Header Ads Widget

Responsive Advertisement

ಅಜಾತಶತ್ರು ನಾಯಕನಿಗೆ ಹೃದಯಸ್ಪರ್ಶಿ ಸ್ವಾಗತ


ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾಗಿ ಬೆಂಗಳೂರಿನ ಅರಣ್ಯ ಸಚಿವರ ಕಚೇರಿಯಲ್ಲಿ ಕಾರ್ಯಪಡೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಶುಕ್ರವಾರ ಬೆಳಿಗ್ಗೆ ಜಿಲ್ಲೆಗೆ ಆಗಮಿಸಿದ ಶಾಂತೆಯಂಡ ರವಿಕುಶಾಲಪ್ಪ ಅವರನ್ನು ಪ್ರವೇಶ ದ್ವಾರ ಕುಶಾಲನಗರದ ಟೋಲ್ ಗೇಟ್ ಬಳಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪುಷ್ಪಾಹಾರ ಹಾಕಿ ವಾದ್ಯಗೋಷ್ಠಿಗಳೊಂದಿಗೆ ಅದ್ದೂರಿ ಸ್ವಾಗತ ನೀಡಿದರು. ಮೊದಲಿಗೆ ರವಿಕುಶಾಲಪ್ಪ ಅವರು ಕಾವೇರಿ ಪ್ರತಿಮೆಗೆ ಪುಷ್ಪಹಾರ ಅರ್ಪಿಸಿ ಪೂಜೆ ಸಲ್ಲಿಸಿದರು. ಕೊಪ್ಪ ಸೇತುವೆಯಿಂದ ಕಾರ್ಯಪ್ಪ ವೃತ್ತದ ವರೆಗೂ ತೆರೆದ ವಾಹನದಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಗಣಪತಿ ದೇವಾಲಯದಲ್ಲಿ ರವಿಕುಶಾಲಪ್ಪ ಪೂಜೆ ಸಲ್ಲಿಸಿದರು.

   


ಕೊಡಗಿನ ಗಡಿ ಭಾಗ ಕುಶಾಲನಗರದಿಂದ ಸ್ವಾಗತವನ್ನು ಸ್ವೀಕರಿಸಿ ಮಡಿಕೇರಿ ನಗರಕ್ಕೆ ಆಗಮಿಸಿದ ಶಾಂತೆಯಂಡ ರವಿಕುಶಾಲಪ್ಪನವರನ್ನು ಸುದರ್ಶನ ವೃತ್ತದ ಬಳಿ ಅಸಂಖ್ಯ ಕಾರ್ಯಕರ್ತರು ಅಭಿಮಾನಿಗಳು ಹೃದಯಸ್ಪರ್ಶಿ ಸ್ವಾಗತವನ್ನು ಕೋರಿದರು. ನಗರದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಗುಡ್ಡೆಮನೆ ಅಪ್ಪಯ್ಯ ಗೌಡ, ಜನರಲ್ ಕೆ.ಎಸ್.ತಿಮ್ಮಯ್ಯ, ಮಂಗೇರಿರ ಮುತ್ತಣ್ಣ, ಸ್ಕ್ವಾಡ್ರರ್ನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಬಳಿಕ ಕೋಟೆಯ ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದ ಅವರು ಈಡುಗಾಯಿ ಹೊಡೆದು ಪ್ರಾರ್ಥಿಸಿದರು. 

   


ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ಮರುಸರ್ವೇ ಅಗತ್ಯವಾಗಿದೆ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶವನ್ನು ವೈಮಾನಿಕ ಸಮೀಕ್ಷೆ ನಡೆಸಿ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ ಎಂಬ ಮಾತುಗಳು  ಕೇಳಿ ಬಂದಿವೆ. ಆದರೆ ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ವೈಮಾನಿಕ ಸಮೀಕ್ಷೆ ಮೂಲಕ ಸರ್ವೇ ಮಾಡಿದರೆ ಕಾಫಿ ತೋಟವು ಕಾಡಿನಂತೆ ಕಾಣುತ್ತದೆ. ಆದ್ದರಿಂದ ವಾಸ್ತವಿಕ ಹಾಗೂ ವೈಜ್ಞಾನಿಕವಾಗಿ ಮರು ಸರ್ವೇಕಾರ್ಯ ನಡೆಸುವುದು ಅಗತ್ಯವಾಗಿ ಎಂದು ಅಭಿಪ್ರಾಯಪಟ್ಟರು.

