Header Ads Widget

ಸರ್ಚ್ ಕೂರ್ಗ್ ಮೀಡಿಯ

ನರಿಯಂದಡ ಕೇಂದ್ರ ಪ್ರೌಢ ಶಾಲೆಯಲ್ಲಿ ಪೋಷಕರು ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ

ನರಿಯಂದಡ ಕೇಂದ್ರ ಪ್ರೌಢ ಶಾಲೆಯಲ್ಲಿ ಪೋಷಕರು ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ

ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ರಂಗದಾಮಯ್ಯ ಭೇಟಿ

ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್

ಚೆಯ್ಯ0ಡಾಣೆ, ಜು 31. ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ ಶಿಕ್ಷಕ ಮನೋಹರ್ ನಾಯ್ಕ್ ಇಬ್ಬರು ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಶಾಲೆಯಿಂದ ಕೂಡ ಅಮಾನತ್ತಿನಲ್ಲಿದ್ದ ಶಿಕ್ಷಕರು ಮರಳಿ ಇದೇ ಶಾಲೆಯಲ್ಲಿ ಸೇವೆಗೆ ಹಾಜರಾಗುತ್ತಾರೆಂಬ ಸುದ್ದಿ ಹರಡುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಶಾಲೆಗೆ ಆಗಮಿಸಿ ಪ್ರತಿಭಟಸಿದರು.
ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಯಾವುದೇ ಕಾರಣಕ್ಕೂ ಅವರನ್ನು ಈ ಶಾಲೆಯಲ್ಲಿ ನಿಯೋಜಿಸಲು ಬಿಡುವುದಿಲ್ಲವೆಂದು ಪ್ರತಿಕ್ರಿಯೆ ನೀಡಿದ ಬಳಿಕ 
ಪ್ರತಿಭಟನಕಾರರು ತಮ್ಮ ಪಟ್ಟು ಸಡಿಲಿಸಿದರು.
ನೊಂದ ವಿದ್ಯಾರ್ಥಿಯ ತಾಯಿ ಮಾತನಾಡಿ ನಮ್ಮ ಗೋಲು ಕೇಳುವವರಿಲ್ಲ .ನೀವು ಅದೇ ಶಿಕ್ಷಕರನ್ನು ಪುನಃ ಇದೇ ಶಾಲೆಗೆ ನೇಮಿಸುತ್ತಿದ್ದೀರಾ ಈ ರೀತಿಯಾದರೆ ನಮ್ಮ ಮಕ್ಕಳ ವರ್ಗಾವಣೆ ಪತ್ರನೀಡಿ ಕಳಿಸಿ ಎಂದು ಶಿಕ್ಷಣಾಧಿಕಾರಿಗಳೊಂದಿಗೆ ಗರಂಆದ ಪ್ರಸಂಗ ಕೂಡ ನಡೆಯಿತು.
ಬೋಧಕರ ಹುದ್ದೆಗೆ ನೇಮಕಾತಿ ಮಾಡಿದರೆ ಗ್ರಾಮಸ್ಥರ ನೆರವಿನೊಂದಿಗೆ ಉಗ್ರ ಹೋರಾಟ ಮಾಡಲಾಗುವುದೆಂದು  ಅಕ್ರೋಶಿತರಾಗಿ  ಶಿಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ರಾಜೇಶ್ ಅಚ್ಚಯ್ಯ ಮಾತನಾಡಿ ಇಲಾಖೆಗೆ ಇವರನ್ನು ವರ್ಗಾವಣೆ ಮಾಡುವ ಹಕ್ಕಿದೆ ನಮಗೆ ಇವರನ್ನು ವರ್ಗಾವಣೆ ಮಾಡುವಂತಿಲ್ಲ, ಹೈಕೋರ್ಟ್ ಆದೇಶ ಇದೆ ಯಾವುದೇ ಕಾರಣಕ್ಕೂ ಈ ಶಿಕ್ಷಕ ನರಿಯಂದಡ ಪ್ರೌಢ ಶಾಲೆಗೆ ಪ್ರವೇಶಿಸುವಂತಿಲ್ಲ, ಇವರನ್ನು ಯಾವುದೇ ಬೇರೆ ಶಾಲೆಗೆ ವರ್ಗಾವಣೆ ಮಾಡಿ ನಮ್ಮ ವಿರೋಧವಿಲ್ಲ ನಮ್ಮ ಶಾಲೆಗೆ ಮಾತ್ರ ಇವರನ್ನು ನೇಮಿಸಲು ನಾವು ಬಿಡುವುದಿಲ್ಲ ನೇಮಿಸಿದರೆ ಕೂಡಲೇ ಆಡಳಿತ ಮಂಡಳಿ ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದೇವೆ ಎಂದು ಅಕ್ರೋಷಿತರಾದರು,ದೌರ್ಜನ್ಯ ನಡೆದ ಸಂದರ್ಭ ಕೂಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಬಂದಿಲ್ಲ ಎಂದು ಕಿಡಿಕಾರಿದರು.
 
ಗ್ರಾಮಸ್ಥ ಜೆಪ್ಪು ದೇವಯ್ಯ ಮಾತನಾಡಿ ನಾವು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ನಮ್ಮ ಅಜ್ಜಂದಿರು ಭಿಕ್ಷೆ ಬೇಡಿ,ಕಷ್ಟ ಪಟ್ಟು ಕಟ್ಟಿಸಿದ ಶಾಲೆ ಇದು,2 ಕುಟುಂಬಸ್ಥರು ಸೇರಿ ದಾನವಾಗಿ 15 ಎಕರೆ ಕೊಟ್ಟಂತಹ ಶಾಲೆ ಇದು ಈ ಶಾಲೆಗೆ ಕಳಂಕ ತರುವ ಕೆಲಸ ಈ ಶಿಕ್ಷಕ ಮಾಡಿದ್ದಾನೆ.ಆದ್ದರಿಂದ ಯಾವುದೇ ಕಾರಣಕ್ಕೂ ಇವರನ್ನು ಈ ಶಾಲೆಗೆ ನೇಮಿಸಲು ಬಿಡುವುದಿಲ್ಲ ಎಂದು ಆಗ್ರಹಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಂಗ ದಾಮಯ್ಯ ಸ್ಥಳಕ್ಕೆ ಆಗಮಿಸಿ ಮಾಧ್ಯಮ ದೊಂದಿಗೆ ಮಾತನಾಡಿ ಶಿಕ್ಷಕನನ್ನು ಈ ಶಾಲೆಗೆ ನಿಯೋಜಿಸಲು ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿರುವ ಕಾರಣ ಪ್ರತಿಭಟನಾಕಾರರ ಮಾಹಿತಿ ಪಡೆದುಕೊಂಡಿದ್ದೇನೆ.
ಇದನ್ನು ಇಲಾಖೆಗೆ ಸಲ್ಲಿಸಿ ಇಲಾಖೆಯಿಂದ ಯಾವ ಮಾರ್ಗದರ್ಶನ ನೀಡುತ್ತಾರೆ ಆ ರೀತಿ ಕ್ರಮಕೈಗೊಳ್ಳಲಾಗುದು ಎಂದರು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಿರೀಶ್ ಪೂಣಚ್ಚ, ಪದಾಧಿಕಾರಿಗಳು, ಪೋಷಕರು, ಕೊಕೇರಿ, ಚೇಲಾವರ, ಪಾಲಂಗಾಲ, ಕರಡ, ನರಿಯಂದಡ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ  ಬಿಗಿಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

✍️....ಅಶ್ರಫ್ ಚೆಯ್ಯ0ಡಾಣೆ