Header Ads Widget

ಸರ್ಚ್ ಕೂರ್ಗ್ ಮೀಡಿಯ

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಜಿಲ್ಲಾ ಸಂಯೋಜಕರಾಗಿ ವಿಲ್‍ಫ್ರೆಡ್ ಕ್ರಾಸ್ತ ನೇಮಕ


ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆ.ಜೆ.ವಿ.ಎಸ್) ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ವಿಜ್ಞಾನ ದಿನಾಚರಣೆ ಮತ್ತು ಸ್ಪರ್ಧೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಸಂತ ಮೈಕಲರ ಶಾಲೆಯ ಶಿಕ್ಷಕ ವಿಲ್‍ಫ್ರೆಡ್ ಕ್ರಾಸ್ತ ಅವರನ್ನು ಜಿಲ್ಲಾ ಸಂಯೋಜಕರನ್ನಾಗಿ ಸಮಿತಿ ನೇಮಕ ಮಾಡಿದೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿಕೊಳ್ಳಲು ಫೆ.10 ಕೊನೆಯ ದಿನವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಸಂಯೋಜಕರ ಮೊ.ಸಂ : 9448773078 ನ್ನು ಸಂಪರ್ಕಿಸಬಹುದಾಗಿದೆ. ಫೆ.14ಕ್ಕೆ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರು ಫೆ.21 ರಂದು ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭ ಫೆ.28 ರಂದು ನಡೆಯಲಿದೆ ಎಂದು ಜ್ಞಾನ ವಿಜ್ಞಾನ ಸಮಿತಿ ತಿಳಿಸಿದೆ.



Search Coorg Media: Coorg's Largest Online Media Network