Header Ads Widget

Responsive Advertisement

ಪ್ಲಾಸ್ಟಿಕ್ ಮುಕ್ತ ಈ ಕೋಟೆ ಅಬ್ಬಿ; ಸಾಮಾಜಿಕ ಕಾಳಜಿಯ ವ್ಯಕ್ತಿ, ಓಡಿಯಂಡ ಐಯ್ಯಣ


ಕೊಡಗಿನಲ್ಲಿ ಕರೋನದ ಹಿನ್ನಲೆಯಲ್ಲಿ ಅದ ಲಾಕ್ ಡೌನ್ ನಿಂದಾಗಿ ಪ್ರವಾಸೋದ್ಯಮ ಪ್ರವಾಸಿಗಳಿಲ್ಲದೆ ಬಿಕೋ ಎನ್ನುತಿತ್ತು. ರಸ್ತೆ ಬದಿಯಲ್ಲಿ ಪ್ರವಾಸಿ ಕೇಂದ್ರಗಳಲ್ಲಿ ಎಲ್ಲಾ ಕಡೆಯೂ ಶುಚಿತ್ತ್ವ ಎದ್ದು ಕಾಣುತಿತ್ತು. ರಸ್ತೆಯಲ್ಲಿ ಕೊಡಗಿನವರದೇ ವಾಹನಗಳು ಬೆರಳೆಣಿಕೆಯಷ್ಟು ಓಡಾಡುತಿತ್ತು. ರಸ್ತೆ ಬದಿಯು ಶುಚಿತ್ವದಿಂದ ಕೂಡಿತ್ತು. ಆದರೆ ಈಗ ಪ್ರವಾಸೋದ್ಯಮ ಆರಂಭವಾದುದರಿಂದ, ರಸ್ತೆಬದಿಯಲ್ಲಿ ಎಲ್ಲಿ ನೋಡಿದರು ಪ್ಲಾಸ್ಟಿಕ್ ಬಾಟಲಿ ಮತ್ತು ಕವರ್, ಹೆಂಡದ ಬಾಟಲಿಗಳು ಕಾಣಸಿಗುತ್ತವೆ. ಹೋಂ ಸ್ಟೇ ಮಾಲೀಕರು ತಮ್ಮ ಹೋಂ ಸ್ಟೇ ಗಳಲ್ಲಿ  ಸಂಗ್ರಹವಾದ ತ್ಯಾಜ್ಯಗಳನ್ನು ಮೂಟೆ ಕಟ್ಟಿ ತಮ್ಮ ವಾಹನದಲ್ಲಿ ತಂದು ಅತ್ತಿತ್ತ ನೋಡಿ ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಜನರ ಈ ಬೇಜವಾಬ್ದಾರಿ ನಡತೆಯಿಂದ ಕೊಡಗು ಗಬ್ಬೆದ್ದು ನಾರುವ ಪರಿಸ್ಥಿತಿ ಉಂಟಾಗಿದೆ. 


