Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಫಿ ಬೆಳೆಗಾರರಿಗೆ, ಕಾಫಿ ಗುಣಮಟ್ಟದ ಮಾನದಂಡಗಳ ಬಗ್ಗೆ ಅರಿವು


ಕಾಫಿ ಬೆಳೆಗಾರರಿಗೆ, ಕಾಫಿ ಗುಣಮಟ್ಟದ ಮಾನದಂಡಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಕೊಯ್ಲಿನ ನಂತರದ ಕಾಫಿಯಲ್ಲಿನ ತೇವಾಂಶ ಮತ್ತು ಉತ್ಪನ್ನದ ಗುಣಮಟ್ಟದ ಬಗ್ಗೆ ತಿಳಿಯಲು ಪರೀಕ್ಷಾ ಪರಿಕರ/ ಯಂತ್ರಗಳಾದ ಡಿಜಿಟಲ್ ತೇವಾಂಶ ಮೀಟರ್, ಹಲ್ಲರ್, ಪೀಲರ್ ಕಮ್ ಪಾಲಿಷರ್ಗಳನ್ನು ಉತ್ತರ ಹಾಗೂ ದಕ್ಷಿಣ ಕೊಡಗಿನ ಆಯ್ದ ಕಾಫಿ ಮಂಡಳಿಯ ಸಂಪರ್ಕಾಧಿಕಾರಿಗಳ ಕಚೇರಿಗಳಲ್ಲಿ (ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಹಾಗೂ ಗೋಣಿಕೊಪ್ಪ) ಅಳವಡಿಸಲಾಗಿದೆ.

ಆದ್ದರಿಂದ ಆಸಕ್ತ ಕಾಫಿ ಬೆಳೆಗಾರರು, ತಮ್ಮ ಕಾಫಿಯ ತೇವಾಂಶ ಮತ್ತು ಉತ್ಪನ್ನದ ಗುಣಮಟ್ಟದ ಬಗ್ಗೆ ಪರೀಕ್ಷಿಸಲು ಇಚ್ಛಿಸುವವರು, ಷರತ್ತಿಗನುಗುಣವಾಗಿ ತಮ್ಮ ಕಾಫಿ ಮಾದರಿಯ ಫಲಿತಾಂಶದ ವರದಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿಗಳನ್ನು ಸಂರ್ಪಕಿಸಬಹುದು ಎಂದು ಮಡಿಕೇರಿ ಕಾಫಿ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.