Header Ads Widget

Responsive Advertisement

ಸಿದ್ದಾಪುರದಲ್ಲಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ


ಭಾರತದಾದ್ಯಂತ ಇಂದು ಬೆಳಗ್ಗೆ  ಏಕಕಾಲದಲ್ಲಿ ಆರು ಲಕ್ಷಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ನಡೆದ ' ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ'ದ ಅಂಗವಾಗಿ, ಸಿದ್ದಾಪುರದ ಶ್ರೀರಾಮ ಮಂದಿರದಲ್ಲಿ ಬೆಳಗ್ಗೆ 9 ಗಂಟೆಗೆ ನಿಧಿ ಸಂಗ್ರಹದ ಕೂಪನ್ ಮತ್ತು ಸಂಬಂಧಿಸಿದ ಸಾಹಿತ್ಯಗಳಿಗೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿದ್ದಾಪುರ ಬಿಜೆಪಿಯ ಶಕ್ತಿಕೇಂದ್ರ ಪ್ರಮುಖರಾದ ಪ್ರವೀಣ್ ರವರು, ಶ್ರೀರಾಮ ಮಂದಿರ ಎಂಬುದು ಹಿಂದೂಗಳ ಹೃದಯದ ಮಂದಿರ, ಈ ಮಂದಿರ ನಿರ್ಮಾಣಕ್ಕೆ ಪ್ರತೀ ಹಿಂದೂವಿನ ಮನೆಯಿಂದ ಹಣ ಸಂಗ್ರಹ ಆಗಬೇಕು, ಆ ನಿಟ್ಟಿನಲ್ಲಿ ಇಂದಿನಿಂದಲೇ ಸಿದ್ದಾಪುರ ನಗರದಾದ್ಯಂತ ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರ ಕಟ್ಟುವುದಕ್ಕಾಗಿ ನಿಧಿ ಸಂಗ್ರಹಕ್ಕೆ ನಾವು ಕಾರ್ಯಪ್ರವೃತರಾಗಬೇಕು ಅಂಥ ಕಾರ್ಯಕ್ರಮದ ಸ್ವರೂಪವನ್ನು ತಿಳಿಸಿದರು.

ಮತ್ತೊಬ್ಬ ಯುವಮುಖಂಡರಾದ ಸುರೇಶ್ ನೆಲ್ಲಿಕ್ಕಲ್ ಮಾತನಾಡಿ, ಎಷ್ಟೋ ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರಕ್ಕೆ ಇವತ್ತು ಮುಕ್ತಿ ದೊರೆತಿದ್ದು, ಶ್ರೀರಾಮ ಮಂದಿರ ಕಟ್ಟುವ ಸುವರ್ಣಯುಗ ನಮ್ಮದಾಗಿದೆ, ಆದರಿಂದ ನಾವೆಲ್ಲರೂ ಕೈ ಜೋಡಿಸಬೇಕೆಂದು ಕರೆ ಕೊಟ್ಟರು.

ಈ ಸಂಧರ್ಭದಲ್ಲಿ ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದ ಹಿರಿಯರಾದ ನಾರಾಯಣ್ ರವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು, ಈ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ ಭಜರಂಗದಳದ ಸಿದ್ದಾಪುರ ನಗರ ಸಂಚಾಲಕ ರದೀಶ್, ಹಿಂದೂ ಜಾಗರಣ ವೇದಿಕೆಯ ನಗರ ಅಧ್ಯಕ್ಷ ರಾಜ, ರಾ.ಸ್ವ.ಸೇವಕ ಸಂಘದ ಗೌತಮ್ ಗೋಪಿ, ಬಿಜೆಪಿ ಮುಖಂಡರಾದ ಅನಿಲ್ ಶೆಟ್ಟಿ, ಚುಮ್ಮಿ ಪೂವಯ್ಯ, ಪಂಚಾಯತಿ ಸದಸ್ಯರಾದ ಆನಂದ್, ರೀನಾ ತುಳಸಿಗಣಪತಿ, ಅನಿಲ್, ಕಾರ್ಯಕರ್ತರಾದ ರಾಜೇಂದ್ರಸಿಂಗ್, ದೇವಕಿ, ಸುರೇಶ್, ಸುಜಯ್, ಪ್ರಕಾಶ್ ಮೊದಲಾದವರು ಹಾಜರಿದ್ದರು.