Header Ads Widget

Responsive Advertisement

ನಾಪೋಕ್ಲು ಕೆಪಿಎಸ್ ಶಾಲೆಯಲ್ಲಿ ವನಮಹೋತ್ಸವ ಆಚರಣೆ

ನಾಪೋಕ್ಲು ಕೆಪಿಎಸ್ ಶಾಲೆಯಲ್ಲಿ ವನಮಹೋತ್ಸವ ಆಚರಣೆ

ಚೆಯ್ಯ0ಡಾಣೆ ಜು 3: ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ನಿಸರ್ಗ ಇಕೋ ಕ್ಲಬ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಇಂಟ್ರಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ  ಮಡಿಕೇರಿ ವಲಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂಧರ್ಭ ಮಾತನಾಡಿದ ವಲಯ ಆರ್ ಎಫ್ ಒ ರವೀಂದ್ರರವರು ನಮ್ಮ ಒಟ್ಟಾರೆ ಭೂಮಿಯಲ್ಲಿ ಕನಿಷ್ಠ ಪಕ್ಷ ಶೇಕಡಾ 33 ಕಾಡು ಇದ್ದರೆ ಮಾತ್ರ ನಮ್ಮ ನಾಗರೀಕತೆಯ ಉಳಿವು,ಹಸಿರು ಹೊದಿಕೆ ಇಲ್ಲದಿದ್ದರೆ,ಯಾವುದು ಕೂಡ ಉತ್ತುಂಗಕ್ಕೆ ಏರಲು ಸಾಧ್ಯವಿಲ್ಲ, ಇಂದು ಗೂಗಲ್ ನಲ್ಲಿ ಸರ್ಚ್ ಮಾಡಿದರೆ 21 ಶೇಕಡಾ ಮಾತ್ರ ಕಾಣಲು ಸಾಧ್ಯ  ಎಂದರು ಆದ್ದರಿಂದ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವನಮಹೋತ್ಸವ ಮಾಡಬೇಕೆಂದು ಸರಕಾರದ ಆದೇಶ ಇದೆ ಅದರ ಅಂಗವಾಗಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೇವೆಂದರು.

ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾರಿಸ್ ಮಾತನಾಡಿ ವನಮಹೋತ್ಸವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ  ಈ  ಕಾರ್ಯಕ್ರಮವನ್ನು ಮಾಡಬೇಕು ವಿದ್ಯಾರ್ಥಿಗಳು ನಮಗೆ ಬದುಕಲು ಪರಿಸರ ಎಷ್ಟು ಅನಿವಾರ್ಯ ಎಂಬುದನ್ನು ಅರಿತು ಕಾರ್ಯಯೋನ್ಮುಖರಾಗಲು  ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಹಳೇವಿದ್ಯಾರ್ಥಿ ಹಾಗೂ ದಾನಿಗಳಾದ ಕೇಟೋಳಿರ ರಾಜ ಗಣಪತಿ ಅವರು ವ್ಯಯಕ್ತಿಕ ವಾಗಿ ನೀಡಿದ 300ಕ್ಕೂ ಅಧಿಕ ವಿವಿಧ ತಡಿಯ ತಳಿಯ ಗಿಡಗಳನ್ನು ಶಾಲೆಯ ಅವರಣದಲ್ಲಿ ನೆಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ವಿಜಿತ ಪ್ರಭಾರ ಉಪ ಪ್ರಾಂಶುಪಾಲ  ಎನ್. ಎಸ್. ಶಿವಣ್ಣ, ಅರಣ್ಯ ಇಲಾಖೆಯ ಡಿ ಆರ್ ಎಫ್ ಓ ಸುರೇಶ್, ಗಸ್ತು ಅರಣ್ಯಪಾಲಕ ಕಾಳೇಗೌಡ, ಸೋಮಣ್ಣ, ಮಂಜುನಾಥ್, ರಾಹುಲ್, ಕೇಶವಮೂರ್ತಿ, ಕಾರ್ತಿಕ್, ಬೆಳಗಾರರಾದ  ಕುಂದ್ಯೋಳಂಡ ರಮೇಶ್ ಮುದ್ದಯ್ಯ, ಕಾಂಡಂಡ ಜೊಯಪ್ಪ, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲೆಯ ಎಲ್ಲಾ ಉಪನ್ಯಾಸಕ ಮತ್ತು ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