ನೆಲಜಿ ಫಾರ್ಮರ್ಸ್ ಡೆವಲಪ್‍ಮೆಂಟ್ ಮತ್ತು ರಿಕ್ರಿಯೇಷನ್ಸ್ ಅಸೋಸಿಯೇಷನ್ ವತಿಯಿಂದ 2ನೇ ವರ್ಷದ ರಾಜ್ಯ ಮಟ್ಟದ ಮುಕ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಜ.9 ರಂದು ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಮಂಡೀರ ನಂಜಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲಜಿ ಅಂಬಲದಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಸ್ಪರ್ಧೆಯನ್ನು ಅಮ್ಮತ್ತಿಯ ನೆಲ್ಲಮಕ್ಕಡ ಶರತ್ ಸೋಮಣ್ಣ, ಪಾಲೆಕಂಡ ಸಾಯಿ ಮತ್ತು ಮಾಚೆಟ್ಟಿರ ನವೀನ್ ಚಾಲನೆ ನೀಡಲಿದ್ದಾರೆ ಎಂದರು.
ಸ್ಪರ್ಧೆಯು 0.22 ಮತ್ತು 12ನೇ ಬೋರ್ ಕೋವಿಯನ್ನು ಒಳಗೊಂಡಿದ್ದು, 0.22 ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ.50 ಸಾವಿರವನ್ನು ಮಾಚೆಟ್ಟೀರ ಸುಶೀಲ ಹಾಗೂ ಪುತ್ರ ನವೀನ್ ಮತ್ತು ಕುಟುಂಬಸ್ಥರು ನೀಡಲಿದ್ದಾರೆ. ದ್ವಿತೀಯ ಬಹುಮಾನ ಪಡೆದವರಿಗೆ ರೂ.30 ಸಾವಿರವನ್ನು ಕೊಳಕೇರಿಯ ಕೇಟೋಳಿರ ಕುಟ್ಟಪ್ಪ ಹಾಗೂ ಕುಟುಂಬಸ್ಥರು ನೀಡಲಿದ್ದಾರೆ. ತೃತೀಯ ಬಹುಮಾನ ಪಡೆದವರಿಗೆ ರೂ.20 ಸಾವಿರವನ್ನು ನಾಪೋಕ್ಲುವಿನ ಶಿವಚಾಳಿಯಂಡ ದೇವಕ್ಕಿ ಹಾಗೂ ಪುತ್ರ ಅಂಬಿಕಾರ್ಯಪ್ಪ ಮತ್ತು ಕುಟುಂಬಸ್ಥರು ನೀಡಲಿದ್ದಾರೆ ಎಂದರು.
12ನೇ ಬೋರ್ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ರೂ.10 ಸಾವಿರವನ್ನು ಪೇರೂರು ಗ್ರಾಮದ ಪಾಲೆಯಡ ಕೆ.ಸಂತೋಷ್ ನೀಡಲಿದ್ದಾರೆ. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.7 ಸಾವಿರವನ್ನು ಮೂವೆರ ಎಸ್.ಪಟ್ಟು ಪೆಮ್ಮಯ್ಯ ಹಾಗೂ ಕುಟುಂಬಸ್ಥರು ನೀಡಲಿದ್ದಾರೆ. ತೃತೀಯ ಬಹುಮಾನ ಪಡೆದವರಿಗೆ ರೂ.5 ಸಾವಿರವನ್ನು ಕೊಳಕೇರಿಯ ಅಪ್ಪರಂಡ ಎಂ.ಅಪ್ಪಯ್ಯ ಹಾಗೂ ಕುಟುಂಬಸ್ಥರು ನೀಡಲಿದ್ದಾರೆ ಎಂದು ತಿಳಿಸಿದರು.
ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್‍ನ ಮಾಜಿ ಸೀನಿಯರ್ ಸ್ಪೋಟ್ರ್ಸ್ ಆಫೀಸರ್ ಚೌಂಡೀರ ಪಿ.ಪೂಣಚ್ಚ, ಜಿ.ಪಂ ಸದಸ್ಯರು ಮತ್ತು ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಚೀಯಕಪೂವಂಡ ಕೆ.ಬೋಪಣ್ಣ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚಟ್ಟೋಳಂಡ ಮನುಮುತ್ತಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಜ.9 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ರೊಳಗೆ ವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿಸಿದ ಅವರು, ಹೆಚ್ಚಿನ ಮಾಹಿತಿಗೆ 9449565125, 7338175794, 9448326055 ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಕೆ.ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಮಂಡೀರ ಸಚಿನ್ ಗಣಪತಿ, ನಿರ್ದೇಶಕರುಗಳಾದ ಚಿಯಕಪೂವಂಡ ನವೀನ್ ನಾಚಪ್ಪ ಹಾಗೂ ಬದ್ದಂಜೆಟ್ಟೀರ ಸುಜ್ಸ ತಿಮ್ಮಯ್ಯ ಉಪಸ್ಥಿತರಿದ್ದರು.
Search Coorg Media: Coorg's Largest Online Media Network