Header Ads Widget

Responsive Advertisement

ಸಂಬಾರ ಮಂಡಳಿಯಿಂದ ಏಲಕ್ಕಿ ಹಾಗೂ ಕಾಳುಮೆಣಸು ಸಸಿಗಳ ಮಾರಾಟ

ಸಂಬಾರ ಮಂಡಳಿಯಿಂದ ಏಲಕ್ಕಿ ಹಾಗೂ ಕಾಳುಮೆಣಸು ಸಸಿಗಳ ಮಾರಾಟ

ಭಾರತೀಯ ಸಂಬಾರ ಮಂಡಳಿಯು ಪ್ರತಿ ವರ್ಷವೂ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡುವ ಸಾಂಬಾರ ಸಸಿಗಳನ್ನು ಮಂಡಳಿಯ ಸಸ್ಯಪಾಲನ ಕೇಂದ್ರಗಳಿಂದ ಈ ಕೆಳಗೆ ನಮೂದಿಸಿರುವ ದರಗಳಲ್ಲಿ ಬೆಳೆಗಾರರಿಗೆ/ ಸಂಘ ಸಂಸ್ಥೆ/ಸರ್ಕಾರಿ ಇಲಾಖೆಗಳಿಗೆ ಮಾರಾಟ ಮಾಡಲಾಗುವುದು. ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಸಸಿಗಳನ್ನು ವಿತರಿಸಲಾಗುವುದು ಎಂದು ಸಂಬಾರ ಮಂಡಳಿಯ ಅಧೀಕೃತ ಪತ್ರಿಕಾ ಪ್ಕಟಣೆಯಲ್ಲಿ ತಿಳಿಸಿದೆ.

ಸಂಬಾರ ಸಸಿಗಳ ವಿವರ ದರ: 

1. ಏಲಕ್ಕಿ ಸಸಿ (10 ತಿಂಗಳಿಂದ ಮೇಲ್ಪಟ್ಟು): ರೂ. 15.೦೦ 

2. ಕಾಳು ಮೆಣಸು (ಬೇರು ಬರಿಸಿದ ಪ್ರತಿ ಬಳ್ಳಿಗೆ): ರೂ. 7.೦೦ 

3. ಕಾಳು ಮೆಣಸು ನ್ಯೂಕ್ಲಿಯಸ್ ಸಸಿಗಳು: ರೂ. 20.೦೦

4. ಉತ್ತಮ ತಳಿಯ ಏಲಕ್ಕಿ ಕಂದುಗಳು ರೂ. 50.೦೦

ಆಸಕ್ತ ಬೆಳೆಗಾರರು ಹೆಚ್ಚಿನ ಮಾಹಿತಿಗಾಗಿ ತಮಗೆ ಹತ್ತಿರದ ಸಂಬಾರ ಮಂಡಳಿ ಸಸ್ಯಪಾಲನ

ಕೇಂದ್ರಗಳನ್ನು ಸಂಪರ್ಕಿಸಿ:

1. ಸಸ್ಯಪಾಲನ ಕೇಂದ್ರ- ಬಿಳಿಗೆರಿ, ಮಡಿಕೇರಿ ತಾ. ಕೊಡಗು ಜಿಲ್ಲೆ.

ಸಂಪರ್ಕಿಸಿ: ಶ್ರೀ. ರೆಜಿತ್ ಎನ್. ಪಿ- 9745295470, ಶ್ರೀ. ಕೇಶವನ್-8281376265..

2. ಸಸ್ಯಪಾಲನ ಕೇಂದ್ರ- ಐಗೂರು, ಸೋಮವಾರಪೇಟೆ ತಾ. ಕೊಡಗು ಜಿಲ್ಲೆ.

ಸಂಪರ್ಕಿಸಿ: ಶ್ರೀ. ರೆಜಿತ್ ಎನ್. ಪಿ- 9745295470

3. ಸಸ್ಯಪಾಲನ ಕೇಂದ್ರ, ಯಸಳೂರು, ಸಕಲೇಶಪುರ ತಾ. ಹಾಸನ ಜಿಲ್ಲೆ.

ಸಂಪರ್ಕಿಸಿ: ಶ್ರೀ. ರಮೇಶ್ ನಾಯ್ಕ- 9449049227

4. ಸಸ್ಯಪಾಲನ ಕೇಂದ್ರ, ಬೆಟ್ಟದಮನೆ, ಮೂಡಿಗೆರೆ ತಾ. ಚಿಕ್ಕಮಗಳೂರು ಜಿಲ್ಲೆ.

ಸಂಪರ್ಕಿಸಿ: ಶ್ರೀ. ಬೋಸ್ ಪಿ.- 6268040105

5. ಸಸ್ಯಪಾಲನ ಕೇಂದ್ರ, ಬೆಳಗೋಳ, ಕೊಪ್ಪ ತಾ. ಚಿಕ್ಕಮಗಳೂರು ಜಿಲ್ಲೆ.

ಸಂಪರ್ಕಿಸಿ: ಶ್ರೀ. ಸುನೀಲ್ ಕುಮಾರ್ ಜಿ.-8921595371

ಹೆಚ್ಛಿನ ಮಾಹಿತಿಗಾಗಿ ಹತ್ತಿರದ ಸಂಬಾರ ಮಂಡಳಿಯ ಕ್ಷೇತ್ರ ಕಛೇರಿ/ವಿಭಾಗೀಯ ಕಛೇರಿ/ ಪ್ರಾದೇಶಿಕ ಕಛೇರಿಗೆ ಭೇಟಿ ನೀಡಬಹುದು.

ಎಂ. ವೈ. ಹೊನ್ನೂರ

ಉಪ ನಿರ್ದೇಶಕರು

ಸ್ಥಳ: ಸಕಲೇಶಪುರ ಭಾರತೀಯ ಸಂಬಾರ ಮಂಡಳಿ

ಫೋ: 08173-295008 

ಲಕ್ಷೀಪುರ ಬಡಾವಣೆ,

ಸಕಲೇಶಪುರ-573134, 

ಹಾಸನ ಜಿಲ್ಲೆ.

ಮೊ. ನಂ. 9449047596