Header Ads Widget

ಸರ್ಚ್ ಕೂರ್ಗ್ ಮೀಡಿಯ

ಶ್ರೀ ದಂಡಿನ ಮಾರಿಯಮ್ಮ ದೇವಾಲಯ ದಸರಾ ಸಮಿತಿಯ 2020-2021ನೇ ಸಾಲಿನ ನೂತನ ಅಧ್ಯಕ್ಷರಾಗಿ ಈ.ಬಿ. ದಿನೇಶ್‍ನಾಯರ್


ಮಡಿಕೇರಿ ಅ. 5: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ದಸರಾ ಸಮಿತಿಯ 2020-2021ನೇ ಸಾಲಿನ ನೂತನ ಅಧ್ಯಕ್ಷರಾಗಿ ಈ.ಬಿ. ದಿನೇಶ್‍ನಾಯರ್ ಆಯ್ಕೆಯಾಗಿದ್ದಾರೆ.

ದೇವಾಲಯದ ಆವರಣದಲ್ಲಿ ನಿರ್ಗಮಿತ ಅಧ್ಯಕ್ಷ ಕೆ.ಕೆ. ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ 90ನೇ ವರ್ಷದ ದಸರಾ ಸಭೆಯಲ್ಲಿ ಟ್ರಸ್ಟಿಗಳು ಹಾಗೂ ದಸರಾ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್. ನಾಗರಾಜ್, ಸಹ ಕಾರ್ಯದರ್ಶಿಯಾಗಿ ಧರ್ಮರಾಜ್ (ಕಾಂಟ್ರೆಕ್ಟರ್), ಖಜಾಂಚಿಯಾಗಿ ಕೆ. ಸಂತೋಷ್, ಕಾರ್ಯಧ್ಯಕ್ಷರಾಗಿ ಎಂ.ಪಿ. ರವಿ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಕಳೆದ ಸಾಲಿನ ಪದಾಧಿಕಾರಿಗಳು ಮುಂದುವರೆಯಲಿದ್ದಾರೆ.

ಸಮಿತಿಯಲ್ಲಿ 130ಕ್ಕೂ ಹೆಚ್ಚು ಸದಸ್ಯರಿದ್ದು, ಸಭೆಯಲ್ಲಿ ಸರಳ ದಸರಾ ಆಚರಿಸಲು ಎಲ್ಲಾ ಸಮಿತಿ ಸದಸ್ಯರು ಹಾಗೂ ಪದಾಧಿಕಾರಿಗಳು, ಟ್ರಸ್ಟಿಗಳು ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಗೌರವ ಅಧ್ಯಕ್ಷರು, ಸಮಿತಿ ಸರ್ವ ಸದಸ್ಯರು ಹಾಜರಿದ್ದರು.

Search Coorg Media