ಮೊಗೇರ ಸಮಾಜದಿಂದ ಕೊಡಗು ಜಿಲ್ಲಾ ಸರಕಾರಿ ಗೋಶಾಲೆಯಲ್ಲಿ ಶ್ರಮದಾನ
ಕೊಡಗು ಜಿಲ್ಲಾ ಮೊಗೇರ ಸಮಾಜ ಹೆಬ್ಬೆಟ್ಟಗೇರಿ-ಕೆ. ನಿಡುಗಣೆ ಗ್ರಾಮ ಶಾಖೆ ವತಿಯಿಂದ ಇಂದು ಕೆ.ನಿಡುಗಣೆ ಗ್ರಾಮ ಪಂಚಾಯತ್ ನಂದಿಮೊಟ್ಟೆಯಲ್ಲಿರುವ ಜಿಲ್ಲಾ ಸರಕಾರಿ ಗೋಶಾಲೆಯಲ್ಲಿ ಶ್ರಮದಾನ ಹಾಗೂ ದನಕರುಗಳಿಗೆ ಮೇವು ಕಲ್ಪಿಸಲು ಅಗತ್ಯವಿರುವ ಹುಲ್ಲನು ನಾಟಿ ಮಾಡುವ ಕಾರ್ಯಕ್ರಮ ನಡೆಯಿತು.
ಕೊಡಗು ಜಿಲ್ಲಾ ಮೊಗೇರ ಸಮಾಜದ ಗೌರವ ಅಧ್ಯಕ್ಷ ಪಿ.ಎಂ.ರವಿ. ಸಮಾಜದ ಮುಖಂಡ ಜನಾರ್ದನ ಪಿ.ಬಿ, ಜಯ ಪಿ.ಕೆ, ಜಿಲ್ಲಾ ಸಮಿತಿ ಸದಸ್ಯರಾದ ಸೊಮಯ್ಯ ಹೆಬೆಟ್ಟಗೇರಿ. ಪೊಡಿಯ ತಾಳ್ತಮನೆ. ವೈದ್ಯಧಿಕಾರಿ ಪ್ರಸನ್ನ, ಸಮಾಜದ ಸದಸ್ಯರಾದ ಗುರುವ, ಚಂದ್ರ ಪಿ.ಬಿ, ಕುಶ, ಶಶಿ, ಮಂಜುನಾಥ್, ಭರತ್, ಕಮಲಾಕ್ಷಿ, ಹೊನ್ನಮ್ಮ, ಭವ್ಯ, ಚೀತು, ಮುನ್ನ, ಡಯಾನ, ಸೌಮ್ಯ, ಅಕ್ಕಮ್ಮ, ಅಣ್ಣು, ಸೇರಿದಂತೆ ಗೋ ಶಾಲೆಯ ಸಿಬ್ಬಂದಿಗಳು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network