Header Ads Widget

ಸರ್ಚ್ ಕೂರ್ಗ್ ಮೀಡಿಯ

ಡಿ.ಸಿ.ಮನೆಯಲ್ಲಿ ಹಣತೆ ಬೆಳಗಿಸಿ "ಹಸಿರು ದೀಪಾವಳಿ" ಆಚರಣೆ


ಡಿ.ಸಿ.ಮನೆಯಲ್ಲಿ ಹಣತೆ ಬೆಳಗಿಸಿ "ಹಸಿರು ದೀಪಾವಳಿ" ಆಚರಣೆ

ಮಡಿಕೇರಿ, ಅ.28: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್ ಅವರ‌ ಮನೆಯಲ್ಲಿ ಪರಿಸರ ಸ್ನೇಹಿ ಹಸಿರು  ದೀಪಾವಳಿ ಅಂಗವಾಗಿ ಮಕ್ಕಳು ಜತೆಗೂಡಿ ಹಣತೆ ಬೆಳಗಿಸಿ ದೀಪಾವಳಿ ಆಚರಿಸಿದರು.

ಜಿಲ್ಲೆಯಲ್ಲಿ ಜಿಲ್ಲಾಡಳಿತ , ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ಶಾಲೆಗಳಲ್ಲಿ ಇಕೋ ಕ್ಲಬ್ ಹಾಗೂ ಎನ್.ಎಸ್.ಎಸ್.ಘಟಕಗಳ ಆಶ್ರಯದಲ್ಲಿ

ಜಿಲ್ಲೆಯಲ್ಲಿ ಒಂದು ವಾರ ಕಾಲ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಆಂದೋಲನದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್, ಜಿಲ್ಲಾಧಿಕಾರಿ ಅವರ ಪತ್ನಿ ರೂಪಾ ಸತೀಶ್ ಸೇರಿದಂತೆ ಮಕ್ಕಳು ಹಾಗೂ ಕುಟುಂಬಸ್ಥರು ಜತೆಗೂಡಿ ಹಣತೆ ಬೆಳಗಿಸಿ ದೀಪಾವಳಿ ಆಚರಿಸಿದರು.

ದೀಪಾವಳಿ ಹಬ್ಬವನ್ನು ಮಾಲಿನ್ಯ ಮುಕ್ತವಾಗಿ ಆಚರಿಸುವ ಮೂಲಕ ಪರಿಸರಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡದೇ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್ ಹೇಳಿದರು.

ಮಕ್ಕಳು 'ಹಣತೆ ಬೆಳಗಿಸಿ ದೀಪಾವಳಿ ಆಚರಿಸಿ', 'ಮಾಲಿನ್ಯಮುಕ್ತ ದೀಪಾವಳಿ ಆಚರಿಸೋಣ ಬನ್ನಿ' ಎಂಬಿತ್ಯಾದಿ ಭಿತ್ತಿಫಲಕಗಳನ್ನು ಹಿಡಿದು  ಪರಿಸರ ಸಂರಕ್ಷಣೆ ಕುರಿತು ‌ಜಾಗೃತಿ ಮೂಡಿಸಿದರು.