Header Ads Widget

ಸರ್ಚ್ ಕೂರ್ಗ್ ಮೀಡಿಯ

ರಾಷ್ಟ್ರೀಯ ಕಾಮಧೇನು ಆಯೋಗದಿಂದ 'ಕಾಮಧೇನು ದೀಪಾವಳಿ ಅಭಿಯಾನ'


ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯಿ ಕಠಾರಿಯಾ ಅವರು ಹಸುವಿನ ಸಗಣಿಯಿಂದ ತಯಾರಿಸಿದ ಚಿಪ್ ಅನ್ನು ಅನಾವರಣಗೊಳಿಸಿದ್ದು, ಮೊಬೈಲ್ ಹ್ಯಾಂಡ್ ಸೆಟ್ ಗಳಿಂದ ಬರುವ ವಿಕಿರಣವನ್ನು ಇದು ಕಡಿಮೆ ಮಾಡುತ್ತದೆ ಮತ್ತು ಇದು ರೋಗಗಳ ವಿರುದ್ಧ ರಕ್ಷಣೆಯನ್ನು ನೀಡಲಿದೆ ಎಂದು ಹೇಳಿದ್ದಾರೆ. 'ಚಿಪ್' ಅನ್ನು ರಾಜಕೋಟದ ಶ್ರೀಜಿ ಗೋಶಾಲೆಯಲ್ಲಿ ತಯಾರಿಸಲಾಗಿದ್ದು ಇದಕ್ಕೆ ಗೋ ಸತ್ವ ಕವಚ ಎಂದು ಹೆಸರಿಡಲಾಗಿದೆ.

ಹಸುವಿನ ಉತ್ಪನ್ನಗಳನ್ನು ಉತ್ತೇಜಿಸುವಲ್ಲಿ ತೊಡಗಿರುವ ರಾಷ್ಟ್ರವ್ಯಾಪಿ ಅಭಿಯಾನವಾದ 'ಕಾಮಧೇನು ದೀಪಾವಳಿ ಅಭಿಯಾನ' ವನ್ನು ಆರಂಭಿಸಿದ ಮಾತನಾಡಿದ ಅವರು, "ಹಸುವಿನ ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ. ಇದು ರೇಡಿಯೇಷನ್ ವಿರೋಧಿ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಚಿಪ್‌ಗಳನ್ನು ರೇಡಿಯೇಷನ್ ಕಡಿಮೆ ಮಾಡಲು ಮೊಬೈಲ್‌ ಫೋನ್‌ಗಳಲ್ಲಿ ಬಳಸಬಹುದಾಗಿದೆ ಅಂದಿದ್ದಾರೆ.

ಗೌಸತ್ವಾ ಕವಾಚ್ ಹೆಸರಿನ ಈ ಚಿಪ್ ಅನ್ನು ರಾಜ್ ಕೋಟ್ ಮೂಲದ ಶ್ರೀಜೀ ಗೌಶಾಲಾ ಸಂಸ್ಥೆ 2019ರಲ್ಲಿ ತಯಾರಿಸಿದ್ದು, ಗೋವುಗಳ ಸಂರಕ್ಷಣೆ, ಅವುಗಳ ಸಂತತಿ ಯನ್ನು ಸಂರಕ್ಷಿಸುವ ುದು ಮತ್ತು ಅವುಗಳ ಸಂತತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಬರುವ ಈ ಆಯೋಗವು ಹಬ್ಬದ ಸಂದರ್ಭದಲ್ಲಿ ಸಗಣಿ ಆಧಾರಿತ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಆಂದೋಲನವನ್ನು ಆರಂಭಿಸಿದೆ.

ಕೊರೋನಾ ಹರಡುವುದನ್ನು ತಡೆಗಟ್ಟುವುರಲ್ಲಿಯೂ ಗೋ ಉತ್ಪನ್ನಗಳು ಪರಿಣಾಮಕಾರಿಯಾಗುತ್ತವೆ ಎನ್ನುವುದು ಈಗಾಗಲೇ ಸಂಶೋಧನೆಗಳಿಂದ ಸಿದ್ದವಾಗಿದೆ. ರಾಷ್ಟ್ರೀಯ ಕಾಮಧೇನು ಆಯೋಗವು ದೇಶಾದ್ಯಂತ ಸೆಗಣೆಯಿಂದ (ಗೋಮಯ) ತಯಾರಿಸಿದ ಹಣತೆಯ ಮೂಲಕ ದೀಪಾವಳಿ ಆಚರಿಸುವ ‘ಕಾಮಧೇನು ದೀಪಾವಳಿ’ ಎಂಬ ಬೃಹತ್ ಆಂದೋಲನ ಹಮ್ಮಿಕೊಂಡಿದೆ. ಈ ಬಾರಿಯ ದೀಪಾವಳಿಯನ್ನು ಸಗಣಿ ಹಾಗೂ ಪಂಚಗವ್ಯವನ್ನು ವ್ಯಾಪಕವಾಗಿ ಬಳಸುವ ಮೂಲಕ ಸ್ವಚ್ಛ ಮತ್ತು ಆರೋಗ್ಯಪೂರ್ಣ, ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ರಾಷ್ಟ್ರೀಯ ಕಾಮಧೇನು ಆಯೋಗವು ವಿನಂತಿಸಿಕೊಂಡಿದೆ.