Header Ads Widget

Responsive Advertisement

ರಾಷ್ಟ್ರೀಯ ಕಾಮಧೇನು ಆಯೋಗ


ಫೆ. 2019 ರ ಬಜೆಟ್‌ನಲ್ಲಿ ಕೇಂದ್ರಸರ್ಕಾರ ರಾಷ್ಟ್ರೀಯ ಕಾಮಧೇನು ಆಯೋಗವನ್ನು ಸ್ಥಾಪಿಸುವ ಘೋಷಣೆ ಮಾಡಿತ್ತು. ಅದರಂತೆ ಆಯೋಗ ಈಗ ಕೆಲಸ ಪ್ರಾರಂಭಿಸಿದ್ದು ಗೋಸೇವೆ, ಗೋವಿಜ್ಞಾನ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಸಾಮಾಜಿಕ ಕಾರ್ಯಕರ್ತರು, ಪಶು ಸಂಗೋಪನೆ ಕ್ಷೇತ್ರದಲ್ಲಿ ಸಂಶೋಧನೆ ಮಾಡುತ್ತಿರುವ ವಿಜ್ಞಾನಿಗಳು ಹಾಗೂ ಕೆಲವು ರಾಜ್ಯಗಳ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಈ ಆಯೋಗದ ಸದಸ್ಯರು. 

ಈ ಆಯೋಗವು ಪಶು ಸಂಗೋಪನೆ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಪ್ರಸ್ತುತ ಪಶು ತಳಿ ಅಭಿವೃದ್ಧಿಯಲ್ಲಿ ತೊಡಗಿರುವ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಆಯೋಗದ ರಚನೆಯಿಂದ ಪಶು ಸಂಗೋಪನಾ ವಲಯ ಮತ್ತಷ್ಟು ವಿಸ್ತರಣೆಯಾಗಲಿದ್ದು, ಇದರಿಂದ ಮಹಿಳೆಯರು ಹಾಗೂ ಸಣ್ಣ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ.

ದೇಸೀ ತಳಿಯ ಗೋವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕುವ ರಾಜ್ಯಗಳಾದ ಉತ್ತರಪ್ರದೇಶ, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಿವಿಧ ಗೋಶಾಲೆಗಳು ಹಾಗೂ ಗೋ ಆಧಾರಿತ ಚಿಕಿತ್ಸೆ ನೀಡುವ ಕೇಂದ್ರಗಳು ಈ ‘ಗೋ ಸರ್ಕ್ಯೂಟ್’ನ ಭಾಗವಾಗಿರಲಿವೆ. ಈ ಯೋಜನೆಯಡಿಯಲ್ಲಿ ಒಂದು ಕೇಂದ್ರಕ್ಕೆ ಸುಮಾರು 2 ಕೋಟಿ ರೂ.ಗಳ ವೆಚ್ಚದಲ್ಲಿ ದೇಶಾದ್ಯಂತ ಸುಮಾರು 400 ಕೇಂದ್ರಗಳನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವ ಯೋಜನೆ ಆಯೋಗದ್ದು. ಸ್ಪಾ, ಆಯುರ್ವೇದ ಚಿಕಿತ್ಸೆ, ಗೋಮಯ-ಗೋಮೂತ್ರ ಮೊದಲಾದ ವಸ್ತುಗಳಿಂದ ತಯಾರಿಸಿದ ಸೋಪ್, ಶಾಂಪೂ, ದೇಸೀ ಗೋವಿನ ತುಪ್ಪ, ಔಷಧೀಯ ಉತ್ಪನ್ನಗಳು ಈ ಕೇಂದ್ರಗಳಲ್ಲಿ ಲಭ್ಯವಿರಲಿವೆ. ಈಗಾಗಲೇ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿಸಿದ್ದು, ಸೋಮನಾಥ ದೇವಸ್ಥಾನ, ಸಾಬರಮತಿ ಆಶ್ರಮ, ದೆಹಲಿಯ ತಿಹಾರ್ ಜೈಲ್, ಪುಣೆಯ ಯರವಾಡಾ ಜೈಲ್, ಗೋವಾದ ಸಮುದ್ರ ತೀರದ ಪ್ರವಾಸೀ ತಾಣಗಳು, ಕೇರಳದ ಆಯುರ್ವೇದ ಚಿಕಿತ್ಸಾ ಕೇಂದ್ರಗಳಲ್ಲಿ ಈ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ರಾಷ್ಟ್ರೀಯ ಕಾಮಧೇನು ಆಯೋಗ ಹೊಂದಿದೆ.