Header Ads Widget

Responsive Advertisement

ಬಹುಮುಖ ಕಲಾವಿದ, ಸಾಹಿತಿ ಮುಲ್ಲೇರ ಜಿಮ್ಮಿ ಅಯ್ಯಪ್ಪ ನೆನಪಿನ ಕವಿಗೋಷ್ಠಿ

ಬಹುಮುಖ ಕಲಾವಿದ, ಸಾಹಿತಿ ಮುಲ್ಲೇರ ಜಿಮ್ಮಿ ಅಯ್ಯಪ್ಪ ನೆನಪಿನ ಕವಿಗೋಷ್ಠಿ

ಕೊಡಗಿನ ಹೆಸರಾಂತ ಹಾಡುಗಾರ, ಕವಿ, ಸಮಾಜ ಸೇವಕರಾಗಿದ್ದ ದಿವಂಗತ ಮುಲ್ಲೇರ ಜಿಮ್ಮಿ ಐಯ್ಯಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ ಕೊಡವಾಮೆರ ಕೊಂಡಾಟ ಸಂಘಟನೆ ಆನ್ಲೈನ್ ಕವಿಗೋಷ್ಠಿಯನ್ನು ಏರ್ಪಡಿಸಿದೆ. 

ಜನವರಿ 31ರ ಮಂಗಳವಾರದಂದು ಸಂಜೆ 7:00ಗೆ ಗೂಗಲ್ ಮೀಟ್ ವೆಬಿನಾರ್ನಲ್ಲಿ ನಡೆಯುವ ಕವಿಗೋಷ್ಠಿಗೆ, ಕವಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಕವನವು ಐಚ್ಛಿಕ ವಿಷಯಾಧಾರಿತ ಕೊಡವ ಭಾಷೆಯಲ್ಲಿರಬೇಕು, 24 ಗೆರೆಗಳು ಮೀರಬಾರದು, ಜಾತಿ, ಧರ್ಮ, ಲಿಂಗ, ವಯಸ್ಸಿನ ನಿರ್ಬಂಧವಿಲ್ಲ. 

ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ದಿನಾಂಕ 25-1-23ನೇ ಸಂಜೆಯ ಒಳಗಾಗಿ, ಕವಿಗೋಷ್ಠಿ ಸಂಚಾಲಕರಾದ ಶಿವಾಚಾಳಿಯಂಡ ಕಿಶೋರ್ ಬೋಪಣ್ಣ ಅವರ ಮೊಬೈಲ್ ಸಂಖ್ಯೆ 9449254349ಗೆ ವಾಟ್ಸಪ್ ಮಾಡುವುದರ ಮೂಲಕ ನೋಂದಾಯಿಸಿಕೊಳ್ಳಬಹುದು. 

ಕಾರ್ಯಕ್ರಮದಲ್ಲಿ ಕವನ ವಾಚಿಸುವ ಪ್ರತಿಯೊಬ್ಬರಿಗೂ ಆನ್ಲೈನ್ ಪ್ರಶಂಸಾ ಪತ್ರ ವಿತರಿಸಲಾಗುವುದು ಎಂದು ಸಂಘಟನೆಯ ಪ್ರಕಟಣೆ ಕೋರಿದೆ.