ಮಡಿಕೇರಿ ಅ.05: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ ಇದರ ಆಡಳಿತ ಮಂಡಳಿ ನಿರ್ದೇಶಕರ 15 ಸ್ಥಾನಕ್ಕೆ ಅಕ್ಟೋಬರ್, 09 ರಂದು ಚುನಾವಣೆ ನಿಗದಿಪಡಿಸಲಾಗಿತ್ತು, ನಾಮಪತ್ರ ವಾಪಾಸಾತಿಯ ನಂತರ ಎಲ್ಲಾ ಕ್ಷೇತ್ರಗಳ 15 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ಹಾಗೂ ಜಿ.ಪಂ. ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಘೋಷಣೆ ಮಾಡಿದ್ದಾರೆ.
ಮಾರಾಟ/ ಗ್ರಾಹಕರ ಸಹಕಾರ ಸಂಘಗಳು/ ಸಹಕಾರ ಸ್ಟೋರ್ಸ್/ ಜೇನು ಸಹಕಾರ ಸಂಘಗಳು ಮತ್ತು ಜಿಲ್ಲಾ ಮಟ್ಟದ ಕಾರ್ಯ ಕ್ಷೇತ್ರವುಳ್ಳ ಸಹಕಾರ ಸಂಘಗಳ ಕ್ಷೇತ್ರಕ್ಕೆ ಬಿದ್ದಾಟಂಡ ಎ.ರಮೇಶ್ ಚಂಗಪ್ಪ, ಮತ್ತು ನಂದಿನೆರವಂಡ ರವಿ ಬಸಪ್ಪ. ಸಹಕಾರ ಮಹಿಳಾ ಸಮಾಜ ಮತ್ತು ಮಹಿಳಾ ಸಹಕಾರ ಸಂಘ, ಮಹಿಳಾ ವಿವಿದೊದ್ಧೇಶ ಸಹಕಾರ ಸಂಘಗಳ ಕ್ಷೇತ್ರಕ್ಕೆ ಮುಕ್ಕಾಟಿರ ಪ್ರೇಮ ಸೋಮಯ್ಯ.
ಕೊಡಗು ಜಿಲ್ಲೆಯ 3 ತಾಲೂಕುಗಳಲ್ಲಿರುವ ಇತರೆ ಸಹಕಾರ ಸಂಸ್ಥೆಗಳ ಕ್ಷೇತ್ರ-ಮಡಿಕೇರಿ ತಾಲೂಕಿಗೆ ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ಕೋಡಿರ ಎಂ. ತಮ್ಮಯ್ಯ, ಕೊಡಪಾಲು ಯಸ್. ಗಣಪತಿ, ವಾಂಚಿರ ಕೆ. ಅಜಯ್ ಕುಮಾರ್.
ಕೊಡಗು ಜಿಲ್ಲೆಯ 3 ತಾಲೂಕುಗಳಲ್ಲಿರುವ ಇತರೆ ಸಹಕಾರ ಸಂಸ್ಥೆಗಳ ಕ್ಷೇತ್ರ-ವಿರಾಜಪೇಟೆ ತಾಲೂಕಿಗೆ ಚಿಮ್ಮಣಮಾಡ ಎಸ್. ಕೃಷ್ಣ ಗಣಪತಿ, ಪಟ್ಟಡ ಸಿ. ಮನು ರಾಮಚಂದ್ರ, ಪೆಮ್ಮಂಡ ವಿ. ಭರತ್, ಕೊಂಗಂಡ ಪಿ. ಮುದ್ದಯ್ಯ
ಕೊಡಗು ಜಿಲ್ಲೆಯ 3 ತಾಲೂಕುಗಳಲ್ಲಿರುವ ಇತರೆ ಸಹಕಾರ ಸಂಸ್ಥೆಗಳ ಕ್ಷೇತ್ರ -ಸೋಮವಾರಪೇಟೆ ತಾಲೂಕಿಗೆ ಪಾಲಚಂಡ. ಸಿ.ಅಚ್ಚಯ್ಯ, ಎಚ್.ಎನ್.ರಾಮಚಂದ್ರ, ನಾಪಂಡ ಉಮೇಶ್ ಉತ್ತಪ್ಪ, ಪಂಜಿಪಳ್ಳ ಬಿ. ಯತೀಶ್ ಅವರು ಆಯ್ಕೆಯಾಗಿದ್ದಾರೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಅವರು ತಿಳಿಸಿದ್ದಾರೆ.
ಈ ಹಿಂದೆ ಆಡಳಿತ ಮಂಡಳಿಗೆ ನಡೆಯಬೇಕಿದ್ದ ಚುನಾವಣೆಯು ಕೊರೊನಾ ಹಿನ್ನೆಲೆ ಮುಂದೂಡಲ್ಪಟ್ಟಿತ್ತು.ಆ ಬಳಿಕ ಜಿಲ್ಲಾಡಳಿತದಿಂದ ಇದೇ ತಾ. 9 ರಂದು ಕೊಡಗು ಸಹಕಾರ ಯೂನಿಯನ್ ಆಡಳಿತ ಮಂಡಳಿಗೆ ಚುನಾವಣೆ ನಿಗದಿ ಗೊಂಡು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೊಂದಿಗೆ, ತಾ. 3 ರಂದು ಅಭ್ಯರ್ಥಿಗಳ ಉಮೇದುವಾರಿಕೆಯ ಪರಿಶೀಲನೆ ನಡೆದಿತ್ತು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ 15 ಸ್ಥಾನಗಳಿಗೆ ಅವಿರೋಧ ಆಯ್ಕೆಯೊಂದಿಗೆ, ಈ ಎಲ್ಲಾ ಸ್ಥಾನಗಳು ಬಿಜೆಪಿ ಪಾಲಾಗಿರುವದು ಹರ್ಷದಾಯಕ ಎಂದು ನಿಕಟಪೂರ್ವ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಪ್ರತಿಕ್ರಿಯಿಸಿದ್ದಾರೆ.