎಂ ನಿಂದ 350 ಎಂ.ಎಂ ಹೆಚ್ಚು ಸರಾಸರಿ ಮಳೆಯು 3 ದಿವಸದಲ್ಲಿ ಬಂದರೆ ಪ್ರತಿ ಹೆಚ್ಚುವರಿ ಎಂಎಂಗೆ ರೂ 140 ಮತ್ತು 350 ಎಂ.ಎಂ ನಿಂದ 425 ಎಂ.ಎಂ. ಅಧಿಕ ಸರಾಸರಿ ಮಳೆಯು 3 ದಿವಸದಲ್ಲಿ ಬಂದರೆ ಪ್ರತಿ ಹೆಚ್ಚುವರಿ ಎಂ.ಎಂ ಗೆ ರೂ:280 ಹಾಗೂ 3 ದಿವಸದಲ್ಲಿ ಸರಾಸರಿ 425 ಎಂಎಂ ಗಿಂತ ಹೆಚ್ಚು ಮಳೆ ಆದರೆ ರೂ: 10,500 ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ಆರನೇ ಹಂತದಲ್ಲಿ 1-ಆಗಸ್ಟ್ 2022 ರಿಂದ 31 ಆಗಸ್ಟ್ 2022 ರವರೆಗೆ 200 ಎಂ.ಎಂ ನಿಂದ 275 ಎಂ.ಎಂ ಹೆಚ್ಚು ಸರಾಸರಿ ಮಳೆಯು 3 ದಿವಸದಲ್ಲಿ ಬಂದರೆ ಪ್ರತಿ ಹೆಚ್ಚುವರಿ ಎಂಎಂಗೆ ರೂ 140 ಮತ್ತು 275 ಎಂ.ಎಂ ನಿಂದ 350 ಎಂ.ಎಂ. ಅಧಿಕ ಸರಾಸರಿ ಮಳೆಯು 3 ದಿನ ಬಂದರೆ ಪ್ರತಿ ಹೆಚ್ಚುವರಿ ಎಂ.ಎಂ ಗೆ ರೂ:280 ಹಾಗೂ 3 ದಿವಸದಲ್ಲಿ ಸರಾಸರಿ 350 ಎಂಎಂ ಗಿಂತ ಹೆಚ್ಚು ಮಳೆ ಆದರೆ ರೂ: 10,500 ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
ಅಡಿಕೆ ಬೆಳೆಗೆ ಒಟ್ಟು ವಿಮಾ ಮೊತ್ತವು ಪ್ರತಿ ಹೆಕ್ಟೇರ್‍ಗೆ ರೂ 1.28 ಲಕ್ಷ ಇದ್ದು, ವಿಮಾ ಮೊತ್ತವನ್ನು ಪಾವತಿಸುವಾಗ ಹೆಚ್ಚು ಮಳೆ, ಕಡಿಮೆ ಮಳೆ, ಅಧಿಕ ಉμÁ್ಠಂಶ, ಒಣದಿನದ ಪ್ರಮಾಣದ ಆಧಾರದ ಮೇಲೆ ಒಟ್ಟು 6 ಹಂತಗಳಾಗಿ ವಿಂಗಡಿಸಿ ವಿಮಾ ಮೊತ್ತ ನಿರ್ದರಿಸಿ ಪಾವತಿಸಲಾಗುವುದು.