ಆದರೆ ಇದೆಲ್ಲದಕ್ಕೂ ಅಪವಾದವೆಂಬಂತೆ ಮಕ್ಕಂದೂರು ಪಂಚಾಯಿತಿಗೆ ಒಳಪಟ್ಟ ಕೋಟೆ ಅಬ್ಬಿ ಎಂಬ ಒಂದು ಜಲಪಾತ ಇದೆ. ದಿನಕ್ಕೆ ನೂರಾರು ಪ್ರವಾಸಿಗರು ಬಂದು ಜಲಕ್ರೀಡೆ ನಡೆಯಿಸಿ ಅಲ್ಲಿಯೇ ತಾವು ತಂದ  ಪಾರ್ಸೆಲ್ ತಿಂದು ಕುಡಿದು ಕುಪ್ಪಳಿಸಿ ಹೋಗುತ್ತಾರೆ. ಆದರೆ ನಿಮಗೆ ಎತ್ತ  ಕಣ್ಣಾಡಿಸಿದರು ಒಂದು ಮಿಠಾಯಿಯ ಪ್ಲಾಸ್ಟಿಕ್ ಸಹ ಕಾಣಸಿಗುವುದಿಲ್ಲ. ಏಕೆಂದರೆ ಮಕ್ಕಂದೂರು ಪಂಚಾಯಿತಿಯವರು ಕಳೆದ ಮೂರುವರ್ಷದಿಂದ ಇಲ್ಲಿಯೊಬ್ಬ ಜವಾಬ್ದಾರಿಯುತ, ಸಾಮಾಜಿಕ ಕಾಳಜಿಯಿರುವ ಒಬ್ಬ ವ್ಯಕ್ತಿಯನ್ನು ನೇಮಿಸಿದ್ದಾರೆ. ಅಲ್ಲಿಗೆ ಬರುವ ಪ್ರವಾಸಿಗರಿಗೆ ಸಣ್ಣದೊಂದು ಶುಲ್ಕ ವಿಧಿಸಿ, ಜಲಪಾತದ ಮೇಲುಸ್ತುವಾರಿಯನ್ನು ನೋಡಿಕೊಳ್ಳೋದಕ್ಕೆ ನಿಯೋಜಿಸಿದ್ದಾರೆ. ಅವರೇ ಓಡಿಯಂಡ ಐಯ್ಯಣ. 
ಇನ್ನು ಐಯ್ಯಣ್ಣ ನವರು, ಅಲ್ಲಿಗೆ ಬರುವ ಪ್ರವಾಸಿಗರ ಮೇಲೆ ಸದಾ ನಿಗಾ ಇಟ್ಟಿರುತ್ತಾರೆ. ಜಲಪಾತದ ಕೆಳಬದಿಯಲ್ಲಿ ನೀರು ಬಿದ್ದು ಕೊರೆದು,  ಸುರಂಗ ಆಗಿರೋದರಿಂದ ಅಲ್ಲಿ ಸದಾ ಅಪಾಯ ಕಾದಿರುತ್ತದೆ. ಅಲ್ಲಿಗೆ ಹೋಗುವರನ್ನು ಐಯ್ಯಣ ತಡೆಯುತ್ತಾರೆ . ಇನ್ನು ಜಲಪಾತದ ಮೇಲೆ ಹತ್ತುವುದಕ್ಕೂ ಅಯ್ಯಣನವರ ಅನುಮತಿ ಬೇಕು. ಅದು  ಹದಿನೈದು ನಿಮಿಷಕ್ಕೆ ಸೀಮಿತ. ಏನಿದ್ದರೂ ಸೇತುವೆ ಕೇಳಬದಿಯಲ್ಲಿರುವ ಹೊಳೆಯ ಮೊಣಕಾಲಿನವರೆಗೆ ಇರುವ ನೀರಿನಲ್ಲಿ ಆಟ. 
ಇನ್ನು ಇವರು ಅಲ್ಲಿಗೆ ಬರುವ ಪ್ರವಾಸಿಗರಿಗೆ ಮೊದಲು ಪರಿಚಯಪಡಿಸುವುದೇ ಅಲ್ಲಿನ ಕಸದ ತೊಟ್ಟಿಯನ್ನು. ಒಂದೇ ಒಂದು ಕಾಗದದ ಚೂರಾಗಲಿ ಸಿಗರೇಟಿನ ತುಂಡಾಗಲಿ ನೆಲಕ್ಕೆ ಬೀಳಕೂಡದು.. ಹಾಗೇನಾದರೂ ಆದರೆ ಐಯ್ಯಣ್ಣ ನವರು ಆ ಕೂಡಲೇ ಅಲ್ಲಿಗೆ ತಲುಪಿ ಅವರಿಂದಲೇ  ಅದನ್ನು ಎತ್ತಿಸಿ ಕಸದತೊಟ್ಟಿಗೆ ಹಾಕಿಸುತ್ತಾರೆ. 
ಇನ್ನು ಕೊಡಗಿನಲ್ಲಿ ಎಲ್ಲಾ ಪ್ರವಾಸಿತಾಣಗಳಲ್ಲಿ ಐಯ್ಯಣ್ಣ ನಂತಹ ಸಾಮಾಜಿಕ ಜವಾಬ್ದಾರಿ ಇರುವ ವ್ಯಕ್ತಿಗಳನ್ನು ಆಯಾಯ ಗ್ರಾಮ ಪಂಚಾಯಿತಿ ಅಥವಾ ಅದಕ್ಕೆ ಸಂಬಂಧ ಪಟ್ಟ ಆಡಳಿತ ಯಂತ್ರದ ಅಧಿಕಾರಿಗಳು ನೇಮಿಸಿದ್ದೆ ಆದಲ್ಲಿ ಕೊಡಗು ಮುಂದೊಂದು ದಿನ ಭಾರತದ ಜನರು ಹೇಳುವಂತೆ ಎರಡನೇ ಸ್ಕಾಟ್ಲೆಂಡ್ ಆಗುವುದರಲ್ಲಿ ಸಂಶಯವಿಲ್ಲ. 

ಪುತ್ತರಿರ ಪಪ್ಪು ತಿಮ್ಮಯ್ಯ, 
      ಚೆಟ್ಟಳ್ಳಿ.
ಪುತ್ತರಿರ ಪಪ್ಪು ತಿಮ್ಮಯ್ಯ






Search Coorg Media