ಜಿಲ್ಲಾ ಅಗ್ರಣಿ ಬ್ಯಾಂಕ್ ಮುಖ್ಯಸ್ಥರಾದ ಆರ್.ಕೆ.ಬಾಲಚಂದ್ರಗೆ ಸನ್ಮಾನ
ಮಡಿಕೇರಿ ಜೂ.07: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರ್.ಕೆ.ಬಾಲಚಂದ್ರ ಅವರು ಇತ್ತೀಚೆಗೆ ವಯೋ ನಿವೃತ್ತಿ ಆಗಿದ್ದಾರೆ.
ಸೇವಾ ನಿವೃತ್ತಿ ಹೊಂದುತ್ತಿರುವ ಜಿಲ್ಲಾ ಅಗ್ರಣಿ ಬ್ಯಾಂಕ್ ಮುಖ್ಯಸ್ಥ ರಾದ ಆರ್.ಕೆ.ಬಾಲಚಂದ್ರ ಅವರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ವಲಯ ಮಹಾ ಪ್ರಬಂಧಕರಾದ ಅನಂತ ಕೆ.ಎಸ್ ಅವರು ಜಿಲ್ಲೆಯ ಎಲ್ಲ ಬ್ಯಾಂಕರುಗಳ ಪರವಾಗಿ ಸನ್ಮಾನಿಸಿ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ನಂತರ ಮಾತನಾಡಿ ಬಾಲಚಂದ್ರ ಅವರ ಸೇವೆ ಕೊಡಗಿನ ಜನಮರೆಯಲ್ಲ. ಎಲ್ಲರಿಗೂ ಸ್ಪಂದಿಸುವ ಮನಸ್ಸು ಇವರದ್ದಾಗಿದ್ದರಿಂದ ಜನಮಾನಸದಲ್ಲಿ ಬಹುದಿನ ನೆನಪಿನಲ್ಲಿ ಉಳಿಯುತ್ತಾರೆ ಎಂದರು.
ಸಭೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ಸಹಾಯಕ ಮಹಾ ಪ್ರಬಂಧಕರಾದ ಯು. ಸೆಲ್ವಕುಮಾರ್, ಲೀಡ್ ಬ್ಯಾಂಕಿನ ವ್ಯವಸ್ಥಾಪಕರಾದ ಆರ್.ಶಿವಕುಮಾರ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ರಮೇಶ್ ಬಾಬು, ರಿಸರ್ವ್ ಬ್ಯಾಂಕ್‍ನ ಎಜಿಎಮ್ ಉಪಸ್ಥಿತರಿದ್ದರು.
ಬ್ಯಾಂಕಿಂಗ್ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಆರ್.ಕೆ.ಬಾಲಚಂದ್ರ ಅವರು ಬ್ಯಾಂಕಿಂಗ್ ತರಬೇತಿಯನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ್ದಾರೆ. ಬಾಲಚಂದ್ರ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ದೊರಕಿವೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network