   


ಡಾ.ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧವಾದ ತೀರ್ಮಾನ ಗ್ರಾಮಾಂತರ ಮಟ್ಟದಿಂದ ಸರ್ಕಾರದ ವರೆಗೂ ಹೋಗಿದೆ. ಮೊದಲಿಗೆ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಸಭೆ ನಡೆಸಿ ಸಮಿತಿ ರಚನೆ ಮಾಡಿ ಆ ಸಮಿತಿ ಮೂಲಕ ಅರಣ್ಯ ಸರ್ವೇ ಕಾರ್ಯ ಮಾಡಿಸುವ ಕೆಲಸ ಆಗಬೇಕು ಎಂದು ಹೇಳಿದರು.

   


ಪರಿಸರ, ಅರಣ್ಯವನ್ನು ಉಳಿಸುವ ಕೆಲಸ ಪರಿಸರ ಪ್ರೇಮಿಗಳು ಕಾಡಿನಲ್ಲಿ ವಾಸಿಸುವ ಮೂಲನಿವಾಸಿಗಳಿಂದ ರಕ್ಷಣೆಯಾಗುತ್ತಿದೆ. ಕಾಡು ಸಂರಕ್ಷಣೆಯಾಗಬೇಕು. ಪರಿಸರವನ್ನು ಶೇ 100 ರಷ್ಟು ಉಳಿಯಬೇಕು. ಎಲ್ಲೂ ಕಾಂಕ್ರೀಕರಣ ಆಗಬಾರದು ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ  ಚಂಡಮಾರುತ, ಸುನಾಮಿ, ನೆರೆಪ್ರವಾಹ, ಪ್ರಾಕೃತಿಕ ವಿಕೋಪದಂತಹ ವಾತಾವರಣ ವೈಪರೀತ್ಯವನ್ನು ನಾವು ಕಾಣುತ್ತೇವೆ. ಈ ಅಸಮತೋಲನವನ್ನು ಸರಿದೂಗಿಸಿಕೊಂಡು ಹೋಗಬೇಕಾದರೆ ಅರಣ್ಯೀಕರಣ ಉಳಿಯಬೇಕು. ಕೊಡಗು ಜಿಲ್ಲೆಯಲ್ಲಿ ಶೇ.85 ರಷ್ಟು ಅರಣ್ಯವನ್ನು ನಾವು ಉಳಿಸಿಕೊಂಡಿದ್ದೇವೆ. ಶೇ.35 ರಷ್ಟು ಅರಣ್ಯ ಎಲ್ಲ ಕಡೆ ಇರಬೇಕಾಗಿದೆ. ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಅರಣ್ಯ ಉಳಿಸುವ ಕೆಲಸ ಆಗಬೇಕು.

    ನದಿಗಳ ಮೂಲಶುದ್ದೀಕರಣ ಆಗಬೇಕು. ಜೊತೆಗೆ ನೂರಾರು ವರ್ಷಗಳಿಂದ ಕಾಡಿನಲ್ಲಿ ಹಾಗೂ ಹಾಡಿಗಳಲ್ಲಿ ವಾಸಿಸುವ ಮೂಲ ನಿವಾಸಿಗಳಿಗೆ ವಿದ್ಯುತ್ ಸೌಲಭ್ಯ ಕೊಡಲು  ಸಾಧ್ಯವಾಗದಿದ್ದರೆ ಗ್ಯಾಸ್, ಸೋಲಾರ್ ದೀಪ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಪ್ರ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು. ಕಾಡು, ಮಾನವ ಹಾಗೂ ಪ್ರಾಣಿಗಳು ಜೊತೆಗೆ ಬದುಕುವಂತಹ ದುಸ್ಥಿತಿ ಬಂದಿದೆ ಇದರಿಂದ ಆಪಾಯ ಕಟ್ಟಿಟ್ಟಭುತ್ತಿ ಎಂದರು. ಈ ಬಗ್ಗೆ ನಾವು ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ.

