Header Ads Widget

Responsive Advertisement

ಮಡಿಕೇರಿಯಲ್ಲಿ ನಡೆದ “ಬಾಲಗೋಕುಲ” ವಸಂತ ಶಿಬಿರ

ಮಡಿಕೇರಿಯಲ್ಲಿ ನಡೆದ “ಬಾಲಗೋಕುಲ” ವಸಂತ ಶಿಬಿರ

ಮಡಿಕೇರಿ: ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಸಮೀಪವಿರುವ ಮಧುಕೃಪದ ಆವರಣದಲ್ಲಿ “ಬಾಲಗೋಕುಲ” ಮಡಿಕೇರಿ  ವತಿಯಿಂದ ಏಪ್ರಿಲ್ 3ನೇ ತಾರೀಖಿನಿಂದ ಏಪ್ರಿಲ್‌ 9ರವರಗೆ ಮಕ್ಕಳಿಗಾಗಿ ವಸಂತ ಶಿಬಿರ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಐದರಿಂದ ಹದಿನೈದನೆಯ ವಯಸ್ಸಿನ ಐವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.

ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಕ್ಷೇತ್ರಗಳ  ಹಲವಾರು  ನುರಿತ ವ್ಯಕ್ತಿಗಳು ಮಕ್ಕಳಿಗೆ ಅಮೃತ ವಚನ, ಶ್ಲೋಕಗಳು, ಕಬೀರನ ದೋಹಗಳು, ಗಾದೆಗಳು, ಒಗಟುಗಳು, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆಗಳು, ಅಭಿನಯ ಗೀತೆಗಳು, ದೇಶಿಯ ಆಟಗಳು, ಯೋಗಾಸನ, ಸಂಗೀತ, ಕ್ರಾಫ್ಟ್ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಅದರೊಂದಿಗೆ ಮರೆಯಾಗುತ್ತಿರುವ ದೇಶಿಯ ಆಟಗಳನ್ನು ಮಕ್ಕಳು ಆಟವಾಡಿ ಸಂಭ್ರಮಿಸಿದರು.

 ಶಿಬಿರದಲ್ಲಿ ಸುಮಾರು 50 ರಿಂದ 60 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೊಡಗು ಜಿಲ್ಲಾ ಸಂಘಚಾಲಕರಾದ ಚಕ್ಕೇರ ಮನು ಕಾವೇರಪ್ಪನವರು ಮಾತನಾಡಿ  “ಇಂದಿನ ಸಮಾಜದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆ ಬಹಳಷ್ಟು ಇದೆ. ಇದನ್ನು ಹೋಗಲಾಡಿಸಲು ಬಾಲ ಗೋಕುಲದಂತಹ ಕಾರ್ಯಕ್ರಮಗಳು ಅಗತ್ಯ ಹಾಗೂ ಅನಿವಾರ್ಯ’ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶ್ಲೋಕ, ಕಥೆ ಹಾಗೂ ಕೆಲವು ದೇಶಿಯ ಆಟಗಳನ್ನು ಆಡಿಸಲಾಯಿತು. ನಂತರ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಪೋಷಕರು ತಮ್ಮ ತಮ್ಮ ಮನೆಯಲ್ಲಿ ಭೋಜನ ಆಹಾರವನ್ನು ಸಿದ್ದಪಡಿಸಿಕೊಂಡು ಬಂದು ಎಲ್ಲರೂ ಒಟ್ಟಾಗಿ ಮಾತೃಭೋಜನ ಸೇವಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.