ಮೊದಲನೇ ಹಂತದಲ್ಲಿ 1 ಜುಲೈ 2022 ರಿಂದ 31 ಆಗಸ್ಟ್ 2022 ರ ಮಾಹೆಯಲ್ಲಿ 50 ಎಂ.ಎಂ ಗಿಂತ ಹೆಚ್ಚು ಮಳೆ ಮತ್ತು ಆದ್ರತೆ ಶೇ.80 ಗಿಂತ ಹೆಚ್ಚು 8 ರಿಂದ 10 ದಿವಸ ದವರೆಗೆ ಸತತವಾಗಿ ಇದ್ದಲ್ಲಿ ರೂ.4 ಸಾವಿರ ಮತ್ತು 10 ರಿಂದ 12 ದಿವಸದವರೆಗೆ ಸತತವಾಗಿ ಇದ್ದಲ್ಲಿ ರೂ.6 ಸಾವಿರ ಹಾಗೂ 12 ದಿವಸಕ್ಕಿಂತ ಹೆಚ್ಚು ಇದ್ದಲ್ಲಿ ರೂ:20 ಸಾವಿರ ವಿಮಾ ಮೊತ್ತವು ಪ್ರತಿ ಹೆಕ್ಟೇರಿಗೆ ಪಾವತಿಯಾಗುತ್ತದೆ.
ಎರಡನೇ ಹಂತದಲ್ಲಿ 1ನೇ ಸೆಪ್ಟೆಂಬರ್ 2022 ರಿಂದ 31ನೇ ಅಕ್ಟೋಬರ್ 2022 ರವರೆಗೆ 50 ಎಂ.ಎಂ ಗಿಂತ ಹೆಚ್ಚು ಮಳೆ ಮತ್ತು ಆದ್ರತೆ ಶೇ.80 ಗಿಂತ ಹೆಚ್ಚು 6 ರಿಂದ 8 ದಿವಸ ದವರೆಗೆ ಸತತವಾಗಿ ಇದ್ದಲ್ಲಿ ರೂ.4 ಸಾವಿರ ಮತ್ತು 8 ರಿಂದ 10 ದಿವಸದವರೆಗೆ ಸತತವಾಗಿ ಇದ್ದಲ್ಲಿ ರೂ.6 ಸಾವಿರ ಹಾಗೂ 10 ದಿವಸಕ್ಕಿಂತ ಹೆಚ್ಚು ಇದ್ದಲ್ಲಿ ರೂ.20 ಸಾವಿರ ವಿಮಾ ಮೊತ್ತವು ಪ್ರತಿ ಹೆಕ್ಟೇರಿಗೆ ಪಾವತಿಯಾಗುತ್ತದೆ.
ಮೂರನೇ ಹಂತದಲ್ಲಿ 1 ನೇ ಜುಲೈ2022 ರಿಂದ 15 ನೇ ಆಗಸ್ಟ್ -2022 ರವೆಗೆ ಪ್ರತಿ ದಿನ 20 ಎಂ.ಎಂ ಗಿಂತ ಹೆಚ್ಚು ಮಳೆ ಸತತವಾಗಿ 13 ರಿಂದ 19 ದಿನದವರೆಗೆ ಇದ್ದಲ್ಲಿ ಪ್ರತಿ ದಿನಕ್ಕೆ 1250 ರಂತೆ ಮತ್ತು 19 ದಿನದಿಂದ 25 ದಿವಸದವರೆಗೆ ಇದ್ದಲ್ಲಿ ಪ್ರತಿ ದಿನಕ್ಕೆ ರೂ. 2500 ಹಾಗೂ 25 ದಿವಸದ ನಂತರ ಸತತವಾಗಿ ಪ್ರತಿ ದಿನ 25 ಎಂ.ಎಂ ಮಳೆಯಾದಲ್ಲಿ ರೂ. 22,500 ವಿಮಾ ಮೊತ್ತ ಹೆಕ್ಟೇರಗೆ ಪಾವತಿಯಾಗುತ್ತದೆ.
ನಾಲ್ಕನೇ ಹಂತದಲ್ಲಿ 16 ನೇ ಆಗಸ್ಟ್ 2022 ರಿಂದ 30ನೇ ಸೆಪ್ಟೆಂಬರ್-2022 ರವರೆಗೆ ಪ್ರತಿ ದಿನ 20 ಎಂ.ಎಂ.ಗಿಂತ ಹೆಚ್ಚು ಮಳೆ ಸತತವಾಗಿ 8 ರಿಂದ 14 ದಿನದವರೆಗೆ ಇದ್ದಲ್ಲಿ ಪ್ರತಿ ದಿನಕ್ಕೆ ರೂ.1,250 ರಂತೆ ಮತ್ತು 14 ದಿನದಿಂದ 20 ದಿವನದವರೆಗೆ ಇದ್ದಲ್ಲಿ ಪ್ರತಿ ದಿನಕ್ಕೆ ರೂ. 2500 ಹಾಗೂ 20 ದಿವಸದ ನಂತರ ಸತತವಾಗಿ ಪ್ರತಿ ದಿನ 25 ಎಂ.ಎಂ ಮಳೆಯಾದಲ್ಲಿ ರೂ.22,500 ವಿಮಾ ಮೊತ್ತ ಹೆಕ್ಟೇರ್‍ಗೆ ಪಾವತಿಯಾಗುತ್ತದೆ.
ಐದನೇ ಹಂತದಲ್ಲಿ ಏಪ್ರಿಲ್ -1 ರಿಂದ 2023 ರಿಂದ 31 ಮೇ 2023 ರವರೆಗೆ ದಿನದ ಉμÁ್ಣಂಶವು 34 ಸೆಂಟಿ ಗ್ರೇಡ್ ಗಿಂತ ಹೆಚ್ಚು ನಿರಂತರವಾಗಿ 1 ದಿವಸದಿಂದ 3 ದಿವಸದವರೆಗೆ ಸತತವಾಗಿ ಇದ್ದಲ್ಲಿ ರೂ: 5 ಸಾವಿರ ಮತ್ತು 3 ರಿಂದ 5 ದಿವಸದವರೆಗೆ ನಿರಂತರವಾಗಿ ಉμÁ್ಣಂಶ 34 ಡಿಗ್ರಿಗಿಂತ ಹೆಚ್ಚಿಗೆ ಇದ್ದಲ್ಲಿ ರೂ. 6,500 ಹಾಗೂ 5 ದಿವಸಗಿಂತ ಹೆಚ್ಚು ನಿರಂತರವಾಗಿ 34 ಡಿಗ್ರಿ ಸೆಂಟಿ ಗ್ರೇಡ್ ಉμÁ್ಣಂಶ ಇದ್ದಲ್ಲಿ ರೂ: 23,000 ವಿಮಾ ಮೊತ್ತ ಪ್ರತಿ ಹೆಕ್ಟೇರಿಗೆ ಪಾವತಿಯಾಗುತ್ತದೆ.
ಆರನೇ ಹಂತದಲ್ಲಿ 15ನೇ ಏಪ್ರಿಲ್- 2023 ರಿಂದ 31 ಮೇ 2023 ರವರೆಗೆ 2.50 ಎಂ.ಎಂ ಗಿಂತ ಕಡಿಮೆ ಮಳೆಯಾಗಿ ನಿರಂತರ ಒಣ ದಿನವು 15 ರಿಂದ 20 ದಿವಸ ಇದ್ದಲ್ಲಿ ಪ್ರತಿ ದಿನಕ್ಕೆ ರೂ.1600 ಮತ್ತು 20 ರಿಂದ 25 ದಿವಸದವರೆಗೆ ನಿರಂತರ ಒಣ ದಿನವು ಇದ್ದಲ್ಲಿ ಪ್ರತಿ ದಿನಕ್ಕೆ ರೂ.2,400 ಹಾಗೂ ಒಣ ದಿನವು 25 ದಿವಸಕ್ಕಿಂತ ನಿರಂತವಾಗಿ ಇದ್ದಲ್ಲಿ ಒಟ್ಟು ರೂ.20 ಸಾವಿರ ವಿಮಾ ಮೊತ್ತವು ಪಾವತಿಯಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಅವರು ವಿವರಿಸಿದ್ದಾರೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network