Header Ads Widget

ಸರ್ಚ್ ಕೂರ್ಗ್ ಮೀಡಿಯ

ನರಿಯಂದಡ ಗ್ರಾಮ ಪಂಚಾಯಿತಿಯಿಂದ ಹೋಂ ಸ್ಟೇ ಪರಿಶೀಲನೆ ಹಾಗೂ ಅನಧಿಕೃತ ನಾಮಫಲಕ ತೆರವು

ನರಿಯಂದಡ ಗ್ರಾಮ ಪಂಚಾಯಿತಿಯಿಂದ ಹೋಂ ಸ್ಟೇ ಪರಿಶೀಲನೆ ಹಾಗೂ ಅನಧಿಕೃತ ನಾಮಫಲಕ ತೆರವು

ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಚೇಲಾವರ, ನರಿಯಂದಡ,ಕೊಕೇರಿ,ಕರಡ, ಅರಪಟ್ಟುಗಳಲ್ಲಿ ಕಾರ್ಯಾಚರಿಸುವ ಹೋಂ ಸ್ಟೇ ಗಳಿಗೆ ಗ್ರಾಮಪಂಚಾಯಿತಿ ಸಿಬ್ಬಂದಿಗಳು ತೆರಳಿ ಪರಿಶೀಲಿಸಿದರು.

ಹೋಂಸ್ಟೇ ಗಳಲ್ಲಿ ಎಷ್ಟು ಕೊಠಡಿಗಳಿವೆ ಎಂಬ ಮಾಹಿತಿ ಕಲೆಹಾಕಿದರು. ನೋಂದಣಿ ನವೀಕರಿಸದ ಹೋಂ ಸ್ಟೇ ಮಾಲೀಕರಿಗೆ ಮಾಹಿತಿ ನೀಡಿ ಕೂಡಲೇ ನವೀಕರಿಸಲು ಸೂಚನೆ ನೀಡಲಾಯಿತು.

ಪರವಾನಗಿ ನವೀಕರಿಸದಿದ್ದರೆ ಅಂತಹ ಹೋಂಸ್ಟೇ ಗಳ ವಿರುದ್ಧ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪಂಚಾಯಿತಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಅನಧಿಕೃತ ನಾಮಫಲಕ ತೆರವು:

ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಆಳವಡಿಸಿದ ಅನುಮತಿ ಪಡೆಯದ  ನಾಮ ಫಲಕಗಳನ್ನು ಇದೇ ಸಂದರ್ಭ ತೆರವು ಗೊಳಿಸಲಾಯಿತು. ಪರಿಶೀಲನೆ ಹಾಗೂ ನಾಮಫಲಕ ತೆರವುಗೊಳಿಸುವ ಸಂದರ್ಭ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿದ್ದಪ್ಪ, ಬಿಲ್ ಕಲೆಕ್ಟರ್ ದಿನೇಶ್ ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು 

ತೆರಿಗೆ ಪಾವತಿಸಲು ಸೂಚನೆ:

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ನರಿಯಂದಡ, ಚೇಲಾವರ, ಕೊಕೇರಿ, ಕರಡ, ಪೊದವಾಡ, ಹಾಗೂ ಅರಪಟ್ಟು ಗ್ರಾಮಗಳ ಗ್ರಾಮಸ್ಥರು 2022-2023 ನೇ ಸಾಲಿನ ಮನೆ ಕಂದಾಯ, ನೀರಿನ ತೆರಿಗೆ, ಪರವಾನಗಿ ಶುಲ್ಕವನ್ನು ಪಾವತಿಸಲು ಬಾಕಿ ಉಳಿಸಿಕೊಂಡವರು ಕೂಡಲೇ ಪಂಚಾಯಿತಿಗೆ ತೆರಿಗೆಯನ್ನು ಪಾವತಿಸಿ ರಶೀದಿ ಪಡೆದುಕೊಳ್ಳಬೇಕೆಂದು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅಂಗಡಿ ಹಾಗೂ ಹೋಂ ಸ್ಟೇ ಮಾಲೀಕರು ಪರವಾನಗಿ (ಲೈಸನ್ಸ್ )ಅವಧಿಯು ಮಾರ್ಚ್ 31 ಕ್ಕೆ ಮುಕ್ತಾಯ ಗೊಂಡಿರುವುದರಿಂದ ತಾ 30  ರೊಳಗೆ ತಮ್ಮ ಪರವಾನಗಿ (ಲೈಸನ್ಸ್ )ಅನ್ನು ನವೀಕರಿಸಿಕೊಳ್ಳತಕ್ಕದ್ದು ತಪ್ಪಿದಲ್ಲಿ ದಂಡ ಸಹಿತ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುವುದೆಂದು ನರಿಯಂದಡ ಗ್ರಾಮ ಪಂಚಾಯಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