   


ನಾವು ಒಂದು ವ್ಯವಸ್ಥೆ ಪರವಾಗಿಲ್ಲ.ಇಡೀ ಸಮಾಜಕ್ಕೆ ಒಳಿತಾಗಬೇಕು.ಜನರ ರಕ್ಷಣೆಯಾಗಬೇಕು, ಕಾಡಿನ ಪ್ರಾಣಿಗಳ ರಕ್ಷಣೆಯಾಗಬೇಕು ಹಾಗೂ ಪರಿಸರವು ಉಳಿಯಬೇಕು ಎಂಬ ಚಿಂತನೆ ನಮ್ಮದು ಎಂದರು. ದೇವರಕಾಡು, ಗೋಮಾಳ, ಪೈಸಾರಿ, ನದಿ ದಂಡೆಗೆ ಅತಿಕ್ರಮ ಪ್ರವೇಶ ಮಾಡಬಾರದು ಎಂಬ ನಿಯಮವಿದೆ.ಈಗಾಗಲೇ ಅತಿಕ್ರಮ ಪ್ರವೇಶದಿಂದ ಆದ ದುರಂತವನ್ನು ನಾವು ಜಿಲ್ಲೆಯಲ್ಲಿ ನೋಡಿದ್ದೇವೆ. ಕಂದಾಯ ಭೂಮಿಯನ್ನು ಜನರಿಗೆ ನೀಡಬೇಕು. ಈಗಾಗಲೇ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಜನರಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು. 

    ಅರಣ್ಯದೊಳಗೆ ಆಕೇಷಿಯಾದಂತಹ ಮರಗಳನ್ನು ಬೆಳೆಸುವ ಬದಲು ಆನೆಗಳಿಗೆ ಆಹಾರಕ್ಕೆ ಪೂರಕವಾಗಿ ಹಸಲು, ಬಿದಿರಿನಂತ ಆಹಾರ ಸಸಿಗಳನ್ನು ಬೆಳೆಸಬೇಕು. ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ ಆನೆಗಳಿಗೆ ವ್ಯವಸ್ಥೆ ಕಲ್ಪಿಸಿದರೆ ಖಂಡಿತವಾಗಿ ಕಾಡು ಪ್ರಾಣಿಗಳು ನಾಡಿಗೆ ಬರುವುದಿಲ್ಲ. ಇದರಿಂದ ಆನೆ ಮಾನವ ಸಂಘರ್ಷ ತಡೆಯಬಹದು. ಕಾಡಿನ ಮೂಲ ನಿವಾಸಿಗಳ ಒಕ್ಕಲೆಬ್ಬಿಸು ಕೆಲಸ ಕೂಡ ಆಗಬಾರದು. ಅವರಿಗೆ ಇದ್ದಲ್ಲಿಯೇ ಎಲ್ಲ ಸೌಲಭ್ಯ ಕಲ್ಪಿಸಬೇಕು. ನದಿಗಳ ಮೂಲ ಸಂರಕ್ಷಣೆಗೆ ಸಂಘ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತೇವೆ. ಪರಿಸರಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳದೆ ಹೋದರೆ ಮಾನವನಿಗೆ ಉಳಿಗಾಲವಿಲ್ಲ ಎಂದು ಕುಶಾಲಪ್ಪ ಎಚ್ಚರಿಕೆ ನೀಡಿದರು.

    ಕಾರ್ಯಪಡೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದು ಪಕ್ಷದಲ್ಲಿ ದೀರ್ಘ ಕಾಲದಿಂದ ನಿಷ್ಠವಂತ ಕಾರ್ಯಕತನಾಗಿ ದುಡಿದ ಫಲವಾಗಿದೆ. ಎಲ್ಲ ಶಾಸಕರು,ಸಂಸದರು ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದ ಸಲ್ಲಿಸಿತ್ತೇನೆ. ನಾನು ಇದನ್ನು ಹುದ್ದೆ ಎಂದು ಭಾವಿಸಿಕೊಳ್ಳುವುದಿಲ್ಲ, ಜವಬ್ದಾರಿ ಎಂದು ತಿಳಿದುಕೊಳ್ಳುತ್ತೇನೆ. ಪಕ್ಷಕ್ಕಾಗಲಿ ಹಿರಿಯ ಮುಖಂಡರಿಗಾಗಲಿ ನೋವುಂಟಾಗದಂತೆ ಕೆಲಸ ಮಾಡುವ ಮೂಲಕ ಕಾವೇರಿ ತಾಯಿ ಆರ್ಶೀವಾದದಿಂದ ಮತ್ತೊಮ್ಮೆ ಕೊಡಗಿಗೆ ಹೆಸರು ತರುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ರವಿ ಕುಶಾಲಪ್ಪ ಹೇಳಿದರು.

