Header Ads Widget

Responsive Advertisement

ಜಿಲ್ಲಾಧಿಕಾರಿ ಅವರ ಜೊತೆ ಎನ್‍.ಡಿ.ಆ‌ರ್.ಎಫ್ ತಂಡ ಚರ್ಚೆ


ಜಿಲ್ಲಾಧಿಕಾರಿ ಅವರ ಜೊತೆ ಎನ್‍.ಡಿ.ಆ‌ರ್.ಎಫ್ ತಂಡ ಚರ್ಚೆ

ಮಡಿಕೇರಿ ಜೂ.10: ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ(ಎನ್‍ಡಿಆರ್‍ಎಫ್), 10ನೇ ಬೆಟಾಲಿಯನ್ ವಿಜಯವಾಡದ ಇನ್ಸ್‍ಪೆಕ್ಟರ್ ರಾಮ್‍ಭಜ್ ಅವರ ನೇತೃತ್ವದ ತಂಡದ ಸದಸ್ಯರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರನ್ನು ಶುಕ್ರವಾರ ಭೇಟಿಯಾಗಿ ವರದಿ ಮಾಡಿಕೊಂಡರು.       

ಇನ್ಸ್‍ಪೆಕ್ಟರ್ ರಾಮ್‍ಭಜ್ ಅವರ ನೇತೃತ್ವದ ತಂಡದ ಸದಸ್ಯರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರನ್ನು ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಭೇಟಿಯಾಗಿ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಚರ್ಚಿಸಿದರು.     

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲಿ ಎದುರಿಸಲು ಸನ್ನದ್ಧ ಆಗಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ತಿಳಿಸಿದರು.    

24 ಜನರನ್ನು ಒಳಗೊಂಡ ಎನ್‍ಡಿಆರ್‍ಎಫ್ ತಂಡದಲ್ಲಿ 22 ಮಂದಿ ಕೊಡಗು ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಜಿಲ್ಲೆಯ ವಲ್ನರಬಲ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ಅವರು ಮಾಹಿತಿ ನೀಡಿದರು. 

ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಅಗ್ನಿಶಾಮಕ, ಪೊಲೀಸ್ ರಕ್ಷಣಾ ಪಡೆ ತಂಡಗಳ ಜೊತೆ ಎನ್‍ಡಿಆರ್‍ಎಫ್ ತಂಡವು ಕಾರ್ಯನಿರ್ವಹಿಸಲಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ತಂಡದ ಸದಸ್ಯರು ಇದ್ದರು.