ಚೆಟ್ಟಳ್ಳಿ ಪ್ರಾಥಮಿಕಕ್ರಷಿಪತ್ತಿನ ಸಹಕಾರ ಸಂಘದ ಮುಂಭಾಗದಲ್ಲಿ ಶುದ್ಧ ನೀರಿನ ಘಟಕವನ್ನು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಮುಂದಾಳತ್ವದಲ್ಲಿ ಸರ್ವಧರ್ಮದ ಪ್ರಮುಖರಾದ ಚೆಟ್ಟಳ್ಳಿಯ ಅರ್ಚಕ ಯೋಗೇಶ್‌ಭಟ್ಟ್, ನೂರುದೀನ್ ಜುಹ್ರಿಖತೀಬ್, ಧರ್ಮಗುರುಗಳಾ ಫಾದರ್‌ಸ್ಟೀಫನ್‌ಅಲೆಕ್ಸ್ ಉದ್ಗಾಟಿಸಿದರು.
ಸಂಘದ ಅಧ್ಯಕ್ಷ ಬಲ್ಲಾರಂಡಮಣಿಉತ್ತಪ್ಪ ಸ್ವಾಗತಿಸಿ ಸುಮಾರು 25 ವರ್ಷಕ್ಕೆ ಮೊದಲು ನಾನು ಪಂಚಾಯಿತಿಯ ಉಪಾಧ್ಯಕ್ಷನಾಗಿ ಸಂದರ್ಭ ಚೆಟ್ಟಳ್ಳಿಯಲ್ಲಿ ಶುದ್ಧನೀರಿನ ಘಟಕ ಸ್ಥಾಪನೆಯಾಗ ಬೇಕೆಂಬ ಕನಸಿತ್ತು. ಹಲವುಬಾರಿ ಒತ್ತಾಯಿಸಿದೆ. ಪ್ರಯತ್ನ ಫಲಕಾರಿ ಯಾಗಲಿಲ್ಲ.
ನಂತರ ಜಿಲ್ಲಾಪಂಚಾಯಿತಿಗೆ ಆಯ್ಕೆಯಾದ ಸಂದರ್ಭ ಕಾವೇರಿ ನದಿಯಿಂದ ಚೆಟ್ಟಳ್ಳಿಗೆ ಕುಡಿಯುವ ನೀರಿನವ್ಯವಸ್ಥೆಮಾಡಲು ಪ್ರಯತ್ನಿಸಿದ ಫಲವಾಗಿಸರ್ವೆನಡೆದು 2 ಕೋಟಿ ಹಣಬಿಡುಗಡೆಯಾಗಿ 9 ಲಕ್ಷ ರೂಪಾಯಿ ಖರ್ಚುಮಾಡಲಾಯಿತು.
ಮುಂದಿನ ಜಿಲ್ಲಾಪಂಚಾಯಿತಿ ಸದಸ್ಯರೊಬ್ಬರು ಆಯ್ಕೆಯಾದರೂ ಮುಂದೆ ಕುಡಿಯುವ ನೀರಿನ ಕಾಮಗಾರಿ ನಡೆಯಲೇ ಇಲ್ಲ. ನಂತರದಲ್ಲಿ ಚೆಟ್ಟಳ್ಳಿ ಸಹಕಾರ ಸಂಘದ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿ ಸಹಕಾರ ಸಂಘದಿಂದಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಡಿ ಊರಿನಜನತೆಗೆ ನೀರಿನ ವ್ಯವಸ್ಥೆಯನ್ನು ಮಾಡಲಾಗಿ ಹಲವು ವರ್ಷಗಳ ಕನಸು ಇಂದು ನನಸಾಗಿದೆಂದರು. ರೂಪಾಯಿ 5 ನಾಣ್ಯವನ್ನು ಹಾಕುವ ಮೂಲಕ ಶುದ್ಧನೀರನ್ನು ಪಡೆದರು.
ಕಾಫಿಯ ಗುಣಮಟ್ಟವನ್ನು ಪರೀಕ್ಷಲು ರೈತರಿಗೆ ಅನುಕೂಲವಾಗುವಂತೆ ಕಾಫಿ ಗುಣಮಟ್ಟ ಪರೀಕ್ಷಾ ಕೆಂದ್ರವನ್ನು ಕಾಫಿ ಬೆಳೆಗಾರರಾದ ಅಯ್ಯಂಡ್ರ
ಸಿ ರಾಘವಯ್ಯ,ಬಿದ್ದಂಡ ಎ.ಅಚ್ಚಯ್ಯ,ಹೊಸಮನೆ ಟಿ ಪೂವಯ್ಯ, ಸ್ಥಳೀಯ ವ್ಯಾಪಾರಸ್ಥರಾದ ಇಸ್ಮಾಯಿಲ್ ಉದ್ಗಾಟಿಸಿದರು.
ಬಲ್ಲಾರಂಡ ಮಣಿಉತ್ತಪ್ಪ ಮಾತನಾಡಿ, ಬೆಳೆಗಾರರು ತಾವು ಬೆಳೆದ ಕಾಫಿಹಾಗು ಕರಿಮೆಣಸಿನ ಗುಣಮಟ್ಟವನ್ನು ಸಂಘ ದಲ್ಲಿರುವ ಪರೀಕ್ಷಣಾ ಘಟಕದಲ್ಲಿ ಪರೀಕ್ಷಿಸಿಕೊಳ್ಳುವ ಮೂಲಕ ಸಂಘದಲ್ಲಿ ಸ್ಥಾಪಿಸಲಾದ ಕಾಫಿಗುಣಮಟ್ಟ ಪರಿಶೀಲನಾ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ಮುಂದಿನ ತಿಂಗಳಲ್ಲಿ ಸಹಕಾರಸಂಘದ ಮೇಲಂತಸ್ತಿನ ನೂತನ ಕಟ್ಟಡ ಉದ್ಗಾಟನೆ ಸಿದ್ದಗೊಳ್ಳುತಿದೆಂದರು.
ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿಸಹಕಾರಸಂಘದಲ್ಲಿ ವಿಶೇಷಪೂಜೆ ಸಲ್ಲಿಸಲಾಯಿತು.
ಸಂಘದ ಮಾಜಿ ಉಪಾಧ್ಯಕ್ಷ ಹೆಚ್.ಎಸ್.ತಿಮ್ಮಪಯ್ಯ,
ಕಾಫಿ ಬೆಳೆಗಾರರಾದ ಚೇರಳತಮ್ಮಂಡಆನಂದ,
ಪುತ್ತರಿರ ಕೆ.ದೇವಯ್ಯ, ಸಂಘದ ಮಾಜಿ
ಕಾರ್ಯನಿರ್ವಹಣಾ ಧಿಕಾರಿ ಮುಳ್ಳಂಡಮಾಯಮ್ಮ, ಚೆಟ್ಟಳ್ಳಿ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ ಬಲ್ಲಾರಂಡ ಕಂಠಿಕಾರ್ಯಪ್ಪ, ಕಾಫಿಬೆಳೆಗಾರ ಮುಳ್ಳಂಡ.ಟಿ.ಚಂಗಪ್ಪ, ವಾಲ್ನೂರು ಪಂಚಾಯಿತಿಯ ಮಾಜಿಅಧ್ಯಕ್ಷರಾದ ಅಂಚೆಮನೆಸುದಿ ಅತಿಥಿಗಳಾಗಿದ್ದರು. ಸಹಕಾರಸಂಘದ ನಿರ್ದೇಶಕರುಗಳು, ಸ್ಥಳೀಯರು ಭಾಗವಹಿಸಿದ್ದರು.