ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ - ಸಕ್ರಮ ಸಮಿತಿಯ ಅಧ್ಯಕ್ಷರಾಗಿ ಶಾಂತೆಯಂಡ ರವಿಕುಶಾಲಪ್ಪರವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. 80 ರ ದಶಕದಿಂದಲೂ ಭಾ.ಜ.ಪಾ.ದ ಸಕ್ರೀಯ ಕಾರ್ಯಕರ್ತರಾಗಿದ್ದ ಶಾಂತೆಯಂಡ ರವಿಕುಶಾಲಪ್ಪರವರು ಪಕ್ಷ ನೀಡಿದ ವಿವಿಧ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ನಂತರ ಕೊಡಗು ಜಿ.ಪಂ.ಅಧ್ಯಕ್ಷರಾಗಿಯೂ ತಮ್ಮ ಅಧಿಕಾರಾವಧಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಕಳೆದ ಸಾಲಿನಲ್ಲಿ ಭಾ.ಜ.ಪಾ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ನೇಮಕಗೊಂಡಿದ್ದರು. ಇದೀಗ ಅಕ್ರಮ ಸಕ್ರಮ ಸಮಿತಿಯಲ್ಲಿ ವಿಲೇವಾರಿಗೆ ಬಾಕಿಯಿರುವ ಸಾರ್ವಜನಿಕರ ನೂರಾರು ಅರ್ಜಿಗಳ ವಿಲೇವಾರಿಯ ಜವಾಬ್ದಾರಿಯನ್ನು ರವಿಕುಶಾಲಪ್ಪ ನೇತೃತ್ವದ ಸಮಿತಿ ನಿಭಾಯಿಸಲಿದೆ.ಸಮಿತಿ ಕಾರ್ಯದರ್ಶಿಯಾಗಿ ತಾಲ್ಲೂಕು ತಹಶೀಲ್ದಾರ್ - ಸದಸ್ಯರುಗಳಾಗಿ ಕವಿತಾ ಪ್ರಭಾಕರ್ , ಶ್ರಿ ಮಿಟ್ಟು , ಸುಬ್ರಮ್ಮಣ್ಯ ಉಪಾಧ್ಯಾಯ ಇವರುಗಳನ್ನು ಸರಕಾರ ನೇಮಕ ಮಾಡಿದೆ.
Search Coorg Media