ಸ್ವಾಗತ ಕಾರ್ಯಕ್ರಮದಲ್ಲಿ ಪುತ್ತೂರು ಬಿಜೆಪಿ ಉಸ್ತುವಾರಿ ಬಿ.ಬಿ.ಭಾರತೀಶ್, ಜಿ.ಪಂ.ಮಾಜಿ ಅಧ್ಯಕ್ಷರಾದ ಶರೀನ್ ಸುಬ್ಬಯ್ಯ, ಜಿ.ಪಂ.ಮಾಜಿ ಸದಸ್ಯರಾದ ವೆಂಕಪ್ಪ, ಕುಶಾಲನಗರ ಪ.ಪಂ.ಅಧ್ಯಕ್ಷ ಬಿ.ಜಯವರ್ಧನ್, ಸದಸ್ಯರಾದ ಅಮೃತ್ ರಾಜ್, ಕೂಡಾ ಅಧ್ಯಕ್ಷ ಎಂ.ಎಂ.ಚರಣ್, ನಿರ್ದೇಶಕ ವೈಶಾಕ್, ಪುಂಡಾರೀಕಾಕ್ಷ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಿಮ್ಮುಡಿಯಂಡ ಜಗದೀಶ್, ಮಡಿಕೇರಿ ಮುಡಾ ಅಧ್ಯಕ್ಷ ರಮೇಶ್ ಹೊಳ್ಳ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಪ್ಪಣ, ಬಿಜೆಪಿ ನಗರ ಉಪಾಧ್ಯಕ್ಷ ಬಿ.ಕೆ.ಜಗದೀಶ್, ನಗರ ಅಧ್ಯಕ್ಷ ಮನುಮಂಜುನಾಥ್, ಪೊನ್ನಚ್ಚನ್ನ ಮಧು, ಸನ್ನಿಪೂವಯ್ಯ, ಶಾಂತೇಂಡ ಕಿಶೋರ್ ದೇವರಾಜ್, ಬೋಪಯ್ಯ, ವಿಠಲ ಪಳಂಗಪ್ಪ,  ಮಕ್ಕಂದೂರು ವಿಎಸ್ಎಸ್ ನಿರ್ದೇಶಕ ಸುಧಾಕರ್, ಮಾಜಿ ಸದಸ್ಯೆ ವಿಮಲ, ಕುಕ್ಕೇರ ಜಯಚಿಣ್ಣಪ್ಪ, ಶಾಂತೆಯಂಡ ಸುಜನ್, ನಿವೃತ್ತ ಬಿಸಿಎಂ ಅಧಿಕಾರಿ ಎಚ್.ಡಿ.ಪುಟ್ಟರಾಜು ಕನ್ನಡ ಜಾಗೃತಿ ಸಮಿತಿ ಸದಸ್ಯ ಇ.ರಾಜು, ದೇಶಪ್ರೇಮಿ ಯುವಕ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ, ಕುಶಾಲನಗರ ಬಿಜೆಪಿ ಘಟಕದ ಅಧ್ಯಕ್ಷ ಉಮಾಶಂಕರ್ ಮುಖಂಡರಾದ ಜಿ.ಎಲ್.ನಾಗರಾಜು,ಎಂ.ವಿ.ನಾರಾಯಣ್, ತೇಕ್ಕಡ ಸಂತೋಷ ಕಾರ್ಯಪ್ಪ,  ಏಲೆಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕ ವಿನೋದ್ ಕುಮಾರ್ ಕುಂಬನಗೌಡು, ಸಿದ್ದಂಡ ಮಹೇಶ್ ,ಎನ್.ಎಸ್.ಸತ್ಯ,ಸುರೇಶ್ (ತಂಬಿ) ಚೌಕಿ ರಘುತಿಮ್ಮಯ್ಯ, ಮಕ್ಕಂದೂರು ಶಕ್ತಿ ಸಂಘ ಅಧ್ಯಕ್ಷ ಮಡ್ಲಂಡ ಲವ, ಅನಿಲ್ ಶೆಟ್ಟಿ, ಮಕ್ಕಂದೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಎನ್‌. ರಮೇಶ್‌, ಬಿಜೆ.ಪಿ. ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷರಾದ ಆನಂದ್‌ ರಘು, ತುಳುಸಾಹಿತ್ಯ ಅಕಾಡೆಮಿ ಸದಸ್ಯ ಮೊಗೇರ ರವಿ, ಅರುಣ್ ಕೂರ್ಗ ಹಾಗೂ ಅಸಂಖ್ಯ ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು.