Header Ads Widget

Responsive Advertisement

ವಸತಿ ಶಾಲೆಗಳ 6 ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

 ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಗಳ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಮೊರಾರ್ಜಿ ದೇಸಾಯಿ, ಏಕಲವ್ಯ, ಡಾ.ಬಿ.ಆರ್.ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ 2023-24ನೇ ಸಾಲಿಗೆ 6ನೇ ತರಗತಿ ಸೇರ್ಪಡೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಪ್ರವೇಶ ಪರೀಕ್ಷೆ ನಡೆಸಲಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಅರ್ಜಿ ಸಲ್ಲಿಸುವ ದಿನಾಂಕದವರೆಗೂ ಚಾಲ್ತಿಯಲ್ಲಿರಬೇಕು. ವಾರ್ಷಿಕ ಆದಾಯ ಮಿತಿ, ಎಸ್‍ಸಿ.ಎಸ್‍ಟಿ/ಸಿ-1 ರೂ. 2.50, 2ಎ, 2ಬಿ, 3ಎ, 3ಬಿ ರೂ. 1 ಲಕ್ಷ), ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ-2, ಇತರೆ ಮೀಸಲಾತಿ ಕೋರುವ ಪ್ರಮಾಣ ಪತ್ರಗಳು, ಇತರೆ ಮೀಸಲಾತಿ ಪ್ರಮಾಣ ಪತ್ರಗಳೆಂದರೆ, ವಿಶೇಷ ಚೇತನ ಮಗು, ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ/ ಅತಿ ಸೂಕ್ಷ್ಮ ಮಗು, ಮಾಜಿ ಸೈನಿಕರ ಮಗು, ಆಶ್ರಮ/ ವಸತಿ ಶಾಲೆ ಮಗು, ಪೌರ ಕಾರ್ಮಿಕರ, ಸಫಾಯಿ ಕರ್ಮಚಾರಿ ಮಗು, ಬಾಲ ಕಾರ್ಮಿಕ, ವಿಧವೆ ಮಗು, ದೇವದಾಸಿ ಮಗು, ವಿಧುರನ ಮಗು, ಯೋಜನಾ ನಿರಾಶ್ರಿತರ ಮಗು, ಅನಾಥ ಮಗು, ಎಚ್.ಐ.ವಿ ಪೀಡಿತರ ಮಗು, ಆತ್ಮಹತ್ಯೆ ರೈತರ ಮಗು. ಸ್ಥಳೀಯ ಅಭ್ಯರ್ಥಿ (ಸ್ಥಳೀಯ ಅಭ್ಯರ್ಥಿ ಎಂದರೆ ಸ್ವಂತ ತಾಲ್ಲೂಕಿನ ಅಭ್ಯರ್ಥಿ) 
ಈ ವಿಶೇಷ ವರ್ಗಕ್ಕೆ ಸೇರಿದಲ್ಲಿ ಸಂಬಂಧಿತ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸುವುದು. ಅರ್ಜಿಯನ್ನು ಸಮೀಪದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯಲ್ಲಿಯೇ ಆನ್ ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಪ್ರವೇಶ ಬಯಸುವ ವಸತಿ ಶಾಲೆಗಳನ್ನು ಆಧ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. 
ಅಭ್ಯರ್ಥಿಯು ತನ್ನ ಸ್ವಂತ ಜಿಲ್ಲೆಯ ವಸತಿ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. (ಸ್ವಂತ ಜಿಲ್ಲೆ ಎಂದರೆ ಜಾತಿ, ಆದಾಯ ಪ್ರಮಾಣ ಪತ್ರ ಅಥವಾ ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ಜಿಲ್ಲೆ.) ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ವಿವರದಲ್ಲಿ ಯಾವುದೇ ನ್ಯೂನ್ಯತೆಯನ್ನು ನೇರವಾಗಿ ಮಾರ್ಪಾಡು ಮಾಡಲು ಅರ್ಜಿ ಹಾಕುವ ಸ್ಥಳದಲ್ಲಿ ಅವಕಾಶವಿರುವುದಿಲ್ಲ. (ಆದ್ದರಿಂದ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ಶಾಲೆಯಲ್ಲಿ ಸರಿಪಡಿಸಿದ ನಂತರ ಅದನ್ನು ಪರಿಗಣಿಸಲಾಗುವುದು.) ಹೆಚ್ಚಿನ ಮಾಹಿತಿಗೆ ಹತ್ತಿರದ ವಸತಿ ಶಾಲೆಗಳನ್ನು ಸಂಪರ್ಕಿಸಬಹುದು. 
ಅರ್ಜಿ ಸಲ್ಲಿಸಲು ಜನವರಿ, 22 ಕೊನೆ ದಿನವಾಗಿದೆ. 2023 ರ ಮಾರ್ಚ್ 12 ರಂದು ಪರೀಕ್ಷೆ ನಡೆಯಲಿದೆ ಎಂದು ವಸತಿ ಶಾಲೆಗಳ ಜಿಲ್ಲಾ ಸಮನ್ವಯ ಅಧಿಕಾರಿಗಳು ಲೋಕೇಶ್ (9611307646) ಅವರು ತಿಳಿಸಿದ್ದಾರೆ.